ETV Bharat / state

ಪೌರಕಾರ್ಮಿಕರ ಜೀವದ ಜೊತೆ ಬಿಬಿಎಂಪಿ ಚೆಲ್ಲಾಟ: ಕಂಟೇನ್​ಮೆಂಟ್​ ಝೋನ್​ನಲ್ಲಿ ಕನಿಷ್ಠ ಸೌಲಭ್ಯ ನೀಡದ ಆರೋಪ

author img

By

Published : May 18, 2020, 12:04 PM IST

ಶಿವಾಜಿನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ವಲಯ ಕಂಟೇನ್​ಮೆಂಟ್ ಝೋನ್​ ಆಗಿ ಹದಿನೈದು ದಿನ ಕಳೆದಿದೆ. ಇಲ್ಲಿಯವರೆಗೂ ಈ ವಲಯದಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರ ಸುರಕ್ಷತೆಗೆ ಕನಿಷ್ಠ ಸೌಲಭ್ಯ ನೀಡದೆ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

BBMP not given PPP Kit to Civil Workers at Bangalore
ಪೌರಕಾರ್ಮಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಬಿಬಿಎಂಪಿ

ಬೆಂಗಳೂರು: ಶಿವಾಜಿನಗರದಲ್ಲಿ 44 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಈ ಮಧ್ಯೆ ಇಲ್ಲಿ ಯಾವುದೇ ಸುರಕ್ಷಿತ ಸೌಲಭ್ಯಗಳಿಲ್ಲದೆ ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ದೃಶ್ಯಗಳು ಈಟಿವಿ ಭಾರತಕ್ಕೆ ಲಭ್ಯವಾಗಿವೆ.

ಪೌರಕಾರ್ಮಿಕರಿಗೆ ಜೊತೆ ಚೆಲ್ಲಾಟ ಬಿಬಿಎಂಪಿ

ಶಿವಾಜಿನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ವಲಯ ಕಂಟೇನ್​ಮೆಂಟ್ ಝೋನ್​ ಆಗಿ ಹದಿನೈದು ದಿನ ಕಳೆದಿದೆ. ಇಲ್ಲಿಯವರೆಗೂ ಈ ವಲಯದಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರ ಸುರಕ್ಷತೆಗೆ ಕನಿಷ್ಠ ಸೌಲಭ್ಯ ನೀಡದೆ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ.

ಕಂಟೈನ್​​ಮೆಂಟ್ ಝೋನ್​ನಲ್ಲಿರುವ ಪ್ರತಿ ಮನೆಗಳಿಗೆ ಹೋಗಿ ಇವರು ಸಾರ್ವಜನಿಕರು ಕೊಡುವ ಕಸವನ್ನು ಬರಿಗೈಯಲ್ಲಿ ತೆಗೆದುಕೊಂಡು ಬರುತ್ತಿದ್ದಾರೆ. ಅಲ್ಲಿದೆ ಅಲ್ಲಿ ಬಿದ್ದಿರುವ ಕಸದ ರಾಶಿ, ಬ್ಲಾಕ್​​ಸ್ಪಾಟ್​​ನಲ್ಲಿ ಕೂಡಾ ಪಿಪಿಇ ಕಿಟ್ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ತಾವು ಅನುಭವಿಸುತ್ತಿರುವ ಸಮಸ್ಯೆಗನ್ನು ಹೇಳಿಕೊಳ್ಳಲಾಗದೆ ಪೌರಕಾರ್ಮಿಕರು ಒದ್ದಾಡುತ್ತಿದ್ದು, ಈ ಕುರಿತು ದೂರು ನೀಡದೆ ಕೆಲಸ ಮಾಡುವಂತೆ ಸ್ಥಳೀಯ ಆರೋಗ್ಯಾಧಿಕಾರಿಗಳು ಇವರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಗ್ಲೌಸ್, ಮಾಸ್ಕ್, ಕಿಟ್ ಕೊಡದೆ ನಮ್ಮ ಬಳಿ ಕೆಲಸ ಮಾಡಿಸುತ್ತಿದ್ದಾರೆ. ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಈ ಜಾಗಕ್ಕೆ ಬಂದು ಕೆಲಸ ಮಾಡುವುದಕ್ಕೆ ನಮಗೆ ಭಯವಾಗುತ್ತಿದೆ. ಆದರೂ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದೇವೆ. ಸ್ಥಳಕ್ಕೆ ಯಾವುದೇ ಹೆಲ್ತ್ ಇನ್ಸ್​ಪೆಕ್ಟರ್ ಸ್ಥಳಕ್ಕೆ ಬಂದು ಸಮಸ್ಯೆ ಕೇಳುತ್ತಿಲ್ಲ. ನಾವು ಕೆಲಸ ಮಾಡದಿದ್ದರೆ ಮೇಸ್ತ್ರಿಗಳು ರಜೆ ಹಾಕಿ ಕೆಲಸದಿಂದ ತೆಗೆದು ಹಾಕುತ್ತೇವೆಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಪೌರ ಕಾರ್ಮಿಕರು ಈಟಿವಿ ಭಾರತದೊಂದಿಗೆ ಅಳಲನ್ನು ತೋಡಿಕೊಂಡರು.

ಈ ವಾರ್ಡ್​ನ ಸ್ಥಳೀಯ ಆರೋಗ್ಯಾಧಿಕಾರಿಯಾಗಿರುವ ವೆಂಕಟೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಾರನಾಥ್ ಇತ್ತ ಕಡೆ ಮುಖವೇ ಹಾಕಿಲ್ಲ. ಎಲ್ಲಾ ಸೌಲಭ್ಯ ಕೊಡಲು ಬಿಲ್ ಮಾಡಿಸಿಕೊಂಡರೂ ಸುರಕ್ಷತಾ ಕಿಟ್​​ಗಳು ಇನ್ನೂ ತಲುಪಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಪೂರ್ವ ವಿಭಾಗದ ಜಂಟಿ ಆಯುಕ್ತರಾದ ಪಲ್ಲವಿಯವರನ್ನು ಕೇಳಿದರೆ, ಕಂಟೇನ್​​ಮೆಂಟ್ ಝೋನ್​​ಗೆ ಪಿಪಿಇ ಕಿಟ್ ಇಲ್ಲದೆ ಪ್ರವೇಶಿಸಬೇಡಿ ಎಂದು ಹೇಳಲಾಗಿದೆ. ಪಿಪಿಇ ಕಿಟ್ ಕೊಟ್ಟಿಲ್ಲದಿದ್ದರೆ ಇದು ತಪ್ಪು, ನಿಯಮ ಉಲ್ಲಂಘನೆಯಾಗುತ್ತದೆ ಎಂದು ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್ ಅವರು ಹೇಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.