ETV Bharat / state

ಮಳೆ ಪರಿಣಾಮ ಎದುರಿಸಲು ಸಜ್ಜಾದ ಬಿಬಿಎಂಪಿ: ರಸ್ತೆ ಗುಂಡಿ ಮುಚ್ಚಲು ನ. 10 ಡೆಡ್​​​ ಲೈನ್​​

ಬೆಂಗಳೂರು ಮಹಾನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ಮೇಯರ್​ ಗೌತಮ್​ ಕುಮಾರ್​ ಅಧಿಕಾರಗಳ ಜೊತೆ ತುರ್ತು ಸಭೆ ಕರೆದು. ಪ್ರವಾಹ ಪರಿಸ್ಥಿತಿ ಒದಗಿ ಬಂದರೆ ಎದುರಿಸಲು ಸನ್ನದ್ಧರಾಗುವಂತೆ ಸೂಚನೆ ನೀಡಿದರು.

ಮಳೆ ಪರಿಣಾಮ ಎದುರಿಸಲು ಸಜ್ಜಾದ ಬಿಬಿಎಂಪಿ
author img

By

Published : Oct 22, 2019, 10:14 PM IST

ಬೆಂಗಳೂರು: ಸಿಲಿಕಾನ್​ ಸಿಟಿನಲ್ಲಿ ನಿರಂತರ ಮಳೆ ಹಿನ್ನೆಲೆ ಮೇಯರ್ ಗೌತಮ್ ಕುಮಾರ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು.

ಸಭೆಯಲ್ಲಿ ಕಂಟ್ರೋಲ್ ರೂಂ ಸಿಬ್ಬಂದಿಗೆ ಮುಂದಿನ‌ ಒಂದು ವಾರ ರಜೆ ತೆಗೆದುಕೊಳ್ಳದೆ ಕೆಲಸ ಮಾಡಲು ಸೂಚಿಸಲಾಗಿದೆ. 8 ವಲಯಗಳ ಜಂಟಿ ಆಯುಕ್ತರಿಗೆ ವಲಯಗಳ ಜವಾಬ್ದಾರಿ ನೀಡಲಾಗಿದೆ. 24 ಗಂಟೆಗಳ ಕಾಲ ಕಂಟ್ರೋಲ್ ರೂಂ ಕೆಲಸ ಮಾಡಲಿದೆ ಎಂದು ಆಯುಕ್ತರಾದ ಅನಿಲ್ ಕುಮಾರ್ ತಿಳಿಸಿದರು.

ಇನ್ನು ಜಂಟಿ ಆಯುಕ್ತರು, ಮುಖ್ಯ ಅಭಿಯಂತರರಿಗೆ ಕೆರೆಗಳ ಸ್ಥಿತಿಯನ್ನ ಪರಿಶೀಲಿಸಲು ಸೂಚಿಸಿದ್ದು, ಕೆರೆ ಕಟ್ಟೆ ಒಡೆಯುವ ಜಾಗಗಳನ್ನು ಗುರುತಿಸಿ ಸರಿಪಡಿಸಲು ಹೇಳಲಾಗಿದೆ. ಕೆರೆಗಳ ಒಳಹರಿವು, ಹೊರಹರಿವು, ಕೆರೆಗಳ ನೀರು ಸಂಗ್ರಹ ಪ್ರಮಾಣದ ಬಗ್ಗೆಯೂ ಅಧ್ಯಯನ ಮಾಡಿ, ಅಗತ್ಯ ಸಲಕರಣೆ ಅಳವಡಿಸಲು ತಿಳಿಸಲಾಗಿದೆ. ಅಗ್ನಿಶಾಮಕ ದಳ, ಬೆಸ್ಕಾಂ ಸೇರಿದಂತೆ ಎಲ್ಲಾ ಇಲಾಖೆಗಳು ಮಳೆ ಸಂಬಂಧಿತ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಬಗ್ಗೆ ಚರ್ಚೆಯಾಗಿದೆ. ಕಂಟ್ರೋಲ್ ರೂಂನಲ್ಲಿ ಪೊಲೀಸ್ ಇಲಾಖೆ, ರಕ್ಷಣಾ ಸಿಬ್ಬಂದಿ ನಂಬರ್ ಸಹ ನೀಡಲಾಗಿದೆ. ತಗ್ಗು ಪ್ರದೇಶಗಳಲ್ಲಿರೋ ಜನರನ್ನು ಅಗತ್ಯ ಬಿದ್ದಾಗ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ ಬಗ್ಗೆ ಚಿಂತಿಸಲಾಗಿದೆ.

ಮಳೆ ಪರಿಣಾಮ ಎದುರಿಸಲು ಸಜ್ಜಾದ ಬಿಬಿಎಂಪಿ

ಇನ್ನು 850 ಕಿ.ಮೀ. ರಾಜಕಾಲುವೆ ನಗರದಲ್ಲಿದೆ. ರಾಜಕಾಲುವೆ ತಡೆಗೋಡೆ ಬೀಳುವ ಸ್ಥಿತಿಯಲ್ಲಿದ್ದರೆ ಅಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ತಡೆಗೋಡೆ ದುಸ್ಥಿತಿ, ಪುನರ್ ನಿರ್ಮಾಣಕ್ಕೂ ಸೂಚನೆ ನೀಡಲಾಗಿದೆ. 184 ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದ್ದು, ಆ ಪ್ರದೇಶಗಳ ಬಗ್ಗೆ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.

ಗುಂಡಿ‌ ಮುಚ್ಚಲು ನವೆಂಬರ್ 10 ಡೆಡ್ ಲೈನ್

ನವೆಂಬರ್ ಹತ್ತರೊಳಗೆ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಆಯಾ ಸ್ಥಳೀಯ ಅಧಿಕಾರಿ, ಅಭಿಯಂತರರೇ ಜವಾಬ್ದಾರಿಯಾಗಿರುತ್ತಾರೆ. ಬಿಬಿಎಂಪಿ ಎಂಜಿನಿಯರ್​​ಗಳು ದ್ವಿಚಕ್ರ ವಾಹನಗಳಲ್ಲಿ ಓಡಾಡಿದರೆ ಈ ಪರಿಸ್ಥಿತಿ ಗೊತ್ತಾಗುತ್ತೆ. ಮಳೆ ಮಧ್ಯೆ ಗುಂಡಿ ಮುಚ್ಚಲು ಕೋಲ್ಡ್ ಟಾರ್ ಬಳಸಿದರೆ ಯಾವುದೇ ಸಮಸ್ಯೆಯಾಗಲ್ಲ. ನಗರದಲ್ಲಿ ಅಂಡರ್ ಪಾಸ್ ಮೇಲ್ಸೇತುವೆ ಮಾಡಲು ಚಿಂತಿಸಲಾಗುತ್ತಿದೆ ಎಂದು ಆಯುಕ್ತ ಅನಿಲ್ ಕುಮಾರ್ ತಿಳಿಸಿದರು.

Intro:ಮಳೆ ಪರಿಣಾಮ ಎದುರಿಸಲು ಸಜ್ಜಾದ ಬಿಬಿಎಂಪಿ- ರಸ್ತೆಗುಂಡಿ ಮುಚ್ಚಲು ನ.೧೦ ಡೆಡ್ ಲೈನ್

ಬೆಂಗಳೂರು- ಬೆಂಗಳೂರಿನಲ್ಲಿ ನಿರಂತರ ಮಳೆ ಹಿನ್ನೆಲೆ ಮೇಯರ್ ಗೌತಮ್ ಕುಮಾರ್, ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು.
ಮಳೆ ಪರಿಣಾಮ ಎದುರಿಸಲು ಸಜ್ಜಾಗುವ ಬಗ್ಗೆ ಸಭೆ ಕರೆಯಲಾಗಿತ್ತು. ಕಂಟ್ರೋಲ್ ರೂಂ ಸಿಬ್ಬಂದಿಗಳಿಗೆ ಮುಂದಿನ‌ ಒಂದು ವಾರ ರಜೆ ತೆಗೆದುಕೊಳ್ಳದೆ ಕೆಲಸ ಮಾಡಲು ಸೂಚಿಸಲಾಗಿದೆ. 8 ವಲಯಗಳ ಜಂಟಿ ಆಯುಕ್ತರಿಗೆ ವಲಯಗಳ ಜವಾಬ್ದಾರಿ ನೀಡಲಾಗಿದೆ. 24 ಗಂಟೆಗಳ ಕಾಲ ಕಂಟ್ರೋಲ್ ರೂಂ ಕೆಲಸ ಮಾಡಲಿದೆ ಎಂದು ಆಯುಕ್ತರಾದ ಅನಿಲ್ ಕುಮಾರ್ ತಿಳಿಸಿದರು.
ಇನ್ನು ಜಂಟಿ ಆಯುಕ್ತರು , ಮುಖ್ಯ ಅಭಿಯಂತರರಿಗೆ ಕೆರೆಗಳ ಸ್ಥಿತಿಯನ್ನ ಪರಿಶೀಲಿಸಲು ಸೂಚಿಸಲಾಗಿದ್ದು,
ಕೆರೆ ಕಟ್ಟೆ ಒಡೆಯುವ ಜಾಗಗಳನ್ನು ಗುರುತಿಸಿ ,ಸರಿಪಡಿಸಲು ಸೂಚಿಸಲಾಗಿದೆ.
ಕೆರೆಗಳ ಒಳಹರಿವು ,ಹೊರ ಹರಿವು ,ಕೆರೆಗಳ ನೀರು ಸಂಗ್ರಹಣ ಪ್ರಮಾಣದ ಬಗ್ಗೆಯೂ ಅಧ್ಯಯನ ಮಾಡಿ ,ಅಗತ್ಯ ಸಲಕರಣೆ ಅಳವಡಿಸಲು ತಿಳಿಸಲಾಗಿದೆ. ಅಗ್ನಿಶಾಮಕ ದಳ, ಬೆಸ್ಕಾಂ ಎಲ್ಲ ಇಲಾಖೆಗಳು ಮಳೆ ಸಂಬಂಧಿತ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಬಗ್ಗೆ ಚರ್ಚೆಯಾಗಿದೆ.ಕಂಟ್ರೋಲ್ ರೂಂ ನಲ್ಲಿ ಪೊಲೀಸ್ ಇಲಾಖೆ, ರಕ್ಷಣಾ ಸಿಬ್ಬಂದಿ ನಂಬರ್ ಸಹ ನೀಡಲಾಗಿದೆ. ತಗ್ಗು ಪ್ರದೇಶಗಳಲ್ಲಿರೋ ಜನರನ್ನು ಅಗತ್ಯ ಬಿದ್ದಾಗ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ ಬಗ್ಗೆ ಚಿಂತಿಸಲಾಗಿದೆ. ಇನ್ನು 850 ಕಿ.ಮೀ ರಾಜಕಾಲುವೆ ನಗರದಲ್ಲಿದೆ.
ರಾಜಕಾಲುವೆ ತಡೆಗೋಡೆ ಬೀಳುವ ಸ್ಥಿತಿಯಲ್ಲಿದ್ರೆ ಅಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ತಡೆಗೋಡೆ ದುಸ್ಥಿತಿ, ಪುನರ್ ನಿರ್ಮಾಣಕ್ಕೂ ಸೂಚನೆ
184 ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಆ ಪ್ರದೇಶಗಳ ಬಗ್ಗೆ ಗಮನಹರಿಸಬೇಕು ಎಂದು ಆಯುಕ್ತರು ಸೂಚಿಸಿದರು.

ಗುಂಡಿ‌ ಮುಚ್ಚಲು ನವೆಂಬರ್. ೧೦ ಡೆಡ್ ಲೈನ್

ನವೆಂಬರ್ ಹತ್ತರೊಳಗೆ ರಸ್ತೆಗುಂಡಿಗಳನ್ನು ಮುಚ್ಚಬೇಕು. ಆಯಾ ಸ್ಥಳೀಯ ಅಧಿಕಾರಿ, ಅಭಿಯಂತರರೇ ಜವಾಬ್ದಾರಿಯಾಗಿರುತ್ತಾರೆ. ಬಿಬಿಎಂಪಿ ಇಂಜಿನಿಯರ್ ಗಳು ದ್ವಿಚಕ್ರ ವಾಹನಗಳಲ್ಲಿ ಓಡಾಡಿದ್ರೆ ಪರಿಸ್ಥಿತಿ ಗೊತ್ತಾಗಲಿದೆ ಎಂದು ಮೇಯರ್ ಹೇಳಿದರು.
ಮಳೆ ಮಧ್ಯೆ ಗುಂಡಿ ಮುಚ್ಚಲು ಕೋಲ್ಡ್ ಟಾರ್ ಬಳಸಿದ್ರೆ ಯಾವ್ದೇ ಸಮಸ್ಯೆಯಾಗಲ್ಲ. ನಗರದ ಅಂಡರ್ ಪಾಸ್ ಗಳಲ್ಲಿ ಹೆಚ್ಚು ಸಮಸ್ಯೆ ಆಗುತ್ತಿದೆ. ಹಾಗಾಗಿ ಇನ್ನ್ಮುಂದೆ ಅಂಡರ್ ಪಾಸ್ ಗಳ ಬದಲು ಮೇಲ್ಸೇತುವೆ ಮಾಡಲು ಚಿಂತಿಸಲಾಗುತ್ತಿದೆ ಎಂದು ಆಯುಕ್ತರಾದ
ಅನಿಲ್ ಕುಮಾರ್ ತಿಳಿಸಿದರು.

ಸೌಮ್ಯಶ್ರೀ
Kn_bng_03_mayor_PC_7202707
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.