ETV Bharat / state

ಬೆಂಗಳೂರಿನ ವಾರ್ಡ್​ಗಳಲ್ಲಿ ಬಿಬಿಎಂಪಿ ಸ್ವಚ್ಛತಾ ಅಭಿಯಾನ

author img

By

Published : Sep 8, 2019, 8:14 AM IST

ನೂತನ ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ಅವರ ನಿರ್ದೇಶನದಂತೆ ನಗರದಲ್ಲಿರುವ ವಾರ್ಡ್​ಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಯಲಹಂಕದ ಕೊಡಿಗೆಹಳ್ಳಿ, ವಿದ್ಯಾರಣ್ಯಪುರ, ನಂದಿನಿ ಲೇಔಟ್, ರಾಮಮಂದಿರ, ಆಡುಗೋಡಿ, ಕೋರಮಂಗಲ, ಈಜೀಪುರ, ಬಾಗಲಗುಂಟೆ, ಪುಟ್ಟೇನಹಳ್ಳಿ, ಉತ್ತರಹಳ್ಳಿ, ಬೆಳ್ಳಂದೂರು ಸೇರಿದಂತೆ ಒಟ್ಟು 29 ವಾರ್ಡ್​ಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

cleanup campaign, ಸ್ವಚ್ಛತಾ ಅಭಿಯಾನ

ಬೆಂಗಳೂರು: ಬಿಬಿಎಂಪಿ ನೂತನ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ಅವರ ನಿರ್ದೇಶನದಂತೆ ನಗರದ ಎಂಟು ವಯಲಗಳಲ್ಲಿರುವ ವಾರ್ಡ್​ಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಯಲಹಂಕದ ಕೊಡಿಗೆಹಳ್ಳಿ, ವಿದ್ಯಾರಣ್ಯಪುರ, ನಂದಿನಿ ಲೇಔಟ್, ರಾಮಮಂದಿರ, ಆಡುಗೋಡಿ, ಕೋರಮಂಗಲ, ಈಜೀಪುರ, ಬಾಗಲಗುಂಟೆ, ಪುಟ್ಟೇನಹಳ್ಳಿ, ಉತ್ತರಹಳ್ಳಿ, ಬೆಳ್ಳಂದೂರು ಸೇರಿದಂತೆ ಒಟ್ಟು 29 ವಾರ್ಡ್​ಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕೇವಲ ಕಸ ನಿರ್ವಹಣೆ ವಿಭಾಗ ಮಾತ್ರವಲ್ಲದೆ ಇಂಜಿನಿಯರ್ ವಿಭಾಗ, ರಾಜಕಾಲುವೆ ನಿರ್ವಹಣೆ ಸೇರಿದಂತೆ ನಗರಾದ್ಯಂತ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ವಿಭಾಗದ ಅಧಿಕಾರಿ ನೌಕರರೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಯುಕ್ತರು ಸೂಚಿಸಿದ್ದರು. ವಾರ್ಡ್​ನ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಿಂದ ಈ ಕ್ರಮಕ್ಕೆ ಪಾಲಿಕೆ ಮುಂದಾಗಿದ್ದು, ಪಾಲಿಕೆ ಜೊತೆ ಸ್ಥಳೀಯರು, ಸಂಘ ಸಂಸ್ಥೆಯವರು ಕೈ ಜೋಡಿಸಿದ್ದರು.

ರಸ್ತೆಗಳ ಸ್ವಚ್ಛತೆ, ಚರಂಡಿಗಳಲ್ಲಿ ಹೂಳೆತ್ತುವುದು, ಪಾದಚಾರಿ ಮಾರ್ಗದಲ್ಲಿ ಬಿದ್ದಿರುವ ಅನುಪಯುಕ್ತ ಕೇಬಲ್ಸ್, ಪೈಪ್​ಗಳ ತೆರವುಗೊಳಿಸಲಾಯಿತು. ಅಲ್ಲದೆ, ಕುಸಿದು ಬಿದ್ದಿರುವ ಚಪ್ಪಡಿಗಳ ದುರಸ್ತಿ ಕಾರ್ಯ ಹಾಗೂ ಪಾದಚಾರಿ ಮಾರ್ಗದಲ್ಲಿ ಶಾಶ್ವತವಾಗಿ ಅಳವಡಿಸಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸುವುದು, ಕೆರೆ ಸ್ವಚ್ಛತೆ, ರಸ್ತೆಗುಂಡಿ ದುರಸ್ತಿ, ಬ್ಲಾಕ್ ಸ್ಪಾಟ್ ತೆರವು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಸ್ವಚ್ಛತಾ ಕಾರ್ಯ ನಡೆಯುವ ವೇಳೆ ಪಾಲಿಕೆ ಆಯುಕ್ತರು ಹಾಗೂ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಮಲಿಂಗಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ರು. ಇದೇ ವೇಳೆ ಪಾಲಿಕೆ ಆಯುಕ್ತರು ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ಬಳಸದಂತೆ ಸೂಚಿಸಿದರು. ಬಳಿಕ ಕೋರಮಂಗಲ ವಾರ್ಡ್​ನಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸಿದರು.

Intro:ಪ್ರತೀ ಶನಿವಾರ ನಗರದ ವಾರ್ಡ್ ಗಳಲ್ಲಿ ಬಿಬಿಎಂಪಿ ಸ್ವಚ್ಛತಾ ಅಭಿಯಾನ
ಬೆಂಗಳೂರು- ನೂತನ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ನಿರ್ದೇಶನದಂತೆ ಪ್ರತೀ ಶನಿವಾರ ನಗರದ ಆಯ್ದ ವಾರ್ಡ್ ಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ.
ಎಂಟು ವಲಯಗಳ 18 ವಾರ್ಡ್ ಗಳಲ್ಲಿ ಕಳೆದ ಶನಿವಾರ ನಡೆಸಲಾಗಿತ್ತು. ಇಂದು ಯಲಹಂಕದ ಕೊಡಿಗೆಹಳ್ಳಿ, ವಿದ್ಯಾರಣ್ಯಪುರ, ನಂದಿನಿ ಲೇಔಟ್, ರಾಮಮಂದಿರ, ಆಡುಗೋಡಿ, ಕೋರಮಂಗಲ, ಈಜೀಪುರ, ಬಾಗಲಗುಂಟೆ, ಪುಟ್ಟೇನಹಳ್ಳಿ, ಉತ್ತರಹಳ್ಳಿ, ಬೆಳ್ಳಂದೂರು ಸೇರಿದಂತೆ ಒಟ್ಟು 29 ವಾರ್ಡ್ ಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ. ಕೇವಲ ಕಸ ನಿರ್ವಹಣೆ ವಿಭಾಗ ಮಾತ್ರವಲ್ಲದೆ, ಇಂಜಿನಿಯರ್ ವಿಭಾಗ, ರಾಜಕಾಲುವೆ ನಿರ್ವಹಣೆ ವಿಭಾಗದ ಅಧಿಕಾರಿ ನೌಕರರೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಯುಕ್ತರು ಸೂಚಿಸಿದ್ದರು. ವಾರ್ಡ್ ನ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಿಂದ ಈ ಕ್ರಮಕ್ಕೆ ಪಾಲಿಕೆ ಮುಂದಾಗಿದೆ. ಪಾಲಿಕೆ ಜೊತೆ ಸ್ಥಳೀಯರು, ಸಂಘ ಸಂಸ್ಥೆಗಳು ಕೂಡಾ ಹಲವೆಡೆ ಕೈಜೋಡಿಸಿದ್ದಾರೆ.
ರಸ್ತೆಗಳ ಸ್ವಚ್ಛತೆ, ಚರಂಡಿಗಳಲ್ಲಿ ಹೂಳೆತ್ತುವುದು, ಪಾದಚಾರಿ ಮಾರ್ಗದಲ್ಲಿ ಬಿದ್ದಿರುವ ಅನುಪಯುಕ್ತ ಕೇಬಲ್ಸ್, ಪೈಪ್ಸ್ಗಳ ತೆರವು, ಕುಸಿದು ಬಿದ್ದಿರುವ ಚಪ್ಪಡಿ(ಸ್ಲ್ಯಾಬ್‌ಗಳು)ಗಳ ದುರಸ್ತಿ ಕಾರ್ಯ ಹಾಗೂ ಪಾದಚಾರಿ ಮಾರ್ಗದಲ್ಲಿ ಶಾಶ್ವತವಾಗಿ ಅಳವಡಿಸಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸುವುದು, ಕೆರೆ ಸ್ವಚ್ಛತೆ, ರಸ್ತೆಗುಂಡಿ ದುರಸ್ತಿ, ಬ್ಲಾಕ್ ಸ್ಪಾಟ್(ಕಸ ಸುರಿಯುವ ಸ್ಥಳ) ತೆರವು ಸೇರಿದಂತೆ ಇನ್ನಿತರ ತೀವ್ರ ಸ್ವಚ್ಛತಾ ಕಾರ್ಯ ನಡೆಯಿತು.
ಮಡಿವಾಳ ವಾರ್ಡ್ನಲ್ಲಿ ತೀವ್ರ ಸ್ವಚ್ಛತಾ ಕಾರ್ಯ ನಡೆಯುವ ವೇಳೆ ಪಾಲಿಕೆ ಮಾನ್ಯ ಆಯುಕ್ತರು ಹಾಗೂ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಮಲಿಂಗಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು. ಇದೇ ವೇಳೆ ಪಾಲಿಕೆ ಆಯುಕ್ತರು ವ್ಯಾಪಾರಸ್ತರಿಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚನೆ ನೀಡಿದರು. ಆ ಬಳಿಕ ಕೋರಮಂಗಲ ವಾರ್ಡ್ನಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸಿದರು.

ಸೌಮ್ಯಶ್ರೀ
Kn_bng_04_ward_cleaning_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.