ಬೆಂಗಳೂರು: ಕೋವಿಡ್ ಪ್ರಕರಣಗಳು, ಸಾವಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ನಿಟ್ಟುಸಿರು ಬಿಡುವಾಗಲೇ ಬಿಬಿಎಂಪಿ (BBMP) ಹೊಸ ಎಚ್ಚರಿಕೆ ನೀಡಿ ಆತಂಕ ಮೂಡಿಸಿದೆ. ವಿದೇಶಗಳಲ್ಲಿ ಲಸಿಕೆ ಪಡೆದಿದ್ದರೂ, ಹೊಸದಾಗಿ ಕೊರೊನಾ ಪ್ರಕರಣಗಳು ಪತ್ತೆಯಾಗ್ತಿವೆ ಎಂದು ಬಿಬಿಎಂಪಿ ಕಮಿಷನರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಗರದಲ್ಲಿ ಕೋವಿಡ್ ಲಸಿಕೆಯ ಉತ್ತಮ ಫಲಿತಾಂಶ ನೋಡಿದ್ದೇವೆ. ಇದರಿಂದಾಗಿ ಸದ್ಯ ಕೋವಿಡ್ ಕಡಿಮೆಯಾಗಿದೆ. ಆದರೆ ಬೇರೆ ಬೇರೆ ದೇಶಗಳಲ್ಲಿ ಲಸಿಕೆ ಪಡೆದಿದ್ದರೂ, ಹೊಸದಾಗಿ ಕೋವಿಡ್ ಸ್ಫೋಟ ಆಗ್ತಿರುವುದು ನೋಡುತ್ತಿದ್ದೇವೆ. ಹೀಗಾಗಿ ನಮ್ಮಲ್ಲೂ ಎಚ್ಚರ ತಪ್ಪದೆ ಜನ ಮಾಸ್ಕ್ ಧರಿಸಬೇಕು, ಲಸಿಕೆ ಈಗಲೂ ನೀಡಲಾಗುತ್ತಿದ್ದು ಎಲ್ಲರೂ ಪಡೆಯಬೇಕು ಎಂದರು. ಈವರೆಗೆ ಕೋವಿಡ್ ಹೊಸ ತಳಿ (Corona Strain) ಕಂಡುಬಾರದಿದ್ದರೂ, ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರೂ ಎಚ್ಚರದಿಂದ ಇರಬೇಕು ಎಂದರು
ಇನ್ನು ಮಕ್ಕಳ ಲಸಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯ ಸರ್ಕಾರದ ಆದೇಶಕ್ಕೆ ಬಿಬಿಎಂಪಿ ಕಾಯುತ್ತಿದೆ ಎಂದರು.
ನಾಲ್ಕು ವಾರ್ಡ್ಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ ಮುಖ್ಯ ಆಯುಕ್ತರು, ಹೆಚ್ಚು ಪ್ರಕರಣ ಕಂಡು ಬರುವ ಕಡೆ ಕಂಟೈನ್ಮೆಂಟ್ ಜಾಸ್ತಿ ಮಾಡಲಾಗುವುದು ಎಂದರು. ಅಂತರಾಷ್ಟ್ರೀಯ ಸಂಸ್ಥೆಗಳು ಚರಂಡಿ ನೀರಿನ ಸ್ಯಾಂಪಲ್ ಪಡೆದು ವೈರಸ್ ತಳಿಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿವೆ ಎಂದು ತಿಳಿಸಿದರು.
ಇನ್ನು ಅನಧಿಕೃತ ಕಟ್ಟಡಗಳ ಸರ್ವೆ ಬಗ್ಗೆ ಹೈಕೋರ್ಟ್ ಸೂಚನೆಯಂತೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ಕೇಳಿರುವ ವರದಿಯನ್ನು ಸಿದ್ಧಪಡಿಸಿ ಕೋರ್ಟ್ಗೆ ಕೊಡಲಾಗುವುದು ಎಂದರು.
ಬಿಬಿಎಂಪಿ ಶಾಲಾ, ಕಾಲೇಜು ಮಕ್ಕಳಿಗೆ ಸಮವಸ್ತ್ರ, ಪುಸ್ತಕ ವಿತರಣೆಗೆ ಬಿಬಿಎಪಿ ಕ್ರಮ ಕೈಗೊಳ್ಳುತ್ತಿದೆ ಎಂದರು.
ಇದನ್ನೂ ಓದಿ:Karnataka Bitcoin case: ನನ್ನ ಬ್ಯಾಂಕ್ ಖಾತೆಯಿಂದ ಹಣ ವಶ ಎಂಬುದೆಲ್ಲಾ ಬೋಗಸ್: ಶ್ರೀಕಿ