ಬೆಂಗಳೂರು: ಬಿಬಿಎಂಪಿ ಪಾದರಾಯನಪುರ ವಾರ್ಡ್ನ ಹನ್ನೊಂದು ರಸ್ತೆಗಳಿಗೆ ಸಮಾಜ ಸೇವಕರ ನಾಮಕರಣ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತವಾದ್ದರಿಂದ ಕೌನ್ಸಿಲ್ ಕೈಗೊಂಡಿದ್ದ ನಿರ್ಣಯವನ್ನು ರದ್ದುಪಡಿಸುವಂತೆ ಕೋರಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದಾರೆ.
ವಾರ್ಡ್ನ ಹನ್ನೊಂದು ರಸ್ತೆಗಳಿಗೆ ಒಂದು ಕೋಮಿಗೆ ಸೇರಿದ ವ್ಯಕ್ತಿಗಳ ನಾಮಕರಣ ಮಾಡಲು ನಿರ್ಧರಿಸಿದ್ದರಿಂದ ತೀವ್ರ ವಿರೋಧ ಕೇಳಿಬಂದಿತ್ತು. ಜೊತೆಗೆ ಸಂಸದರಾದ ಅನಂತಕುಮಾರ್ ಹೆಗಡೆ, ಪಿಸಿ ಮೋಹನ್, ತೇಜಸ್ವಿ ಸೂರ್ಯ ರಂಗನಾಥ್ ಮಲ್ಯ ಮೊದಲಾದವರಿಂದ ಆಕ್ಷೇಪಣೆ ಕೇಳಿ ಬಂದಿರುವುದರಿಂದ ಕೌನ್ಸಿಲ್ನಲ್ಲಿ ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರವನ್ನು ರದ್ದು ಪಡಿಸುವಂತೆ ಕೋರಿ ಬಿಬಿಎಂಪಿ ಆಯುಕ್ತರು, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ರಸ್ತೆಗಳಿಗೆ ನಾಮಕರಣ ವಿಚಾರವಾಗಿ, ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ 30-12-2020 ರಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಅನೇಕ ಆಕ್ಷೇಪಣೆಗಳು ಪಾಲಿಕೆಗೆ ಸಲ್ಲಿಕೆಯಾಗಿವೆ.
8-09-20 ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ರಸ್ತೆ ನಾಮಕರಣದ ಹೆಸರುಗಳನ್ನು ತೀರ್ಮಾನಿಸಲಾಗಿದ್ದ ಹೆಸರುಗಳು :
- ಹೆಚ್.ಎಂ ರಸ್ತೆ ಪಾದರಾಯನಪುರ- ಪೆಹಲ್ವಾನ್ ಫಾರೂಕ್ ಪಾಶ ಸಾಬ್ ಸರ್ಕಲ್
- 10 ನೇ ಅಡ್ಡರಸ್ತೆ - ಪೆಹಲ್ವಾನ್ ಫಾರೂಕ್ ಪಾಶ ಸಾಬ್ ರಸ್ತೆ
- 7 ನೇ ಅಡ್ಡರಸ್ತೆ- ಟೋಪಿಬರಫೀಕ್ ಸಾಬ್ ರಸ್ತೆ
- 7 ನೇ ಮುಖ್ಯರಸ್ತೆ- ರೋಷನ್ ಫಯಾಜ್ ಸಂಗಮ ಸರ್ಕಲ್
- 9 ನೇ ಅಡ್ಡರಸ್ತೆ- ಆಲೀಲ್ ಪಟೇಲ್ ರಸ್ತೆ
- 7 ನೇ ಅಡ್ಡರಸ್ತೆ,ವಿನಾಯಕನಗರ- ಎಲ್ಡಿರ್ ಬಾಬು ಸಾಬ್ ರಸ್ತೆ
- 8 ನೇ ಮುಖ್ಯರಸ್ತೆ, ಪಾದರಾಯನಪುರ- ಹಾಜಿಹಬೀಬ್ ಬೇಗ್ ರಸ್ತೆ
- 11 ನೇ ಸಿ ಅಡ್ಡರಸ್ತೆ- ಹಾಜಿ ವಝೀರ್ ಸಾಬ್ ರಸ್ತೆ
- 9ನೇ ಕ್ರಾಸ್,ರೆಹ್ಮಾನಿಯಾ ಮಸೀದಿ ರಸ್ತೆ- ಹಾಜಿಬಶಾಮಿರ್ ಸಾಬ್ ರಸ್ತೆ
- 13 ನೇ ಸಿ ಅಡ್ಡರಸ್ತೆ- ಹಾಜಿ ದಸ್ತಗೀರ್ ರಸ್ತೆ
- 10 ನೇ ಮುಖ್ಯರಸ್ತೆ- ಹಾಜಿ ನೂರ್ ಸಾಬ್ ರಸ್ತೆ