ETV Bharat / state

ಈದ್ಗಾ ಮೈದಾನದ ದಾಖಲೆ ಕೊಟ್ಟರೆ ಕಾನೂನುಬದ್ಧವಾಗಿ ಖಾತಾ: ಬಿಬಿಎಂಪಿ ಮುಖ್ಯ ಆಯುಕ್ತ - ಚಾಮರಾಜಪೇಟೆ ಈದ್ಗಾ ಮೈದಾನ ವಿವಾದದ ಬಗ್ಗೆ ತುಷಾರ್ ಗಿರಿನಾಥ್​ ಪ್ರತಿಕ್ರಿಯೆ

ಚಾಮರಾಜಪೇಟೆ ಈದ್ಗಾ ಮೈದಾನದ ಮೂಲ ಮಾಲೀಕರು ಮಾತ್ರ ನಮಗೆ ಸೂಕ್ತ ದಾಖಲೆ ಸಲ್ಲಿಕೆ ಮಾಡಿ ಮಾಲೀಕತ್ವ ಸಾಬೀತುಪಡಿಸಲಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ತುಷಾರ್ ಗಿರಿನಾಥ್
ತುಷಾರ್ ಗಿರಿನಾಥ್
author img

By

Published : Jun 29, 2022, 5:47 PM IST

ಬೆಂಗಳೂರು: ಚಾಮರಾಜಪೇಟೆಯ ಮೈದಾನ ಬಿಬಿಎಂಪಿ ಸ್ವತ್ತಲ್ಲ ಎನ್ನುವ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ವಕ್ಫ್ ಬೋರ್ಡ್ ಬಳಿ ದಾಖಲೆ ಇದ್ದರೆ ಖಾತಾ ಮಾಡಿಕೊಡಲಾಗುವುದು. ದಾಖಲೆ ಇದ್ದರೆ ನೀಡಿ ಎಂದು ನಾನು ಹೇಳಿದ್ದೇನೆಯೇ ಹೊರತು ಸ್ವತ್ತಲ್ಲ ಎಂದು ಹೇಳಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ಬಿಬಿಎಂಪಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನದ ಬಗ್ಗೆ ಸದ್ಯದ ಸುಪ್ರೀಂಕೋರ್ಟಿನ ಆದೇಶ ಪ್ರಕಾರ, ಮಕ್ಕಳ ಕ್ರೀಡಾ ಚಟುವಟಿಕೆ ಹಾಗೂ ಮುಸ್ಲಿಮರ ಪ್ರಾರ್ಥನೆಗೆ ಮಾತ್ರ ಅವಕಾಶ ಇದೆ ಎಂದರು.

1965ರಲ್ಲಿ ವಕ್ಫ್ ಬೋರ್ಡ್‌ನಿಂದ ಅಧಿಸೂಚನೆ: 1965ರಲ್ಲಿ ವಕ್ಫ್ ಬೋರ್ಡ್ ಹೊರಡಿಸಿದ ಅಧಿಸೂಚನೆಯಲ್ಲಿ ಸುನ್ನಿ ಬೋರ್ಡ್​ಗೆ ಸೇರಿದ‌ ಜಾಗ ಎಂದು ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ಇದುವರೆಗೂ ಇದು ನಮ್ಮ‌ ಜಾಗ ಎಂದು ವಕ್ಫ್ ಬೋರ್ಡ್ ಸಹ ದಾಖಲೆ ನೀಡಿಲ್ಲ. 1974ರಲ್ಲಿ ಸಮೀಕ್ಷೆ ನಡೆದಾಗಲೂ ವಕ್ಫ್ ಬೋರ್ಡ್ ಆಕ್ಷೇಪಣೆ ಸಲ್ಲಿಸಿಲ್ಲ. ಮಾಲೀಕರು ಯಾರೇ ಇದ್ದರೂ ಕಾನೂನುಬದ್ಧವಾಗಿ ಖಾತಾ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಮುಸ್ಲಿಮರ ಪ್ರಾರ್ಥನೆ ನಿಲ್ಲಿಸಲು ಸಾಧ್ಯವಿಲ್ಲ: ಖಾತಾ ಮಾಡುವಾಗ ಅಳತೆ, ದಾಖಲೆ ನೋಡಿ ಖಾತಾ ಮಾಡಿಕೊಡುತ್ತೇವೆ. ಅಲ್ಲದೆ, ಈದ್ಗಾ ಮೈದಾನದಲ್ಲಿ ಮುಸ್ಲಿಮರ ಪ್ರಾರ್ಥನೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.

ಶಾಸಕ ಜಮೀರ್ ಅಹ್ಮದ್ ಜತೆ ಡೀಲ್ ಇಲ್ಲ: ಶಾಸಕ ಜಮೀರ್ ಅಹ್ಮದ್ ಜತೆ ಡೀಲ್ ಮಾಡಿಕೊಂಡಿರುವ ಆರೋಪ ಕುರಿತು ಪ್ರತಿಕ್ರಿಯಿಸಿ, ನಾನು ಯಾರ ಜತೆಯೂ ಡೀಲ್ ಮಾಡಿಕೊಂಡಿಲ್ಲ. ಆಧಾರರಹಿತ ಆರೋಪಗಳನ್ನು ಯಾರೂ ಸಹ ಮಾಡಬಾರದು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಉದಯಪುರ ಘಟನೆ ಸಂಬಂಧ ಪರ-ವಿರೋಧ ಸಂದೇಶ ಹಾಕಿದ್ರೆ ಕ್ರಮ : ದಾವಣಗೆರೆ ಎಸ್​ಪಿ ಎಚ್ಚರಿಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.