ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರ ಟ್ವಿಟರ್ ಹೆಸರು, ಫೋಟೋ ಅಳಿಸಿ ಹ್ಯಾಕ್ ಮಾಡಲಾಗಿದೆ. ಈ ಅಕೌಂಟ್ನಲ್ಲಿ ಸದ್ಯ ಖಾಸಗಿ ವ್ಯಕ್ತಿಗಳು ಟ್ವೀಟ್ ಮಾಡುತ್ತಿರುವುದು ಕಂಡುಬಂದಿದೆ.
![gaurav-gupta tweet](https://etvbharatimages.akamaized.net/etvbharat/prod-images/12015764_478_12015764_1622807683333.png)
ಬಿಬಿಎಂಪಿ ಮುಖ್ಯ ಆಯುಕ್ತರ ಹಳೆಯ ಅಥವಾ ಹೊಸ ಟ್ವೀಟ್ಗಳು ಕಾಣಿಸುತ್ತಿಲ್ಲ. ಈ ಹಿಂದೆ ಅವರು ನಗರದ ಅಭಿವೃದ್ಧಿ ಕಾರ್ಯಗಳು, ಕೋವಿಡ್ ಕುರಿತ ಮಾಹಿತಿಗಳನ್ನು ಟ್ವೀಟ್ ಮಾಡುತ್ತಿದ್ದರು. ಸಾಕಷ್ಟು ಜನ ಇವರ ಅಕೌಂಟ್ನ್ನು ಫಾಲೋ ಕೂಡಾ ಮಾಡುತ್ತಿದ್ದರು. ಆದರೆ ಮುಖ್ಯ ಆಯುಕ್ತರ ಫೋಟೋ ಹೆಸರು ಎರಡೂ ಟ್ವಿಟರ್ ನಲ್ಲಿಯೂ ಲಭ್ಯವಿಲ್ಲ.
![account hack](https://etvbharatimages.akamaized.net/etvbharat/prod-images/12015764_911_12015764_1622807659894.png)
ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತರು, ಯಾರು ಮಾಡಿದ್ರು, ಯಾಕೆ ಎಂಬುದು ಗೊತ್ತಿಲ್ಲ. ಜನರಿಗೆ ಸೂಕ್ತ ಅಗತ್ಯ ಮಾಹಿತಿ ಸಿಗುತ್ತಿತ್ತು. ಈಗ ಹ್ಯಾಕ್ ಸರಿಪಡಿಸಲು ತಿಳಿಸಲಾಗಿದೆ. ಸದ್ಯಕ್ಕಂತೂ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿದೆ ಎಂದರು.
![private people used gaurav gupta tweter account](https://etvbharatimages.akamaized.net/etvbharat/prod-images/kn-bng-06-twitter-hack-7202707_04062021170451_0406f_1622806491_916.jpg)
ಓದಿ: ರಾಜ್ಯ ಪ್ರವೇಶಿಸಿದ ಮುಂಗಾರು: ಬೆಂಗಳೂರಲ್ಲಿ ಭಾರೀ ಮಳೆ, ಕೆಲ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್