ಬೆಂಗಳೂರು: ಬಿಬಿಎಂಪಿಯಿಂದ ಹೊಸ ಆದೇಶ ಹೊರಡಿಸಲಾಗಿದ್ದು, ಕೋವಿಡ್-19 ಸೋಂಕಿತರ ಜೊತೆ ಪ್ರೈಮರಿ, ಸೆಕೆಂಡರಿ ಸಂಪರ್ಕ ಹೊಂದಿದ್ದವರಿಗೆ ಹೋಂ ಕ್ವಾರಂಟೈನ್ ಮಾತ್ರ ಎಂದು ತಿಳಿಸಿದೆ.
ಇಷ್ಟು ದಿನ ಸೋಂಕಿತರ ಸಂಪರ್ಕದಲ್ಲಿದ್ದವರಿಗೆ ಹೋಟೆಲ್ ಕ್ವಾರಂಟೈನ್ ಅಥವಾ ಸರ್ಕಾರದ ಉಚಿತ ಹಾಸ್ಟೆಲ್, ಕಲ್ಯಾಣ ಮಂಟಪಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿತ್ತು. ಇದೀಗ, ಹೊಸ ಆದೇಶ ಹೊರಡಿಸಿದ್ದು, ಸೋಂಕಿತರ ಜೊತೆ ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದ್ದವರಿಗೆ ಹೋಂ ಕ್ವಾರಂಟೈನ್ ಮಾತ್ರ ಎಂದು ಸೂಚಿಸಿದೆ.
ಇನ್ನು ಹೋಂ ಕ್ವಾರಂಟೈನ್ನಲ್ಲಿರುವವರ ಮೇಲೆ ನಿಗಾ ಇಡಲು ತಂಡ ರಚನೆ ಮಾಡಿದೆ. ಇಂದಿನಿಂದಲೇ ಈ ಆದೇಶ ಜಾರಿಗೆ ಬರಲಿದೆ.