ಬೆಂಗಳೂರು: ಹೈಕೋರ್ಟ್ ಆದೇಶದ ಮೇರೆಗೆ ವೃಷಭಾವತಿ ಕಣಿವೆ ಅಧ್ಯಯನಕ್ಕೆ ಕಡೆಗೂ ಬಿಬಿಎಂಪಿ ಮನಸ್ಸು ಮಾಡಿದೆ.
ವೃಷಭಾವತಿ ಕಣಿವೆ ರಾಜಕಾಲುವೆಯ ರಕ್ಷಣೆ, ಪುನಶ್ಚೇತನಗೊಳಿಸಲು ಅಳವಡಿಸಬೇಕಾದ ಕ್ರಮಗಳ ಬಗ್ಗೆ ಅಧ್ಯಯನಕ್ಕೆ ಹೈಕೋರ್ಟ್ ಸೂಚನೆ ಮೇರೆಗೆ ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (NEERI) ಗೆ ಅಧ್ಯಯನದ ವರದಿ ನೀಡಲು ಬಿಬಿಎಂಪಿ ಸೂಚಿಸಿದೆ.
- ವೃಷಭಾವತಿ ನದಿ ವ್ಯಾಲಿಯ ಮಾಲಿನ್ಯಕಾರಕಗಳ ಪತ್ತೆ
- ವಿವಿಧ ಸ್ಥಗಳಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯ ಪ್ರಮಾಣ
- ವೃಷಭಾವತಿ ವ್ಯಾಲಿಗೆ ಸೇರುವ ಮಾಲಿನ್ಯಕಾರಕಗಳ ತಡೆಗೆ ಕ್ರಮಗಳೇನು..?
- ತಾತ್ಕಾಲಿಕ ಹಾಗೂ ದೀರ್ಘಕಾಲಿಕ ಪರಿಹಾರಗಳೇನು..?
- ವ್ಯಾಲಿ ರಕ್ಷಣೆಗೆ ತಂತ್ರಜ್ಞಾನಗಳ ಅಗತ್ಯವಿದೆಯೇ..?
ಈ ವಿಷಯಗಳನ್ನು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತರು ಮಹಾರಾಷ್ಟ್ರದ ನಾಗಪುರದಲ್ಲಿರುವ 'ನೀರಿ' ಸಂಸ್ಥೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.