ETV Bharat / state

ಸಿಎಂ ಬಿಎಸ್​​ವೈ ಭೇಟಿ ಮಾಡಿದ ಜೆಡಿಎಸ್​ ನಾಯಕ : ಮತ್ತೆ ಸಭಾಪತಿ ಆಗ್ತಾರಾ ಹೊರಟ್ಟಿ? - ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ

ಸಿಎಂ ಭೇಟಿ ಮಾಡಿದ್ದೆ, ನಮ್ಮ ಪಕ್ಷದ ವರಿಷ್ಠರಾದ ದೇವೇಗೌಡರು ಸೇರಿದಂತೆ ಎಲ್ಲರೂ ಚರ್ಚಿಸಿ ಈ ಬಾರಿ ಸಭಾಪತಿ ಸ್ಥಾನ ಕೇಳೋಣ ಅಂತಾ ಮಾತುಕತೆ ಆಗಿತ್ತು. ಅದೇ ವಿಚಾರವಾಗಿ ಯಡಿಯೂರಪ್ಪರನ್ನ ಭೇಟಿ ಮಾಡುವಂತೆ ದೇವೇಗೌಡರು ಹೇಳಿದ್ದರು ಎಂದು ವಿಧಾನ ಪರಿಷತ್​ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

basavaraja-hortti-met-cm-b-s-yadiyurappa-in-benagloor
ಸಿಎಂ ಬಿಎಸ್​​ವೈ ಭೇಟಿ ಮಾಡಿದ ಬಸವರಾಜ್ ಹೊರಟ್ಟಿ
author img

By

Published : Jan 27, 2021, 10:27 AM IST

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ, ಸಭಾಪತಿ ಸ್ಥಾನವನ್ನು ಜೆಡಿಎಸ್​ಗೆ ಬಿಟ್ಟುಕೊಡುವಂತೆ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಇಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಸಿಎಂ ಭೇಟಿ ಮಾಡಿದ್ದೆ, ದೇವೇಗೌಡರು ಸೇರಿದಂತೆ ಎಲ್ಲರೂ ಚರ್ಚಿಸಿ ಈ ಬಾರಿ ಸಭಾಪತಿ ಕೇಳೋಣ ಅಂತಾ ಮಾತುಕತೆ ಆಗಿತ್ತು. ಅದೇ ವಿಚಾರವಾಗಿ ಯಡಿಯೂರಪ್ಪರನ್ನ ಭೇಟಿ ಮಾಡುವಂತೆ ದೇವೇಗೌಡರು ಹೇಳಿದ್ದರು. ಎಂಎಲ್‌ಸಿಗಳ ಸಭೆ ಕರೆದಿದ್ದೇನೆ, ಅವರ ಜೊತೆ ಚರ್ಚಿಸಿ ತಿಳಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ. ದೇವೇಗೌಡರು ಪ್ರಧಾನಿ ಮೋದಿ, ಜೆಪಿ ನಡ್ಡಾರ ಜೊತೆ ಫೋನ್ ಮೂಲಕ ಮಾತುಕತೆ ಆಗಿದೆ ಎಂದಿದ್ದಾರೆ ಅಂತಾ ಹೊರಟ್ಟಿ ತಿಳಿಸಿದ್ದಾರೆ.

ಬಯೋಡೇಟಾ ಕಳುಹಿಸಿಕೊಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರವರು ಕೇಳಿದ್ದರು, ಕಳುಹಿಸಲಾಗಿದೆ, ಎಲ್ಲರೂ ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಬಸವರಾಜ್ ಹೊರಟ್ಟಿ ಬಗ್ಗೆ ಎಲ್ಲರೂ ವಿಶ್ವಾಸ ಇಟ್ಟಿದ್ದಾರೆ. ಉಪ ಸಭಾಪತಿ ಸ್ಥಾನಕ್ಕೆ ನಾವು ಸ್ಪರ್ಧೆ ಮಾಡಲ್ಲ. ಸಿಎಂ ಏನ್ ತೀರ್ಮಾನ ಮಾಡುತ್ತಾರೆ ಎಂದು ಕಾದು ನೋಡಬೇಕು. ಸಭೆ ಬಳಿಕ ಏನ್ ಹೇಳುತ್ತಾರೆ ನೋಡಬೇಕು. ಬಿಜೆಪಿಯವರು ಬೆಂಬಲ ಕೊಟ್ಟಿಲ್ಲ ಅಂದರೆ ಏನು ಮಾಡಬೇಕು ಅನ್ನೋದರ ಬಗ್ಗೆ ಚರ್ಚೆ ಆಗಿಲ್ಲ. ಕಾಂಗ್ರೆಸ್ ಜೊತೆಗೆ ಹೋಗುವ ಬಗ್ಗೆ ನಿರ್ಧಾರವೂ ಆಗಿಲ್ಲ ಎಂದು ಹೊರಟ್ಟಿ ಹೇಳಿದರು.

ಓದಿ : ಸಭಾಪತಿ ಸ್ಥಾನಕ್ಕೆ ಜೆಡಿಎಸ್ ಬೇಡಿಕೆ: ಸಿಎಂ ಭೇಟಿಯಾಗಲಿರುವ ಬಸವರಾಜ ಹೊರಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.