ಬೆಂಗಳೂರು: ಬಜೆಟ್ ಅಧಿವೇಶನ ಮುಂದೂಡಿಕೆ ನಂತರ ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಪಕ್ಷದವರು ವೈಚಾರಿಕವಾಗಿ ದಿವಾಳಿಯಾಗಿದ್ದಾರೆ, ಪ್ರಜಾಪ್ರಬುತ್ವ ವಿರೋಧಿ, ಸಂಸದೀಯ ವಿರೋಧಿ, ನಡಾವಳಿ ವಿರೋಧಿಯಾಗಿ ನಡೆದುಕೊಂಡಿದ್ದಾರೆ ಎಂದು ಇಂದು ನಡೆದ ಗದ್ದಲದ ಬಗ್ಗೆ ಹೇಳಿದರು.
ಒಂದು ದೇಶ ಇಂದು ಚುನಾವಣೆ ಬಗ್ಗೆ ಬಿಎಸಿಯಲ್ಲಿ ಚರ್ಚೆಯಾಗಿದೆ. ಸ್ಪೀಕರ್ ಈಗಾಗಲೇ ಈ ಬಗ್ಗೆ ಸಾಕಷ್ಟು ಸಮಾಲೋಚನೆ ನಡೆಸಿ ಒಂದು ದೇಶ ಒಂದು ಚುನಾವಣೆಯ ಚರ್ಚೆಗೆ ತೀರ್ಮಾನಿಸಿದ್ದರು. ಆದರೆ ಏಕಾಏಕಿ ವಿರೋಧ ಪಕ್ಷದ ನಾಯಕರು ಒಂದು ಚುನಾವಣೆ ಒಂದು ದೇಶದ ಬಗ್ಗೆ ವಿರೋಧ ಮಾಡಿರವುದು ಸರಿಯಲ್ಲ ಎಂದರು.
ಶಾಸಕ ಸಂಗಮೇಶ್ ವಿಚಾರವಾಗಿ ಮಾತನಾಡುತ್ತಾ, ಸಂಗಮೇಶ್ ನೀಡಿದ್ದ ನೋಟಿಸ್ಗೆ ಸ್ಪೀಕರ್ ಕರೆದು ಯಾವ ನಿಯಮಾವಳಿ ಅಡಿ ಚರ್ಚೆ ಕೈಗೆತ್ತುಕೊಳ್ಳಬೇಕು ಎಂಬುದನ್ನು ಕೇಳಿದರು. ಆದರೆ ಸಂಗಮೇಶ್ವರ್ ಸರಿಯಾಗಿ ಸ್ಪಂದಿಸದೆ ಏಕಾಏಕಿ ಬಟ್ಟೆಬಿಚ್ಚಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.
ಅವರ ಮೇಲಿನ ಪ್ರಕರಣ ತನಿಖಾ ಹಂತದಲ್ಲಿದೆ ಎಂದರು.