ETV Bharat / state

ದೇವೇಗೌಡ-ಕುಮಾರಸ್ವಾಮಿ; ಎಸ್.ಆರ್‌ ಬೊಮ್ಮಾಯಿ- ಬಸವರಾಜ್ ಬೊಮ್ಮಾಯಿ- ಕರ್ನಾಟಕದಲ್ಲಿ ಮರುಕಳಿಸಿದ ಇತಿಹಾಸ

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮತ್ತೊಮ್ಮೆ ಇತಿಹಾಸ ಮರುಕಳಿಸಿದ್ದು, ಅಪ್ಪನ ಬಳಿಕ ಇದೀಗ ಮಗ ಕೂಡ ಮುಖ್ಯಮಂತ್ರಿಯಾಗಿದ್ದಾರೆ.

Basavaraj bommai
Basavaraj bommai
author img

By

Published : Jul 27, 2021, 9:15 PM IST

Updated : Jul 27, 2021, 9:57 PM IST

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದು, ನಾಳೆ ಬೆಳಗ್ಗೆ 11ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ರಾಜ್ಯದ 20ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬೊಮ್ಮಾಯಿ ಇದೀಗ ಹೊಸದೊಂದು ದಾಖಲೆಗೆ ಪಾತ್ರರಾಗಿದ್ದಾರೆ.

Basavaraj bommai
ಅಪ್ಪ ಬೊಮ್ಮಾಯಿ ಜೊತೆ ಬಸವರಾಜ

ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್​.ಆರ್ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಈಗಾಗಲೇ ಸೇವೆ ಸಲ್ಲಿಸಿದ್ದಾರೆ. 1980ರ ದಶಕದಲ್ಲಿ ಸಂಘ ಪರಿವಾರದಿಂದ ಬಂದ ಅವರು ಸಿಎಂ ಆಗಿ ಆಯ್ಕೆಯಾಗಿದ್ದರು. ಇದೀಗ ಅವರ ಮಗ ಬಸವರಾಜ ಬೊಮ್ಮಾಯಿ ಕೂಡ ರಾಜ್ಯದ ನೂತನ ಸಿಎಂ ಆಗಿದ್ದಾರೆ. ಇದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ನಡೆದ ಅಪರೂಪದ ಘಟನೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ರಾಜ್ಯದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ

ಈಗಾಗಲೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಜೋಡಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಅದೇ ರೀತಿ ಎಸ್​​.ಆರ್​ ಬೊಮ್ಮಾಯಿ ಹಾಗೂ ಮಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುವ ಮೂಲಕ ಇತಿಹಾಸ ಮತ್ತೊಮ್ಮೆ ಮರುಕಳಿಸುವಂತೆ ಮಾಡಿದ್ದಾರೆ. ಎಸ್​.ಆರ್​ ಬೊಮ್ಮಾಯಿ ಈ ಹಿಂದೆ ಹುಬ್ಬಳ್ಳಿ ಪ್ರಾಂತ್ಯದಿಂದ ಪ್ರತಿನಿಧಿಸಿ ಮುಖ್ಯಮಂತ್ರಿಯಾಗಿದ್ದರು. ಆದರೆ ಆರು ತಿಂಗಳ ಕಾಲ ಮಾತ್ರ ಸಿಎಂ ಆಗಿದ್ದರೂ ಎಂಬುದು ಗಮನಾರ್ಹ ಸಂಗತಿ.

2012ರಲ್ಲಿ ಬಿಎಸ್​ವೈ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗಲೂ ಬಸವರಾಜ ಬೊಮ್ಮಾಯಿ ಅಲ್ಲಿಗೆ ಹೋಗಲಿಲ್ಲ. ಆದರೆ ಬಿಎಸ್​ವೈ ಜೊತೆ ಯಾವುದೇ ರೀತಿಯ ದ್ವೇಷ ಇಟ್ಟುಕೊಳ್ಳಲಿಲ್ಲ. ಇದೇ ಕಾರಣಕ್ಕಾಗಿ 2019ರಲ್ಲಿ ಯಡಿಯೂರಪ್ಪ ಸರ್ಕಾರ ಆಡಳಿತಕ್ಕೆ ಬಂದಾಗ ಬೊಮ್ಮಾಯಿ ಅವರನ್ನು ಹತ್ತಿರದಲ್ಲಿಟ್ಟುಕೊಂಡಿದ್ದರು. ಇದರ ಫಲವಾಗಿ ಇದೀಗ ಅವರಿಗೆ ಸಿಎಂ ಪಟ್ಟ ಒಲಿದು ಬಂದಿದೆ.

Last Updated : Jul 27, 2021, 9:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.