ETV Bharat / state

ಪೊಲೀಸರ ಮೇಲೆ ಹಲ್ಲೆ ಪ್ರಕರಣ : ತನಿಖಾ ಅಧಿಕಾರಿಗಳ ವಿರುದ್ಧವೇ ನ್ಯಾಯಧೀಶರ ಗರಂ

author img

By

Published : Aug 4, 2019, 5:29 AM IST

ಪೊಲೀಸರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 145 ಮಂದಿ ಆರೋಪಿಗಳು ಹಾಜರಾದರೂ ತನಿಖಾಧಿಕಾರಿಗಳು ಮಾತ್ರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿಲ್ಲ. ಈ ಕುರಿತಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಧೀಶರು ರಾಮಚಂದ್ರ ಹುದ್ದಾರ್ ಅವರು ತನಿಖಾಧಿಕಾರಿಗಳಿಗೆ ಹಾಜರಾಗುವಂತೆ ಎಚ್ಚರಿಕೆ ನೀಡಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ಬೆಂಗಳೂರು: ಬಸವನಗೌಡ ಪಾಟೀಲ್‌ ಯತ್ನಾಳ್ ಹಾಗೂ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದ ತನಿಖಾಧಿಕಾರಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಧೀಶರಾದ ರಾಮಚಂದ್ರ ಹುದ್ದಾರ್ ಅವರು ತರಾಟೆಗೆ ತೆಗೆದುಕೊಂಡರು.

2014ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ಮೂಲಕ ಮೋದಿ ಅವರು ಪ್ರಧಾನಿಯಾದರು. ಆ ವೇಳೆ ಬಿಜಾಪುರದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಬಸವನಗೌಡ ಪಾಟೀಲ್ ಯತ್ನಾಳ್​ ಸೇರಿದಂತೆ 145 ಆರೋಪಿಗಳು ಹಾಜರಾಗಿದ್ದರು.

ವಿಚಾರಣೆ ವೇಳೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಧೀಶ ರಾಮಚಂದ್ರ ಹುದ್ದಾರ್ ಅವರು ಗರಂ ಆಗಿ, 'ಪ್ರತಿಬಾರಿಯ ವಿಚಾರಣೆಗೆ 145 ಆರೋಪಿಗಳು ತಪ್ಪದೆ ಬರುತ್ತಾರೆ. ಆದರೆ, ತನಿಖಾಧಿಕಾರಿಗಳು ಒಮ್ಮೆಯಾದರೂ ಬಂದಿದ್ದೀರಾ? ಪ್ರತಿಬಾರಿ ಎಲ್ಲ ಆರೋಪಿಗಳು ‌ಬಂದರೂ ನಿಮ್ಮ ಪೊಲೀಸರು ಬರೋವುದಕ್ಕೆ ಆಗೋವುದಿಲ್ಲವೇ? ಮುಂದಿನ ವಿಚಾರಣೆಗೆ ತನಿಖಾಧಿಕಾರಿಗಳು ಬರದೆ ಇದ್ದಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಕಿಡಿ ಕಾರಿದ್ದಾರೆ. ಬಳಿಕ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿದ್ದಾರೆ.

ಏನಿದು ಪ್ರಕರಣ

2014ರಲ್ಲಿ ರಾಷ್ಟ್ರದ ನೂತನ ಪ್ರಧಾನಿಯಾಗಿ ಮೋದಿ ಚುನಾಯಿತರಾಗಿದ್ದ ಸಂದರ್ಭದಲ್ಲಿ ಬಿಜಾಪುರದಲ್ಲಿ ಬಿಜೆಪಿಯ ವಿಜಯೋತ್ಸವದ ಯಾತ್ರೆ ಆಯೋಜಿಸಿದ್ದರು. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಹಾಗೂ ಕಾರ್ಯಕರ್ತರು ಬಂದೋಬಸ್ತ್‌ಗೆ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ಉದ್ದೇಶಪೂರ್ವಕವಾಗಿ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿ,‌ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಯತ್ನ ನಡೆಸಿರುವ ಆರೋಪ ಸಂಬಂಧ ದೂರು ದಾಖಲಾಗಿತ್ತು. ಯತ್ನಾಳ್ ಸೇರಿದಂತೆ ಒಟ್ಟು 145 ಮಂದಿ ಮೇಲೆ ಗಾಂಧಿಚೌಕ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Intro:ಬಸವನಗೌಡ ಪಾಟೀಲ್‌ ಯತ್ನಾಳ್ ಹಾಗೂ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ ಆರೋಪ
ತನಿಖಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ನ್ಯಾಯಲಯ

2014ರಲ್ಲಿ ರಾಷ್ಟ್ರದ ನೂತನ ಪ್ರಧಾನಿಯಾಗಿ ಮೋದಿ ಚುನಾಯಿತರಾಗಿದ್ದ ಸಂದರ್ಭದಲ್ಲಿ ಬಿಜಾಪುರದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಸವನಗೌಡ ಪಾಟೀಲ್ ಯತ್ನಾಲ್ ಸೇರಿದಂತೆ ಬರೊಬ್ಬರಿ 145 ಆರೋಪಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ರು.

ವಿಚಾರಣೆ ವೇಳೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಧೀಶರು ರಾಮಚಂದ್ರ ಹುದ್ದಾರ್ ಗರಂ ಆಗಿ ಪ್ರತಿಬಾರಿ 145 ಆರೋಪಿಗಳು ತಪ್ಪದೆ ಬರುತ್ತಾರೆ.ತನಿಖಾಧಿಕಾರಿ ಒಮ್ಮೆಯಾದ್ರೂ ಬಂದಿದ್ದೀರಾ .ಪ್ರತಿಬಾರಿ ಎಲ್ಲಾ ಆರೋಪಿಗಳು ‌ಬಂದ್ರೂ ನಿಮ್ಮ‌ ಪೊಲೀಸರು ಬರೋದಕ್ಕೆ ಆಗೋದಿಲ್ವಾ .ಮುಂದಿನ ಬಾರಿ ತನಿಖಾಧಿಕಾರಿಗಳು ಬಂದಿಲ್ಲ ಅಂದ್ರೆ‌ ಅವರನ್ನು ನಾನೇ ಸಸ್ಪೆಂಡ್ ಮಾಡ್ತೀನಿ ಎಂದು ಕಿಡಿ ಕಾರಿ ವಿಚಾರಣೆಯನ್ನ ಆಗಸ್ಟ್ 31ಕ್ಕೆ ಮುಂದೂಡಿಕೆ ಮಾಡಿದ್ದಾರೆ.

ಏನಿದು ಪ್ರಕರಣ

2014ರಲ್ಲಿ ರಾಷ್ಟ್ರದ ನೂತನ ಪ್ರಧಾನಿಯಾಗಿ ಮೋದಿ ಚುನಾಯಿತರಾಗಿದ್ದ ಸಂದರ್ಭದಲ್ಲಿ ಬಿಜಾಪುರದಲ್ಲಿ ಬಿಜೆಪಿಯ ವಿಜಯೋತ್ಸವದ ರ್ಯಾಲಿ ಆಯೋಜಿಸಿದ್ರು .ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಹಾಗೂ ಕಾರ್ಯ ಕರ್ತರು ಈ‌ ವೇಳೆ ಬಂದೋಬಸ್ತ್‌ಗೆ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ಉದ್ದೇಶಪೂರ್ವಕವಾಗಿ ಮೇಲೆ ಹಲ್ಲೆ ಮಾಡಿ,ಜೀವ ಬೆದರಿಕೆ ಹಾಕಿ,‌ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಯತ್ನ ನಡೆಸಿರುವ ಆರೋಪ ಸಂಬಂಧ ಬಸನಗೌಡ ಪಾಟೀಲ್‌ ಯತ್ನಾಳ್ ಸೇರಿದಂತೆ ಒಟ್ಟು 145ಮಂದಿ ಮೇಲೆಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರತಿ ವಿಚಾರಣೆ ವೇಳೆ ಆರೋಪಿಯಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ 145ಆರೋಪಿಗಳು ವಿಚಾರಣೆಗೆ ಹಾಜರಾಗಿದ್ರು. ಈ ವೇಳೆ ತನಿಖಾಧಿಕಾರಿಗಳು ಹಾಜರಾಗದೇ ಇರುವ ಕಾರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಚ್ಚರಿಕೆ ಸಂದೆಶ ನೀಡಿದೆBody:KN_BNG_12_ BJP_7204498Conclusion:KN_BNG_12_ BJP_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.