ಬೆಂಗಳೂರು: ಭೂಗತ ಜಗತ್ತಿನ ನಂಟು ಹೊಂದಿದ್ದ ಲೇಡಿಸ್ ಬಾರ್ ಮಾಲೀಕ ಮನೀಶ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ನಗರ ಕೇಂದ್ರ ವಿಭಾಗದ ವಿಶೇಷ ತಂಡ ಚುರುಕುಗೊಳಿಸಿದೆ. ಕಬ್ಬನ್ ಪಾರ್ಕ್ ಪೊಲೀಸರು ಹಾಗೂ ವಿಶೇಷ ತಂಡಗಳಿಂದ ತನಿಖೆ ನಡೆಯುತ್ತಿದ್ದು, ಹಂತಕರ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದೆ.
ಈಗಾಗಲೇ ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀಟ್, ಎಂಜಿ ರಸ್ತೆಯ ಎಂಟ್ರೆಂನ್ಸ್ ಸೇರಿ ಹಲವೆಡೆಯ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ. ಹತ್ಯೆ ಹಿಂದೆ ಅಂಡರ್ ವರ್ಲ್ಡ್ ಲಿಂಕ್ ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮನೀಶ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗೆ ಪೊಲೀಸರಿಂದ ತನಿಖೆ ಚುರುಕು
ಕಳೆದೆರಡು ದಿನಗಳ ಹಿಂದೆ ಕೊಲೆಯಾದ ಮನೀಶ್ ಶೆಟ್ಟಿಯನ್ನು ಹತ್ಯೆ ಮಾಡಲು ಹಂತಕರು 15 ದಿನಗಳಿಂದ ಸಂಚು ರೂಪಿಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಆರ್.ಟಿ. ನಗರ ನಿವಾಸದಿಂದ ಹಿಡಿದು ಬ್ರಿಗೇಡ್ ರಸ್ತೆಯ ಬಾರ್ವರೆಗೂ ಹಂತಕರು ಮನೀಶ್ ಶೆಟ್ಟಿಯನ್ನು ಹಿಂಬಾಲಿಸಿದ್ದರು. ಪ್ರತಿ ದಿನ ರಾತ್ರಿ 9 ಗಂಟೆಗೆ ಕಾರಿನಲ್ಲಿ ಬಾರ್ಗೆ ಬರುವುದನ್ನು ಕಂಡುಕೊಂಡ ಹಂತಕರು, ಬಾರ್ ಬಳಿಯೇ ಕೊಲೆ ಮಾಡಲು ತೀರ್ಮಾನಿಸಿದ್ದಾರೆ. ಪ್ಲ್ಯಾನ್‌ನಂತೆ ಕಾರು ಇಳಿದು ಇನ್ನೇನು ಬಾರ್ ಪ್ರವೇಶ ಮಾಡಬೇಕು ಅನ್ನೋವಷ್ಟರಲ್ಲಿ ಮನೀಶ್ ಶೆಟ್ಟಿಯ ಬೆನ್ನಿಗೆ ಗುಂಡು ಹೊಡೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆಂದು ತಿಳಿದು ಬಂದಿದೆ.