ETV Bharat / state

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಾಖಲೆ ಮಟ್ಟದಲ್ಲಿ ಪ್ರವಾಸಿಗರ ಭೇಟಿ - holiday

ಪ್ರಾಣಿಗಳನ್ನು ನೋಡಲು ಹರಿದು ಬಂದು ಜನಸ್ತೋಮ- ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಪ್ರವಾಸಿಗರ ಭೇಟಿ- ಸುಮಾರು 50 ಲಕ್ಷಕ್ಕಿಂತ ಹೆಚ್ಚು ಮೊತ್ತ ಸಂಗ್ರಹ.

bannerghatta-biological-park-record-number-of-tourists
ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಾಖಲೆ ಮಟ್ಟದಲ್ಲಿ ಪ್ರವಾಸಿಗರ ಭೇಟಿ
author img

By

Published : Jan 1, 2023, 9:20 PM IST

ಆನೇಕಲ್​: ಕಳೆದ 2022ರ ಹೊಸ ವರ್ಷದ ದಿನದಂದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬಂದ ಪ್ರವಾಸಿಗರ ಸಂಖ್ಯೆಗಿಂತ ಈ ವರ್ಷ ದುಪ್ಪಟ್ಟು ಜನ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ.

ಕಳೆದ ವರ್ಷ ಜನವರಿ 1 ರಂದು 18,296 ವೀಕ್ಷಕರು ಆಗಮಿಸಿದ್ದು, ಒಟ್ಟು 38,66,610 ರೂ ಸಂಗ್ರಹವಾಗಿತ್ತು. ಆದರೆ, ಈ ವರ್ಷ 2023ರ ಹೊಸ ವರ್ಷದ ಭಾನುವಾರ ಬಂದಿರುವುದರಿಂದ 30,381 ಜನರು ಜೈವಿಕ ಉದ್ಯಾನವನಕ್ಕೆ ಆಗಮಿಸಿದ್ದು, ಒಟ್ಟು 54,76,500 ರೂ.ಗಳ ದಾಖಲೆಯ ಮೊತ್ತ ಸಂಗ್ರಹವಾಗಿದೆ.

ಈ ಮಟ್ಟದಲ್ಲಿ ಜನರು ಮೃಗಾಲಯಕ್ಕೆ ಬರುತ್ತಾರೆಂದು ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ನಿರೀಕ್ಷಿಸಿಲ್ಲವಾದರೂ ಒಂದು ವಾರದ ಹಿಂದಿನಿಂದಲೂ ಹಗಲಿರುಳು ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದ ಹಾಗೇ ಸಿದ್ಧತೆಗಳನ್ನು ನಡೆಸಿದ್ದರು.

ಸರ್ಕಾರದ ನೆರವಿಲ್ಲದೆ ಬರೀ ಪ್ರೇಕ್ಷಕರಿಂದ ಸಂಗ್ರಹಿಸುವ ಟಿಕೆಟ್ ಮೂಲದ ಗಳಿಕೆಯಿಂದ ಮಾತ್ರ, ಅಲ್ಲಿರುವ ಪ್ರಾಣಿಗಳಿಗೆ ಆಹಾರ, ನಿರ್ವಹಣೆ ವೈದ್ಯಕೀಯ ಆರೈಕೆಗೆ ಬಳಸಲಾಗುತ್ತದೆ. ಸಿಬ್ಬಂದಿ ಸಂಬಳ, ಹೊಸ ಹೊಸ ಪ್ರಾಣಿಗಳ ರವಾನೆ ಇತ್ಯಾದಿಗಳಿಗೆ ಈ ಹಣ ಬಳಸಲಾಗುತ್ತಿದೆ. ಈ ವರ್ಷದ ಆರಂಭದ ಗಳಿಕೆ ಉದ್ಯಾನವನದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸಂತಸ ಉಂಟುಮಾಡಿದೆ.

ಇದನ್ನೂ ಓದಿ: ವರ್ಷಾಂತ್ಯದ ಸಂಭ್ರಮ: ಬನ್ನೇರುಘಟ್ಟ ಮೃಗಾಲಯಕ್ಕೆ ದಾಖಲೆಯ ಗಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.