ETV Bharat / state

ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣ: ಹುಡುಗಿಯರೊಂದಿಗೆ ಅರೆನಗ್ನ ಡಾನ್ಸ್ ವಿಡಿಯೋ ಪತ್ತೆ! - Bangalore

ಬಾಂಗ್ಲಾ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸರಿಗೆ ಮತ್ತಷ್ಟು ಮಾಹಿತಿ ಇದೀಗ ಲಭ್ಯವಾಗಿದೆ. ವಿಚಾರಣೆ ವೇಳೆ ಬಂಧಿತ ಆರೋಪಿಗಳ ಮೊಬೈಲ್​ನಲ್ಲಿ ಯುವತಿಯರೊಂದಿಗೆ ಅರೆನಗ್ನವಾಗಿ ಡಾನ್ಸ್ ಮಾಡುತ್ತಿರುವ ಹಲವು ವಿಡಿಯೋಗಳು ಪತ್ತೆಯಾಗಿವೆ.

Bangalore
ಬೆಂಗಳೂರು
author img

By

Published : Jun 20, 2021, 1:45 PM IST

Updated : Jun 20, 2021, 2:54 PM IST

ಬೆಂಗಳೂರು: ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ನಗರದ ಪೂರ್ವ ವಿಭಾಗದ ಪೊಲೀಸರು 13 ಮಂದಿ ಆರೋಪಿಗಳನ್ನು ವಿಚಾರಣೆ ಮಾಡುವ ವೇಳೆ ಯುವತಿಯರೊಂದಿಗೆ ಅರೆನಗ್ನವಾಗಿ ಡಾನ್ಸ್ ಮಾಡುತ್ತಿರುವ ಹಲವು ವಿಡಿಯೋ ಪತ್ತೆಯಾಗಿವೆ.

ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆ ಸೇರಿದಂತೆ ಎಲ್ಲರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ‌. ಪ್ರಕರಣ ಬೆಳಕಿಗೆ ಬರುವ ಮುನ್ನ ಆರೋಪಿಗಳು ತಮ್ಮೊಂದಿಗಿದ್ದ ಯುವತಿಯರೊಂದಿಗೆ ಅರೆ ನಗ್ನವಾಗಿ ಮನೆಯೊಂದರಲ್ಲಿ ನೃತ್ಯ ಮಾಡುತ್ತಿರುವ ಹಲವು ವಿಡಿಯೋಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ‌.

ವಿಡಿಯೋದಲ್ಲಿ ಏನಿದೆ:?
ಮನೆಯೊಂದರಲ್ಲಿ ಆರೋಪಿ ರಿದಯ್ ಬಾಬು ಇಬ್ಬರು ಯುವತಿಯರೊಂದಿಗೆ ಅರೆನಗ್ನವಾಗಿ ಬಾಂಗ್ಲಾ ದೇಶಿ ಹಾಡುಗಳಿಗೆ ಡಾನ್ಸ್ ಮಾಡಿದ್ದಾನೆ. ಯುವತಿಯರು ಸಹ ರಿದಯ್ ಜೊತೆ ಹಜ್ಜೆ ಹಾಕಿದ್ದಾರೆ. ಡಾನ್ಸ್ ಮಾಡಿರುವ ವಿಡಿಯೋವನ್ನು ಆರೋಪಿಗಳು ಮೊಬೈಲ್​​ನಲ್ಲಿ ಸೆರೆಹಿಡಿದಿದ್ದಾರೆ. ರಿದಯ್ ಬಾಬು ಬಾಂಗ್ಲಾದಲ್ಲಿ ಟಿಕ್ ಟಾಕ್ ವಿಡಿಯೋ ಸ್ಟಾರ್ ಆಗಿ ಜನಪ್ರಿಯಗೊಂಡಿದ್ದಾನೆ‌. ಯುವತಿಯರನ್ನು ಸೆಳೆದು ಭಾರತದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಕ್ರಮವಾಗಿ ಗಡಿ ದಾಟಿ ವೇಶ್ಯವಾಟಿಕೆ ದಂಧೆಗೆ‌ ನೂಕುತ್ತಿದ್ದ. ಇದುವರೆಗೂ ನೂರಾರು ಯುವತಿಯರನ್ನು ಭಾರತಕ್ಕೆ ಅಕ್ರಮವಾಗಿ ಕರೆ ತಂದಿದ್ದಾನೆ.

ತಪ್ಪೊಪ್ಪಿಕೊಂಡ ಆರೋಪಿಗಳು:

ಪ್ರಕರಣದಲ್ಲಿ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಹಣಕಾಸು ವೈಷಮ್ಯದಿಂದಲೇ ಸಂತ್ರಸ್ತೆ ಮೇಲೆ ಸಾಮೂಹಿಕ ಆತ್ಯಾಚಾರ ನಡೆಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಾಂಗ್ಲಾ‌ದಿಂದ ಅಕ್ರಮವಾಗಿ ಭಾರತಕ್ಕೆ‌ ನುಸುಳಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ತನಿಖಾಧಿಕಾರಿಗಳ‌ ಮುಂದೆ ಬಾಯ್ಬಿಟ್ಟಿದ್ದಾರೆ. ಕೃತ್ಯ ನಡೆದ ದಿನದಂದು ಎಲ್ಲಾ ಆರೋಪಿಗಳು ಒಂದೇ ಕಡೆ ಇರುವುದು ಟವರ್ ಲೋಕೆಷನ್ ಮೂಲಕ ಗೊತ್ತಾಗಿದೆ‌.

ಓದಿ: ಸಂತ್ರಸ್ತೆಯೇ ವೇಶ್ಯಾವಾಟಿಕೆಯ‌ ಕಿಂಗ್ ಪಿನ್ : ಭಾರತಕ್ಕೆ ಆರೋಪಿಗಳನ್ನು ಬರಮಾಡಿಕೊಂಡಿದ್ದೇ ಬಾಂಗ್ಲಾ ಯುವತಿ..

ಜಪ್ತಿ ಮಾಡಿಕೊಂಡ ಆರೋಪಿಗಳ‌ ಮೊಬೈಲ್​​ಗಳನ್ನು ರಿಟ್ರೀವ್ ಮಾಡಿದಾಗ ಸಂತ್ರಸ್ತೆಯ ವಿಡಿಯೋ ಹಾಗೂ ಇನ್ನಿತರ ಸಹಚರರೊಂದಿಗೆ ಪೋನ್​​ನಲ್ಲಿ ಮಾತನಾಡಿರುವುದು ಗೊತ್ತಾಗಿದೆ. ಆರೋಪಿಗಳ ಫಿಂಗರ್ ಪ್ರಿಂಟ್ ಸಹ ಹೋಲಿಕೆ ಆಗಿದೆ. ಇನ್ನಿತರ ತಾಂತ್ರಿಕ ತನಿಖೆ ನಡೆಸಿದಾಗ ಆರೋಪಿಗಳ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಖಚಿತ ಪಡಿಸಿಕೊಂಡಿದ್ದಾರೆ.

ಈವರೆಗೆ 12 ಮಂದಿ ಅರೆಸ್ಟ್:

ಪ್ರಕರಣದಲ್ಲಿ ಇದುವರೆಗೂ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರಿದಯ್ ಬಾಬು, ಸಾಗರ್ ಮೊಹಮ್ಮದ್ ಬಾಬಾ ಶೇಕ್, ನುಸ್ರತ್, ಕಾಜಲ್ ಶೋಬಜ್, ರುಪ್ಸನಾ, ದಾಲೀಮ್, ಜಮಾಲ್, ಅಜೀಂ, ಅಕಿಲ್, ರಫ್ಸನ್ ಹಾಗೂ ಈತನ ಪತ್ನಿ ತಾನ್ಯಾಬ ಬಂಧಿತರು.

ಓದಿ: ಅತ್ಯಾಚಾರ ಪ್ರಕರಣ: ಎಲ್ಲ ಆರೋಪಿಗಳ ಬಂಧನ..ಅಜ್ಞಾತ ಸ್ಥಳದಿಂದ ಸಂತ್ರಸ್ತೆ ಹೇಳಿಕೆ ಸಾಧ್ಯತೆ

Last Updated : Jun 20, 2021, 2:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.