ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆಗೆ ಸಂಬಂಧಿಸಿದಂತೆ ಎಸ್ಡಿಪಿಐ ಸಂಘಟನೆಯ ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ಮುಜಾಮಿಲ್, ಫೈರೋಜ್ ಪಾಷಾ, ಅಪ್ನಾನ್, ಸೈಯದ್ ಮಸೂದ್, ಅಯಾಜ್ ಹಾಗೂ ಅಲ್ಬಕ್ ಸೇರಿದಂತೆ ಕೆಲವರನ್ನು ಪೊಲೀಸರು ತೀವ್ರವಾಗಿ ತನಿಖೆಗೆ ಒಳಪಡಿಸಿದ್ದಾರೆ.
ರಾಜಕೀಯದಲ್ಲಿ ಅಧಿಪತ್ಯ ಸಾಧಿಸಲು ಈಕೃತ್ಯ?
ಮೇಲ್ನೋಟಕ್ಕೆ ಎಸ್ಡಿಪಿಐ ಮುಖಂಡರುಗಳು ತಮ್ಮ ಪ್ರಾಬಲ್ಯ ಹಾಗೂ ಅಧಿಪತ್ಯ ಸ್ಥಾಪಿಸಲು ಈ ಕೃತ್ಯ ಮಾಡಿರುವ ವಿಚಾರ ಬಯಲಿಗೆ ಬಂದಿದೆ. ಈ ಆರೋಪಿಗಳ ಹಿಂದೆ ದೊಡ್ಡ - ದೊಡ್ಡ ಎಸ್ಡಿಪಿಐ ಮುಖಂಡರ ಕೈವಾಡ ಇರುವ ಅನುಮಾನ ಸಿಸಿಬಿ ತಂಡಕ್ಕೆ ಇದೆ.
ಅಖಂಡ ಶ್ರೀನಿವಾಸ್ ಮೂರ್ತಿ ಮತ್ತು ಶ್ರೀನಿವಾಸ್ ಆಪ್ತರು ಹಾಗೂ ಬಂಧಿತ ಪ್ರಮುಖ ಆರೋಪಿ ಎಸ್ಡಿಪಿಐ ಸಂಘಟನೆಯ ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ಮುಜಾಮಿಲ್ ನಡುವೆ ಆಗಾಗ ಸಮರವಾಗ್ತಿತ್ತು .
ಚುನಾವಣಾ ಸಂದರ್ಭದಲ್ಲಿ ಪುಲಕೇಶಿನಗರ ಕ್ಷೇತ್ರದ ಮತಗಳನ್ನು ಸೆಳೆಯಲು ಕುತಂತ್ರ ಮಾಡಲಾಗಿತ್ತು. ಯಾಕಂದ್ರೆ ಶಾಸಕ ಜಮೀರ್ ಅಹಮ್ಮದ್ ಕೂಡ ಶಾಸಕ ಶ್ರೀನಿವಾಸ್ಗೆ ಚುನಾವಣಾ ಸಂದರ್ಭದಲ್ಲಿ ಬಹಳ ಸಹಾಯ ಮಾಡಿದ್ರು. ಹೀಗಾಗಿ ಜಿದ್ದು ಸಾಧಿಸಲು ಈ ರೀತಿ ಮಾಡಿದ್ದ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ ಎಂಬುದು ತಿಳಿದು ಬಂದಿದೆ.
ಮುಜಾಮಿಲ್ ಪಾಷಾ ಹಾಗೂ ಆಪ್ಮಾನ್ ಆಪ್ತನಾಗಿದ್ದ ಫೈರೋಜ್ ಸೇರಿಕೊಂಡು ಕೆ.ಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದೊಂಬಿ ಎಬ್ಬಿಸಲು ನಾಲ್ಕು ಬಾರಿ ವಿಫಲಯತ್ನ ಮಾಡಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ, ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ ಮೇಲೆ ಹಲ್ಲೆ, ರಾಮಜನ್ಮ ಭೂಮಿ ತೀರ್ಪು, ಸಿಎಎ ಹಾಗೂ ಎನ್ಆರ್ಸಿ ಹೋರಾಟದ ವೇಳೆ ಗಲಭೆ ಹಾಗೆ ರಾಮ ಜನ್ಮಭೂಮಿ ಪೂಜೆ ಸಂದರ್ಭದಲ್ಲಿ ದೊಂಬಿಗೆ ಫ್ಲಾನ್ ಮಾಡಲಾಗಿತ್ತಂತೆ. ಆದರೆ, ಈ ಸಂದರ್ಭದಲ್ಲಿ ಖಾಕಿ ಹಾಗೂ ಗುಪ್ತಚರ ಇಲಾಖೆ ಕಟ್ಟೆಚ್ಚರ ವಹಿಸಿದ್ದ ಕಾರಣ ವಿಫಲವಾಗಿತ್ತು.
ಇನ್ನು ನವೀನ್ ಅನ್ಯ ಸಮುದಾಯದ ವಿರುದ್ಧ ಪೋಸ್ಟ್ ಹಾಕಿದ್ದನ್ನೇ ಬಂಡವಾಳವನ್ನಾಗಿಟ್ಟುಕೊಂಡ ಈ ಗುಂಪು ಇದೇ ಸರಿಯಾದ ಸಮಯ ಎಂದು ಅರಿತು ದೊಂಬಿ ಎಬ್ಬಿದ್ದಾರೆ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳು ಹೇಳುತ್ತಿರುವ ಮಾಹಿತಿ ಎಷ್ಟರ ಮಟ್ಟಿಗೆ ಸತ್ಯ ಅನ್ನೋದರ ಬಗ್ಗೆ ಕುಲಂಕಷವಾಗಿ ಹಿರಿಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಕೆಲ ರಾಜಾಕಾರಣಿ, ಶಾಸಕರು, ಕಾರ್ಪೊರೇಟರ್, ಬಿಬಿಎಂಪಿ ಸದಸ್ಯರನ್ನ ತನಿಖೆಗೆ ಒಳಪಡಿಸಲಿದ್ದಾರೆ.