ETV Bharat / state

ಚಾತುವರ್ಣ ವ್ಯವಸ್ಥೆ ಮಹಿಳೆ, ಶೂದ್ರರಿಗೆ ಶಿಕ್ಷಣ ವಂಚಿಸಿತು: ಸಿಎಂ ಬೇಸರ - ಕೈಗಾರಿಕಾ ಸಚಿವ ಎಂ ಬಿ ಪಾಟೀಲ್​

ಬೆಂಗಳೂರಿನಲ್ಲಿ ನಡೆದ ವಚನ ಪಿತಾಮಹ ಫ ಗು ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರೊ ಎಸ್.ಜಿ. ಸಿದ್ದರಾಮಯ್ಯ, ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ, ಸಮಾಜ ಸೇವಕಿ ಎಸ್.ಜಿ. ಸುಶೀಲಮ್ಮ ಅವರಿಗೆ ಪ್ರಶಸ್ತಿ ವಿತರಿಸಿದರು.

CM Siddaramaiah with award recipients
ವಚನ ಪಿತಾಮಹ ಫ ಗು ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರೊಂದಿಗೆ ಸಿಎಂ ಸಿದ್ದರಾಮಯ್ಯ
author img

By

Published : Jul 2, 2023, 9:56 PM IST

ಬೆಂಗಳೂರು: ಚಾತುವರ್ಣ ವ್ಯವಸ್ಥೆ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು ಮತ್ತು‌ ಶೂದ್ರರಿಗೆ ಶಿಕ್ಷಣ ಭಾಗ್ಯವನ್ನು ಕಲ್ಪಿಸಿ ಕ್ರಾಂತಿ ಮಾಡಿದವರು ವಚನಕಾರರು ಮತ್ತು ಬಸವಣ್ಣನವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಟೌನ್ ಹಾಲ್ ನಲ್ಲಿ ಫ ಗು ಹಳಕಟ್ಟಿ ಫೌಂಡೇಶನ್ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ ಗು ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು. ಅತ್ಯಂತ ಕೆಳಜಾತಿಯಲ್ಲಿ ಜನಿಸಿ ಅತ್ಯುನ್ನತ ಎತ್ತರಕ್ಕೆ ಏರಿದ ಅಲ್ಲಮಪ್ರಭುರನ್ನು ಅನುಭವ ಮಂಟಪದ ಮುಖ್ಯಸ್ಥರನ್ನಾಗಿಸಿದ್ದರು. ಈ ಅನುಭವ ಮಂಟಪದ ಆಶಯವನ್ನು, ವಚನಗಳ ಮಹತ್ವವನ್ನು ಮುಂದಿನ ತಲೆಮಾರುಗಳಿಗೆ ದಾಟಿಸಿದವರಲ್ಲಿ ಫ.ಗು.ಹಳಕಟ್ಟಿಯವರು ಪ್ರಮುಖರು ಎಂದರು.

ಹುಟ್ಟುವಾಗ ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ, ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ ಎನ್ನುವ ಕುವೆಂಪು ಅವರ ಮಾತನ್ನು ಪ್ರಸ್ತಾಪಿಸಿ ವಿದ್ಯಾವಂತರೂ ಮೌಢ್ಯ ಮತ್ತು ಜಾತಿಯ ವ್ಯಸನಿಗಳಾಗಿದ್ದಾರೆ. ಚಾತುವರ್ಣ ವ್ಯವಸ್ಥೆ ಕಾರಣಕ್ಕೆ ಶಿಕ್ಷಣದಿಂದ, ಸಂಪತ್ತಿನಿಂದ ಶೂದ್ರ ಸಮುದಾಯ ವಂಚಿತವಾಗಿತ್ತು. ಅದಕ್ಕೇ ಕಾಯಕ ಮತ್ತು ದಾಸೋಹ ಸಂಸ್ಕಾರದ ಮೂಲಕ ಸರ್ವರಿಗೂ ಶಿಕ್ಷಣ ಮತ್ತು ಅವಕಾಶಗಳಲ್ಲಿ ಸಮಪಾಲು ಸಿಗುವಂತೆ ಮಾಡಿದ್ದು ಬಸವಣ್ಣನವರು. ನಾನು ಮೊದಲ ಬಾರಿ ಮತ್ತು ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಇದೇ ಕಾಯಕ ಮತ್ತು ದಾಸೋಹ ಸಂಸ್ಕೃತಿಯನ್ನು ಪಾಲಿಸುತ್ತಿದ್ದೇನೆ ಎಂದು ಹೇಳಿದರು.

ಕೈಗಾರಿಕಾ ಸಚಿವ ಎಂ ಬಿ ಪಾಟೀಲ್​ ಮಾತನಾಡಿ, ಎಲ್ಲವೂ ಸಂಸ್ಕೃತದ ಪ್ರಾಬಲ್ಯದಿಂದ ಕೂಡಿದ್ದ 12ನೇ ಶತಮಾನದಲ್ಲಿ ಬಸವಣ್ಣನವರು ಕನ್ನಡವನ್ನು ಬಳಸುವ ಮೂಲಕ ಲಿಂಗಾಯತ ಧರ್ಮಕ್ಕೆ ಹೊಸ ಭಾಷ್ಯವನ್ನೇ ಬರೆದರು. ಆ ಆದರ್ಶವು 900 ವರ್ಷಗಳ ನಂತರವೂ ಕರ್ನಾಟಕವನ್ನು ಮುನ್ನಡೆಸುತ್ತಿದೆ ಎಂದು ಹೇಳಿದರು.

ಎಂ ಎಂ ಕಲಬುರ್ಗಿಯವರು ಬಸವಣ್ಣನವರು ದೇವರೊಂದಿಗೆ ಕನ್ನಡದಲ್ಲಿ ಮಾತನಾಡಿದ ಮಹಾನುಭಾವರು ಎಂದು ಸದಾ ಹೇಳುತ್ತಿದ್ದರು. ಇದರಂತೆ ಈ ನೃತ್ಯ ರೂಪಕವು ಕನ್ನಡೇತರ ಭಾಷೆಯಲ್ಲಿ ಮೈದಾಳಿರುವುದು ವಚನಸಾಹಿತ್ಯದ ಕಿರೀಟಕ್ಕೆ ಇನ್ನೊಂದು ಗರಿಯಾಗಿದೆ ಎಂದು ಬಣ್ಣಿಸಿದರು.

ಹಿಂದೆ ಅ.ನ. ಕೃಷ್ಣರಾಯರು ಮತ್ತು 'ವಚನ ಪಿತಾಮಹ' ಫ.ಗು. ಹಳಕಟ್ಟಿ ಅವರ ದೂರದೃಷ್ಟಿಯಿಂದ ವಚನಗಳ ಗಾಯನ ಸಂಪ್ರದಾಯ ಆರಂಭವಾಯಿತು. ಆಗ ಮಲ್ಲಿಕಾರ್ಜುನ ಮನ್ಸೂರ್​ ಅವರಂತಹ ಗಾಯಕರು ಇದರಲ್ಲಿ ಮುಂಚೂಣಿಯಲ್ಲಿದ್ದರು. ಈಗ ಈ ನೃತ್ಯರೂಪಕವು ಭಾರತದ ಎಲ್ಲೆಡೆ ಬಸವಣ್ಣನವರ ಖ್ಯಾತಿಯನ್ನು ಹಬ್ಬಿಸಲಿ ಎಂದು ಅವರು ಆಶಿಸಿದರು. ಪ್ರಜಾಪ್ರಭುತ್ವ ಮತ್ತು ನಿಜವಾದ ಧರ್ಮ ಎರಡನ್ನೂ ಬೆಸೆಯುವ ಪ್ರಯತ್ನ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ದೇವರನ್ನು ಬಡಬಗ್ಗರ ಹತ್ತಿರಕ್ಕೆ ಕೊಂಡೊಯ್ದ ಅವರು ಅನುಭವ ಮಂಟಪದ ಭಾಗವೂ ಆಗಿದ್ದರು. ಶರಣರ ಇಂತಹ ಸಾಧನೆಗಳನ್ನು ನಾವು ಕನ್ನಡೇತರ ಸಮುದಾಯಗಳಿಗೂ ತಲುಪಿಸಬೇಕು ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತರಾದ ವಚನ ಕ್ಷೇತ್ರದಲ್ಲಿ ಮಹತ್ವದ ಮೌಲ್ಯಯುತ ಸಾಹಿತ್ಯಿಕ ಕೆಲಸ ಮಾಡಿರುವ ಪ್ರೊ. ಎಸ್. ಜಿ.ಸಿದ್ದರಾಮಯ್ಯ, ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ, ಸಮಾಜ ಸೇವಕಿ ಎಸ್.ಜಿ. ಸುಶೀಲಮ್ಮ ಅವರನ್ನು ಸನ್ಮಾನಿಸಲಾಯಿತು. ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಹಿಸಿದ್ದರು. ಶೀಲಾ ಹಳಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಪವಿತ್ರ ಹಳಕಟ್ಟಿ ಸೇರಿ ಹಲವು ಗಣ್ಯರು ಹಾಜರಿದ್ದರು.

ಇದನ್ನೂಓದಿ:12ನೇ ಶತಮಾನದ ಬಸವಾದಿ ಶರಣರ ವಚನಗಳಿಗೆ ಪುನರ್ಜನ್ಮ ಕೊಟ್ಟಿದ್ದು ವಚನ ಗುಮ್ಮಟ ಹಳಕಟ್ಟಿಯವರು: ಡಾ ಸಿ ಕೆ ನಾವಲಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.