ETV Bharat / state

ಅವರೆಲ್ಲ ಬ್ಯೇ,ಬ್ಯೇ.. ಏನ್ರಪ್ಪಾ ತಹಶೀಲ್ದಾರ್ಸ್‌ ನಾಚಿಕೆ ಆಗೋಲ್ವೇ.. ಅಧಿಕಾರಿಗಳ ವಿರುದ್ಧ ಸಚಿವ ಆರ್‌ವಿಡಿ ರೇಗ್ತಾಯಿದ್ರು..

ಕಂದಾಯ ಭವನದಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಬೆಂಗಳೂರು ನಗರ‌ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿ,ಇಲಾಖೆಯ ಸಮಗ್ರ ಮಾಹಿತಿ ಪಡೆದುಕೊಂಡರು. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂ ಒತ್ತುವರಿ ವಿಚಾರ ಸಂಬಂಧ ಎ ಟಿ ರಾಮಸ್ವಾಮಿ ವರದಿ ಕುರಿತು ವಿವರಣೆಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.

ಸಚಿವ ದೇಶಪಾಂಡೆಯಿಂದ ಫುಲ್ ಕ್ಲಾಸ್
author img

By

Published : Jun 12, 2019, 8:28 AM IST

ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ತೆರವು ಸಂಬಂಧ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ. ಕೂಡಲೇ ಸರ್ಕಾರಿ ಜಾಗ ರಕ್ಷಣೆ ಸಂಬಂಧ ಸೂಕ್ತ ಕ್ರಮ ಕೈಗೊಂಡು 30 ದಿನದಲ್ಲಿ ವರದಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಸೂಚನೆ ನೀಡಿದ್ದಾರೆ.

ಕಂದಾಯ ಭವನದಲ್ಲಿ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಬೆಂಗಳೂರು ನಗರ‌ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿ, ಇಲಾಖೆಯ ಸಮಗ್ರ ಮಾಹಿತಿ ಪಡೆದುಕೊಂಡರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂ ಒತ್ತುವರಿ ವಿಚಾರ ಸಂಬಂಧ ಎ ಟಿ ರಾಮಸ್ವಾಮಿ ವರದಿ ಕುರಿತು ವಿವರಣೆ ನೀಡಿದ ಅಧಿಕಾರಿಗಳು 33,887.91 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. 21 ಸಾವಿರ ಎಕರೆ ಒತ್ತುವರಿ ತೆರವು ಮಾಡೋಕೆ ಆಗ್ತಿಲ್ಲ. ತಕರಾರು ಇರೋದ್ರಿಂದ ತೆರವು ಕಷ್ಟವಾಗಿದೆ. ಉಳಿದ ಭೂಮಿಯನ್ನ ನಾವು ತೆರವುಗೊಳಿಸಿದ್ದೇವೆ. 7881.04 ಗುಂಟೆ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಿದೆ. 14,456 ಎಕರೆ ತೆರವು ಮಾಡೋಕೆ ನಮಗೆ ಅವಕಾಶವಿದೆ ಎಂದು ಎ ಟಿ ರಾಮಸ್ವಾಮಿ ವರದಿ ಬಗ್ಗೆ ಸಚಿವ ದೇಶಪಾಂಡೆ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಸಚಿವ ದೇಶಪಾಂಡೆಯಿಂದ ಫುಲ್ ಕ್ಲಾಸ್

16 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ನಾವು ವಶಕ್ಕೆ ಪಡೆದಿದ್ದೇವೆ. ಕೆಲವು ಕಡೆ ಪೆನ್ಸಿಂಗ್ ಮಾಡಿದ್ದೇವೆ, ಇನ್ನೂ ಕೆಲವೆಡೆ ಪೆನ್ಸಿಂಗ್ ಮಾಡಬೇಕಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್, ಸಚಿವರಿಗೆ ತಪ್ಪು ಮಾಹಿತಿಯನ್ನ ನೀಡಬೇಡಿ. 16 ಸಾವಿರ ಎಕರೆಯನ್ನೂ ವಶಕ್ಕೆ ತೆಗೆದುಕೊಂಡಿದ್ದೀರಾ? ಅದರ ದಾಖಲೆಗಳು ಎಲ್ಲಿವೆ, ಸುಳ್ಳನ್ನ ಹೇಳಿ ಸಚಿವರನ್ನ ದಾರಿ ತಪ್ಪಿಸಬೇಡಿ ಎಂದು ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.

ಸಚಿವರ ಮುಂದೆ ಸ್ಪೆಷಲ್ ಜಿಲ್ಲಾಧಿಕಾರಿಗಳ ಅಳಲು:

ಕೆಳಗಿನ ಅಧಿಕಾರಿಗಳು ನಮ್ಮ ಮಾತು ಕೇಳ್ತಿಲ್ಲ, ತಹಶೀಲ್ದಾರ್, ಎಸಿಗಳು ನಮ್ಮ ಸಭೆಗೆ ಬರುವುದಿಲ್ಲ. ನಾವು ಕೊಟ್ಟ ಪತ್ರಗಳಿಗೆ ಉತ್ತರ ಕೊಡೋದಿಲ್ಲ. ಈ ಮೂಲಕ ನಮಗೆ ಕೆಲಸ ಮಾಡಲು ತೊಂದರೆ ಆಗ್ತಿದೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮಹಿಳಾ ವಿಶೇಷ ಅಧಿಕಾರಿಗಳು ಅಳಲು ತೋಡಿಕೊಂಡರು. ಸಭೆಯಲ್ಲಿಯೇ ತಹಶೀಲ್ದಾರ್​​ಗಳಿಗೆ ಕ್ಲಾಸ್ ತೆಗೆದುಕೊಂಡ ಸಚಿವ ದೇಶಪಾಂಡೆ, ಮಹಿಳಾ ಅಧಿಕಾರಿಗಳಿಗೆ ಸಹಕಾರ ಕೊಡೋಕೆ ಏನಾಗಿದೆ? ಏನಪ್ಪಾ ತಹಶೀಲ್ದಾರ್ಸ್ ನಾಚಿಕೆ ಆಗಲ್ವಾ ನಿಮಗೆ? ಎಂದು ಹೇಳಿ ತಹಶೀಲ್ದಾರ್ ಮಂಜಪ್ಪಗೆ ಫುಲ್ ಕ್ಲಾಸ್ ತೆಗೆದುಕೊಂಡರು.

ಮಹಿಳಾ ಅಧಿಕಾರಿಗಳಿಗೂ ವಾರ್ನಿಂಗ್:

ಆಡಳಿತದಲ್ಲಿ ಪಾರದರ್ಶಕತೆ ಮುಖ್ಯ. ನೋಡಮ್ಮ, ನೀನು ಕೆಲಸಕ್ಕೆ ಒತ್ತುಕೊಡಬೇಕು, ನಾವು ಆಡಳಿತದಲ್ಲಿ ಪಾರದರ್ಶಕತೆ ತಂದಿದ್ದೇವೆ. ಕೆಲಸ ಮಾಡದಿದ್ರೆ ಕ್ರಮತೆಗೆದುಕೊಳ್ಳಬೇಕಾಗುತ್ತದೆ ಎಂದು ಮಹಿಳಾ ಅಧಿಕಾರಿಗೆ ದೇಶಪಾಂಡೆ ವಾರ್ನಿಂಗ್ ಮಾಡಿದರು. ಈ ವೇಳೆ ಬಿ-ಖರಾಬ್‌ನ ಎ-ಖರಾಬ್ ಮಾಡಲಾಗಿದೆ ಎಂದು ಯಶವಂತಪುರ ಶಾಸಕ ಎಸ್ ಟಿ‌ ಸೋಮಶೇಖರ್ ಆರೋಪಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಬಿ-ಖರಾಬ್ ಭೂಮಿಯನ್ನ ಎ-ಖರಾಬ್​​​ಗೆ ಬದಲಾವಣೆ ಮಾಡಲು ಆಗಲ್ಲ. ಕೂಡಲೇ ಇದರ ಬಗ್ಗೆ ವರದಿ ನೀಡಿ ಎಂದು ಬೆಂಗಳೂರು ಡಿಸಿಗೆ ದೇಶಪಾಂಡೆ ಸೂಚನೆ ನೀಡಿದರು.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದೇಶಪಾಂಡೆ, 136/3 ಅಡಿ ಪ್ರಕರಣಗಳ ವಿಲೇವಾರಿ ಪ್ರಗತಿ ಬಹಳ ಮಂದಗತಿಯಲ್ಲಿ ಸಾಗಿದೆ. ಇದಕ್ಕೆ ತಹಶೀಲ್ದಾರ್ ಮತ್ತು ಎಸಿಗಳನ್ನೇ ಇದಕ್ಕೆ ಹೊಣೆ ಮಾಡುತ್ತೇನೆ. ಅವರಿಗೆಲ್ಲ ಈಗಾಗಲೇ ಸೂಚನೆ ನೀಡಿದ್ದೇನೆ. ಮೂರು ದಿನದಲ್ಲಿ ಸಭೆ ನಡೆಸಿ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇನ್ನೊಂದು ವಾರದಲ್ಲಿ ಇದರ ಪರಿಶೀಲನೆ ಮಾಡುತ್ತೇನೆ ಎಂದರು.

Intro:ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ತೆರವು ಸಂಬಂಧ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಸಿದ್ದವಿದೆ.ಕೂಡಲೇ ಸರ್ಕಾರಿ ಜಾಗ ರಕ್ಷಣೆ ಸಂಬಂಧ ಸೂಕ್ತ ಕ್ರಮ ಕೈಗೊಂಡು 30 ದಿನದಲ್ಲಿ ವರದಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಸೂಚನೆ ನೀಡಿದ್ದಾರೆ.Body:

ಕಂದಾಯ ಭವನದಲ್ಲಿ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಬೆಂಗಳೂರು ನಗರ‌ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿದರು.ಇಲಾಖೆಯ ಸಮಗ್ರ ಮಾಹಿತಿ ಪಡೆದುಕೊಂಡರು.ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂ ಒತ್ತುವರಿ ವಿಚಾರ ಸಂಬಂಧ ಎ.ಟಿ.ರಾಮಸ್ವಾಮಿ ವರದಿ ಕುರಿತು ವಿವರಣೆ ನೀಡಿದ ಅಧಿಕಾರಿಗಳು 33,887.91 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ 21 ಸಾವಿರ ಎಕರೆ ಒತ್ತುವರಿ ತೆರವು ಮಾಡೋಕೆ ಆಗ್ತಿಲ್ಲ ತಕರಾರು ಇರೋದ್ರಿಂದ ತೆರವು ಕಷ್ಟವಾಗಿದೆ ಉಳಿದ ಭೂಮಿಯನ್ನ ನಾವು ತೆರವುಗೊಳಿಸಿದ್ದೇವೆ.7881.04 ಕುಂಟೆ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಿದೆ 14,456 ಎಕರೆ ತೆರವು ಮಾಡೋಕೆ ನಮಗೆ ಅವಕಾಶವಿದೆ ಎ.ಟಿ.ರಾಮಸ್ವಾಮಿ ವರದಿ ಬಗ್ಗೆ ದೇಶಪಾಂಡೆಗೆ ಮಾಹಿತಿ ನೀಡಿದರು.

16 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ನಾವು ವಶಕ್ಕೆ ಪಡೆದಿದ್ದೇವೆ ಕೆಲವು ಕಡೆ ಪೆನ್ಸಿಂಗ್ ಮಾಡಿದ್ದೇವೆ ಇನ್ನೂ ಕೆಲವು ಕಡೆ ಪೆನ್ಸಿಂಗ್ ಮಾಡಬೇಕಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್,ಸಚಿವರಿಗೆ ತಪ್ಪು ಮಾಹಿತಿಯನ್ನ ನೀಡಬೇಡಿ 16 ಸಾವಿರ ಎಕರೆ ಎಲ್ಲಿ ವಶಕ್ಕೆ ತೆಗೆದುಕೊಂಡಿದ್ದೀರಾ ಅದರ ದಾಖಲೆಗಳು ಎಲ್ಲಿವೆ ಸುಳ್ಳನ್ನ‌ ಹೇಳಿ ಸಚಿವರನ್ನ ದಾರಿ ತಪ್ಪಿಸಬೇಡಿ ಎಂದು
ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.

ಸಚಿವರ ಮುಂದೆ ಸ್ಪೆಷಲ್ ಜಿಲ್ಲಾಧಿಕಾರಿಗಳ ಅಳಲು:

ಕೆಳಗಿನ ಅಧಿಕಾರಿಗಳು ನಮ್ಮ ಮಾತು ಕೇಳ್ತಿಲ್ಲ ತಹಶೀಲ್ದಾರ್, ಎಸಿ ಗಳು ನಮ್ಮ‌ ಸಭೆಗೆ ಬರುವುದಿಲ್ಲ ನಾವು ಕೊಟ್ಟ ಪತ್ರಗಳಿಗೆ ಉತ್ತರ ಕೊಡೋದಿಲ್ಲ ಈ ಮೂಲಕ ನಮಗೆ ಕೆಲಸ ಮಾಡಲು ತೊಂದರೆ ಆಗ್ತಿದೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಕಚೇರೀಯ ಮಹಿಳಾ ವಿಶೇಷ ಅಧಿಕಾರಿಗಳು ಅಳಲು ತೋಡಿಕೊಂಡರು. ಸಭೆಯಲ್ಲಿಯೇ ತಹಶೀಲ್ದಾರ್ ಗಳಿಗೆ ಕ್ಲಾಸ್ ತೆಗೆದುಕೊಂಡ ಸಚಿವ ದೇಶಪಾಂಡೆ ಮಹಿಳಾ ಅಧಿಕಾರಿಗಳಿಗೆ ಸಹಕಾರ ಕೊಡೋಕೆ ಏನಾಗಿದೆ?ಏನಪ್ಪಾ ತಹಶೀಲ್ದಾರ್ಸ್ ನಾಚಿಕೆ ಆಗಲ್ವಾ ನಿಮಗೆ? ತಹಸೀಲ್ದಾರ್ ಮಂಜಪ್ಪಗೆ ಫುಲ್ ಕ್ಲಾಸ್ ತೆಗೆದುಕೊಂಡರು ಇನ್ಮುಂದೆ‌ ಈ‌ ರೀತಿ ಆಗಬಾರದು ಎಂದು ಸೂಚನೆ ನೀಡೊದರು.

ಮಹಿಳಾ ಅಧಿಕಾರಿಗಳಿಗೂ ವಾರ್ನಿಂಗ್:

ಆಡಳಿತದಲ್ಲಿ ಪಾರದರ್ಶಕತೆ ಮುಖ್ಯ ನೋಡಮ್ಮ ನೀನು ಕೆಲಸಕ್ಕೆ ಒತ್ತುಕೊಡಬೇಕು ನಾವು ಆಡಳಿತದಲ್ಲಿ ಪಾರದರ್ಶಕತೆ ತಂದಿದ್ದೇವೆ ಕೆಲಸ ಮಾಡದಿದ್ರೆ ಕ್ರಮತೆಗೆದುಕೊಳ್ಳ ಬೇಕಾಗುತ್ತದೆ ಮಹಿಳಾ ಅಧಿಕಾರಿಗೆ ದೇಶಪಾಂಡೆ ವಾರ್ನಿಂಗ್ ನೀಡಿದರು.

ಈ ವೇಳೆ ಬಿ-ಖರಾಬ್ ಅನ್ನ ಎ -ಖರಾಬ್ ಮಾಡಲಾಗಿದೆ ಎಂದು ಯಶವಂತಪುರ ಶಾಸಕ ಎಸ್.ಟಿ‌.ಸೋಮಶೇಖರ್ ಆರೋಪಿಸಿದರು. ಇದಕ್ಕೆ ಸ್ಪಂಧಿಸಿದ ಸಚಿವರು ಬಿ ಖರಾಬ್ ಭೂಮಿ ಎ ಖರಾಬ್ ಗೆ ಬದಲಾವಣೆ ಮಾಡಲು ಆಗಲ್ಲ ಕೂಡಲೇ ಇದರ ಬಗ್ಗೆ ವರದಿ ನೀಡಿ ಎಂದು ಬೆಂಗಳೂರು ಡಿಸಿಗೆ ದೇಶಪಾಂಡೆ ಸೂಚನೆ ನೀಡಿದರು.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದೇಶಪಾಂಡೆ, 136/3 ಅಡಿ ಪ್ರಕರಣಗಳ ವಿಲೇವಾರಿ ಪ್ರಗತಿ ಬಹಳ ಮಂದಗತಿಯಲ್ಲಿ ಸಾಗಿದೆ ಇದಕ್ಕೆ ತಹಶೀಲ್ದಾರ್ ಮತ್ತು ಎಸಿಗಳನ್ನೇ ಇದಕ್ಕೆ ಹೊಣೆ ಮಾಡುತ್ತೇನೆ ಅವರಿಗೆಲ್ಲ ಈಗಾಗಲೇ ಸೂಚನೆ ನೀಡಿದ್ದೇನೆ ಮೂರು ದಿನದಲ್ಲಿ ಸಭೆ ನಡೆಸಿ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಇನ್ನೊಂದು ವಾರದಲ್ಲಿ ಇದರ ಪರಿಶೀಲನೆ ಮಾಡುತ್ತೇನೆ ಎಂದು‌ ಎಚ್ಚರಿಕೆ ನೀಡಿದರು.

ಸರ್ಕಾರಕ್ಕೆ ಸೇರಿದ 16 ಸಾವಿರಕ್ಕೂ ಹೆಚ್ಚಿನ ಭೂಮಿ ಕಾನೂನು ವಿವಾದದಲ್ಲಿದೆ ಸರ್ಕಾರಿ ಜಾಗವನ್ನ ಹೇಗೆ ರಕ್ಷಣೆ ಮಾಡುತ್ತಿದ್ದೀರಿ? ಜಿಪಿಎಸ್ ಮಾಡಿದ್ದೀರಾ? ಸರ್ಕಾರಿ ಭೂಮಿಯ ಒತ್ತುವರಿ ತೆರವು ಸಂಬಂಧ ಕಾನೂನು ಕಟ್ಟಳೆಗಳನ್ನು ಇತ್ಯರ್ಥೊಡಿಸಿಕೊಳ್ಳಲು ಮುಂದಾಗಿ,ಎಲ್ಲ‌ ಸಹಕಾರ ನಾವು ನೀಡುತ್ತೇವೆ, ಕಾನೂನು ಪ್ರಕಾರ ಭೂಮಿ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.

ಜೂನ್ 24 ರಿಂದ 30ರವರೆಗೆ ರಾಜ್ಯಾದ್ಯಂತ ಕಡತಗಳ ವಿಲೇವಾರಿಯಾಗಲಿದೆ ಹಾಗಾಗಿ ಈ ಅವಧಿಯಲ್ಲಿ ಕೇವಲ ಕಡತಗಳ ವಿಲೇವಾರಿ ಕೆಲಸ ಮಾತ್ರ ಮಾಡಬೇಕು,
ವ್ಯಾಜ್ಯಗಳ ಇತ್ಯರ್ಥ ಪಡಿಸುವ ಕೆಲಸ ಮಾಡಬೇಕು‌, ಡಿ.ಸಿ ಗಿಂತ ಕೆಳಗಿನ ಎಲ್ಲ ಅಧಿಕಾರಿಗಳು ಈ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು..
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.