ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಏಷ್ಯಾದ ಅತಿ ದೊಡ್ಡ ಟಾನಿಕ್ ಮದ್ಯದ ಮಳಿಗೆ ಮುಂದೆ ನಿನ್ನೆ ಹಲವಾರು ಹೈಫೈ ಮಂದಿ ಸಾಲಿನಲ್ಲಿ ನಿಂತು ಎಣ್ಣೆ ಖರೀದಿಸಿದ್ದರು. ಒಂದೇ ಒಂದು ದಿನದಲ್ಲಿ ಈ ಟಾನಿಕ್ ಮದ್ಯದಂಗಡಿ 4.1ಕೋಟಿ ವಹಿವಾಟು ನಡೆಸಿದೆ.
ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ನಿನ್ನೆಯಿಂದ ಮದ್ಯದಂಗಡಿ ತೆರೆಯಲಾಗಿತ್ತು. ಹೀಗಾಗಿ ಬಹುತೇಕ ಮಧ್ಯಮ ವರ್ಗದ ಜನ ಸ್ಥಳೀಯ ಅಂಗಡಿಗೆ ತೆರಳಿ ಖರೀದಿ ಮಾಡಿದ್ರೆ, ಹೈಫೈ ಜನ ಟಾನಿಕ್ ಎದುರು ನಿಂತಿದ್ದರು.
ಕಬ್ಬನ್‌ಪಾರ್ಕ್ ಠಾಣಾ ಎದುರಿನ ಕಸ್ತೂರಬಾ ರಸ್ತೆ ಬಳಿ ಈ ಟಾನಿಕ್ ಶಾಪ್ ಇದೆ. ಇದು ಅತಿ ದುಬಾರಿ ಮದ್ಯ ಮಾರಾಟ ಮಾಡುವ ಶಾಪ್. ಇಲ್ಲಿ ಸುಮಾರು 750 ವೆರೈಟಿ ಬ್ರ್ಯಾಂಡ್ಗಳು ಲಭ್ಯ. ದೇಶ ಸೇರಿ ವಿದೇಶದ ಮದ್ಯವನ್ನೂ ಇಲ್ಲಿ ಮಾರಾಟ ಮಾಡಲಾಗುತ್ತದೆ.