ETV Bharat / state

ಬೆಂಗಳೂರು ಟೆಕ್ ಶೃಂಗಸಭೆ 2020: ಜನರ ಜೀವನ ಬದಲಿಸಿದ ಡಿಜಿಟಲ್​ ಲೋಕ - ಮೋದಿ ಬಣ್ಣನೆ - ಬೆಂಗಳೂರು ಟೆಕ್ ಶೃಂಗಸಭೆ 2020ಗೆ ಪ್ರಧಾನಿ ಮೋದಿಯಿಂದ ಚಾಲನೆ,

ಮೂರು ದಿನಗಳ ಕಾಲ ನಡೆಯಲಿರುವ ಬೆಂಗಳೂರು ಟೆಕ್ ಶೃಂಗಸಭೆಗೆ ಪ್ರಧಾನಿ ಮೋದಿ ಚಾಲನೆ ನೀಡಿ ಭಾಷಣ ಮಾಡಿದರು.

Bangalore Tech Summit, Bangalore Tech Summit 2020 inaugurated, Bangalore Tech Summit 2020 inaugurated by PM Modi, Bangalore Tech Summit 2020 news, ಬೆಂಗಳೂರು ಟೆಕ್ ಶೃಂಗಸಭೆ, ಬೆಂಗಳೂರು ಟೆಕ್ ಶೃಂಗಸಭೆ 2020ಗೆ ಚಾಲನೆ, ಬೆಂಗಳೂರು ಟೆಕ್ ಶೃಂಗಸಭೆ 2020ಗೆ ಪ್ರಧಾನಿ ಮೋದಿಯಿಂದ ಚಾಲನೆ, ಬೆಂಗಳೂರು ಟೆಕ್ ಶೃಂಗಸಭೆ 2020 ಸುದ್ದಿ,
ಡಿಜಿಟಲ್​ನಿಂದ ಜನರ ಬದುಕು ಬದಲಾಗಿದೆ ಎಂದ ಮೋದಿ
author img

By

Published : Nov 19, 2020, 1:22 PM IST

ಬೆಂಗಳೂರು: 23ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್ 2020 ಇಂದಿನಿಂದ ಚಾಲನೆ ದೊರೆತ್ತಿದ್ದು, ನವೆಂಬರ್ 19 ರಿಂದ 21ರ ವರೆಗೆ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ವರ್ಚ್ಯುವಲ್ ಮೂಲಕ ಬೆಂಗಳೂರಿನ ಖಾಸಗಿ ಹೊಟೇಲ್​ನಲ್ಲಿ ಶೃಂಗಸಭೆ ನಡೆಯುತ್ತಿದೆ.

ಇಂದು ಪ್ರಧಾನಿ ನರೇಂದ್ರ ಮೋದಿಯಿಂದ ಟೆಕ್ ಸಮ್ಮಿಟ್ ಉದ್ಘಾಟನೆಗೊಂಡಿತು. ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಡಿಜಿಟಲ್​ನಿಂದ ಜನರ ಬದುಕು ಬದಲಾಗಿದೆ ಎಂದ ಮೋದಿ

ಬೆಂಗಳೂರು ಟೆಕ್​ ಶೃಂಗಸಭೆಗೆ ಅಧಿಕೃತವಾಗಿ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಅಂತರ್ಜಾಲ 25 ವರ್ಷಗಳ ಹಿಂದೆಯೇ ಭಾರತಕ್ಕೆ ಬಂದಿತು. ಇಂಟರ್​ನೆಟ್​ ಚಂದಾದಾರರಲ್ಲಿ ಅರ್ಧದಷ್ಟು ಜನರು 4 ವರ್ಷಗಳ ಹಿಂದೆ ಸೇರಿದ್ದಾರೆ. ತಂತ್ರಜ್ಞಾನವು ಜನರ ಜೀವನವನ್ನು ಬದಲಿಸಿದೆ. ತಂತ್ರಜ್ಞಾನದ ಮೂಲಕ ಇಂದು ನಾವು ಬಡವರಿಗೆ ಸಹಾಯ ಮಾಡಬಹುದಾಗಿದೆ. ನಾವು ತಂತ್ರಜ್ಞಾನಕ್ಕೆ ಧನ್ಯವಾದ ಹೇಳಬೇಕು ಎಂದರು.

ನಾವು ಎಲ್ಲ ಮನೆಗಳಿಗೆ ವಿದ್ಯುತ್ ಒದಗಿಸಿದ್ದೇವೆ. ಅಂದರೆ ಅದಕ್ಕೆ ತಂತ್ರಜ್ಞಾನವೇ ಕಾರಣ ಎಂದ ಅವರು, ಇದೊಂದು ಐತಿಹಾಸಿಕ ಟೆಕ್ ಸಮ್ಮಿಟ್. ಐದು ವರ್ಷಗಳ ಹಿಂದೆ ನಾವು ಡಿಜಿಟಲ್ ಇಂಡಿಯಾ ಪರಿಚಯಿಸಿದೆವು ಎಂದು ಭಾರತದ ಸಾಧನೆಯನ್ನು ಕೊಂಡಾಡಿದರು.

ಈಗ ಡಿಜಿಟಲ್ ಇಂಡಿಯಾ ಅಂದರೆ ನಮ್ಮ ಜನರ ಜೀವನ ಶೈಲಿ. ನಮ್ಮ ದೇಶ ಡಿಜಿಟಲ್ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಈ‌ ಕಾರಣದಿಂದ ಜನರ ಬದುಕು ಬದಲಾಗಿದೆ. ನಮ್ಮ ಸರ್ಕಾರ ತಾಂತ್ರಿಕ ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸಿದೆ. ನಮ್ಮ ಸರ್ಕಾರ ಟೆಕ್ನಾಲಜಿಗೆ ಆದ್ಯತೆ ಕೊಟ್ಟಿದೆ. ಕೃಷಿಕ ಸಮುದಾಯವೂ ಈ ತಾಂತ್ರಿಕ ಅಭಿವೃದ್ಧಿಯನ್ನು ಕಂಡಿದೆ ಎಂದರು.

ಕೋವಿಡ್ ಕಾಲದಲ್ಲಿ ತಾಂತ್ರಿಕೆಯೇ ಆಡಳಿತ ನಡೆಸಿದೆ. ಆಯುಷ್ಮಾನ್ ಭಾರತ್ ತಾಂತ್ರಿಕ ಅಭಿವೃದ್ಧಿಯ ಕೂಸು. ನಮ್ಮ ಸರ್ಕಾರಕ್ಕೆ ಡೆಟಾ ಅನಾಲಿಸಿಸ್ ಮಾಡೋ ತಾಕತ್ತಿದೆ. ಬಡವರಿಗೆ ತಾಂತ್ರಿಕ ವಲಯಕ್ಕೆ ಪ್ರವೇಶ ‌ಇರಲಿಲ್ಲ. ಆದರೆ ಈಗ ಬಡವರು ಕೂಡ ತಂತ್ರಜ್ಞಾನದ ಭಾಗವೇ ಆಗಿದ್ದಾರೆ. ಆಡಳಿತ, ಬದುಕು, ಅಭಿವೃದ್ಧಿ ಹೀಗೆ ಎಲ್ಲದರಲ್ಲೂ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಡಿಜಿಟಲ್​ ಭಾರತ ಕನಸು ನನಸಿನ ವಿಚಾರವನ್ನ ಪ್ರಧಾನಿ ಮಂಡಿಸಿದರು.

ಸಣ್ಣ ಅವಧಿಯಲ್ಲೇ ತಂತ್ರಜ್ಞಾನ ಹಿಡಿತ ಸಾಧಿಸಿಕೊಂಡಿದೆ. ತಂತ್ರಜ್ಞಾನ ತನ್ನದೇ ಆದ ಸಾಂಸ್ಕೃತಿಕತೆಯನ್ನು ಕಂಡುಕೊಂಡಿದೆ. ಮುಂದಿನ ದಿನಗಳು ತಂತ್ರಜ್ಞಾನವನ್ನೇ ಆಧರಿಸಿಕೊಂಡಿರಲಿದೆ. ಸಂಕಷ್ಟ ಸಮಯದಲ್ಲಿ ಪ್ರತಿಭೆಯನ್ನು ಹೊರಹಾಕುವುದು ಬಹಳ ಕಷ್ಟದ ವಿಚಾರ. ಆದರೆ ನಾವು ಅದನ್ನೂ ಸಾಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದೇವೆ. ಗ್ಲೋಬಲ್ ಡೈವರ್ಸಿಟಿ (ಜಾಗತಿಕ ವೈವಿಧ್ಯತೆ) ಈಗ ಟೆಕ್ನಾಲಜಿ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದರು.

ಪ್ರತಿ ಕ್ಷೇತ್ರದಲ್ಲೂ ಈಗ ಟೆಕ್ನಾಲಜಿ ಅನಿವಾರ್ಯತೆ ಆಗಿದೆ. ಕೊರೊನಾ ಕಾಲದಲ್ಲಿ ನಾವು ನೋಡಿದ್ದು ' ರಸ್ತೆಯ ತಿರುವು ಮಾತ್ರ, ಆದರೆ ಅದೇ ಕೊನೆಯಲ್ಲ’ (ಏ ಥೋ ರಾಸ್ತೆಕಾ ಏಕ್ ಬೆಂಡ್ ಥಾ, ಲೆಕಿನ್ ಎಂಡ್ ನಹೀ) ಎಂದರು.

ನಾವು ಮಾಹಿತಿ ತಂತ್ರಜ್ಞಾನದ ಮಧ್ಯ ಕಾಲಘಟ್ಟದಲ್ಲಿದ್ದೇವೆ. ಕೈಗಾರಿಕೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಡಿಜಿಟಲ್ ಇಂಡಿಯಾ ಜೀವನದ ಒಂದು ಭಾಗವಾಗಿದೆ. ದೊಡ್ಡ ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಬಳಸುವುದರಿಂದ ಹಲವರ ಜೀವನಗಳು ಜೊತೆಯಾಗಿವೆ. ಡಿಜಿಟಲ್ ಇಂಡಿಯಾ ಬಡವರಿಗೆ ಸಹಾಯ ಮಾಡುತ್ತಿದೆ ಎಂದರು.

ಈಗ ಎಲ್ಲವೂ ಎಲ್ಲರ ಕೈಗೆಟಕುವ ಜಾಗದಲ್ಲಿದೆ. ಇದು ತಂತ್ರಜ್ಞಾನದಿಂದ ಸಾಧ್ಯವಾಗಿದೆ. ನಮ್ಮಲ್ಲಿ‌ ಈಗ ಎಲ್ಲಾ ರೀತಿಯ ಸಮಸ್ಯೆಗಳಿಗೂ ಪರಿಹಾರ ಇದೆ. ಭಾರತ ಸೂಪರ್ ಪವರ್ (ಬಡಾ ಶಕ್ತಿ) ಆಗಿ‌ ಹೊರಹೊಮ್ಮುತ್ತಿದೆ ಎಂದರು.

ಡಿಜಿಟಲ್ ಪೇಮೆಂಟ್ ಅನ್ನೋದು‌ ಟೆಕ್ನಾಲಜಿ ಕ್ಷೇತ್ರದಲ್ಲಿ ಆದ ಕ್ರಾಂತಿ. 2 ಬಿಲಿಯನ್ ವ್ಯವಹಾರಗಳು ಡಿಜಿಟಲ್ ಪೇಮೆಂಟ್ ಕ್ಷೇತ್ರದಲ್ಲಿ ಕಂಡಿದ್ದೇವೆ. ಟೆಕ್ನಾಲಜಿ ಅನ್ನೋದು ನಮ್ಮ ನೆಮ್ಮದಿಯ‌ ಮೂಲ ಮಂತ್ರ ಆಗಲಿದೆ. ದೇಶದ ಭದ್ರತಾ ಕ್ಷೇತ್ರವನ್ನು ಟೆಕ್ನಾಲಜಿ ರಿ ಡಿಫೈಂಡ್ ಮಾಡಿದೆ. ನಮ್ಮ ದೇಶದ ಸೈಬರ್ ಕ್ಷೇತ್ರವನ್ನು ತಂತ್ರಜ್ಞಾನ ಗಟ್ಟಿಗೊಳಿಸಿದೆ. ನಾವು ಹಲವು ಸವಾಲುಗಳನ್ನು ತಂತ್ರಜ್ಞಾನದ ಮೂಲಕ ಗೆದ್ದು ಬಂದಿದ್ದೇವೆ. ಆದರೆ ನಾವು ಮಾಹಿತಿ ತಂತ್ರಜ್ಞಾನದ ಗುರಿ ಹೊಂದಿದ್ದೇವೆ. ಈ ಕ್ಷೇತ್ರದಲ್ಲಿ ನಾವು ಮೇಲುಗೈ ಸಾಧಿಸಿದರೆ ಭಾರತ ಬ್ರಹ್ಮಾಂಡವಾಗಿ ಹೊರಹೊಮ್ಮಲಿದೆ ಎಂದು ಹೇಳಿದ ಪಿಎಂ ಮೋದಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.