ಬೆಂಗಳೂರು : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರು ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಮಹಿಳಾ ದಿನದಂದು ಈಟಿವಿ ಭಾರತ್ ಜೊತೆ ಖಡಕ್ ಪೊಲೀಸ್ ಅಧಿಕಾರಿ ರೋಹಿಣಿ ಕಟೊಚ್ ಮನದಾಳವನ್ನು ಹಂಚಿಕೊಂಡಿದ್ದಾರೆ.
ರೋಹಿಣಿ ಕಟೊಚ್ ಪತಿ ರಾಂ ನಿವಾಸ್ ಸಪೆಟ್ ಕೂಡ ಐಪಿಎಸ್ ಅಧಿಕಾರಿ. 2008 ರ ತಂಡದಲ್ಲಿ ಐಪಿಎಸ್ ಅಧಿಕಾರಿಯಾದ ರೋಹಿಣಿ ಕಟೋಚ್ ಸಪೆಟ್ ದಕ್ಷಿಣ ವಿಭಾಗದ ಡಿಸಿಪಿಯಾಗಿ ಆಯ್ಕೆಯಾದರು. ವೈದ್ಯರ ಕುಟುಂಬದಿಂದ ಬಂದಿರುವ ಡಾ.ರೋಹಿಣಿ ಅವರು ಓದಿದ್ದು ಎಂಬಿಬಿಎಸ್. ಬಳಿಕ ಐಪಿಎಸ್ ಆಗಬೇಕೆಂಬ ಛಲತೊಟ್ಟು 2008ರಲ್ಲಿ ಐಪಿಎಸ್ ಅಧಿಕಾರಿಯಾದರು.
ರಾಜಸ್ಥಾನ ಮೂಲದ ಸಪೆಟ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೇಷನರಿ ಕಾರ್ಯ ನಿರ್ವಹಿಸಿದರು. ಬಳಿಕ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿ, ಫಾರೆನ್ಸಿಕ್ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದಕ್ಷಿಣ ವಿಭಾಗದಲ್ಲಿ ಮಹಿಳೆಯರ ರಕ್ಷಣೆಗೆ ಕೆಲ ಯೋಜನೆಗಳನ್ನ ಹಮ್ಮಿಕೊಂಡಿದ್ದು, ಮಹಿಳೆಯರು ಯಾವುದಕ್ಕೂ ಭಯಪಡದೇ ಮುನ್ನುಗ್ಗಿ. ಮನೆಯಲ್ಲಿ ಇರಬೇಡಿ ಎಂದು ಕಿವಿ ಮಾತು ಹೇಳಿದರು.