ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ವೇಳೆ ಭಾಗಿಯಾಗಿ ತಲೆಮರೆಸಿಕೊಂಡಿರುವ ಅಬ್ದುಲ್ ವಾಜೀದ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಕೊರೊನಾ ವಿಚಾರವಾಗಿ ಶಾಸಕರು ಕೆಲಸ ಮಾಡುತ್ತಿಲ್ಲ. ಹೀಗಾಗಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಣೆಯಾಗಿದ್ದಾರೆ ಎಂದು ಫೇಸ್ ಬುಕ್ ಪೋಸ್ಟ್ನಲ್ಲಿ ವಾಜೀದ್ ಬರೆದುಕೊಂಡಿದ್ದ.
ಇದನ್ನು ಕಂಡು ಆಕ್ರೋಶಗೊಂಡ ಶಾಸಕರು, ವಾಜೀದ್ನನ್ನು ಕರೆಯಿಸಿ ಬುದ್ಧಿ ಹೇಳಿ ಇಲ್ಲದಿದ್ದರೆ ಎಫ್ಐಆರ್ ಹಾಕಿ ಎಂದು ಡಿ.ಜಿ.ಹಳ್ಳಿ ಪೊಲೀಸರಿಗೆ ಸೂಚನೆ ನೀಡಿದ್ದರು. ಇದರಂತೆ ವಾಜೀದ್ಗೆ ಬುದ್ಧಿ ಹೇಳಿ ಪೊಲೀಸರು ಕಳುಹಿಸಿದ್ದರು.
ನಂತರ ನವೀನ್ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ. ಶಾಸಕರ ಮೇಲೆ ಮೊದಲೇ ಸಿಟ್ಟಿದ ವಾಜೀದ್ಗೆ ಆಕ್ಷೇಪಾರ್ಹ ಪೋಸ್ಟ್ ಮುಂದಿಟ್ಟುಕೊಂಡು ಸಹಚರರನ್ನು ಕರೆಯಿಸಿಕೊಂಡು ಠಾಣೆಗೆ ಬಂದು ದೂರು ನೀಡಿ ಬಂಧಿಸುವಂತೆ ಒತ್ತಾಯಿಸಿದ್ದ.
ಬಂಧನ ವಿಚಾರ ವೇಳೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದ. ಕೂಡಲೇ ಎಸ್ಡಿಪಿಐ ಮುಖಂಡ ಮೊಹಮ್ಮದ್ ಮುಜಾಮಿಲ್ ಸೇರಿದಂತೆ ಮತ್ತಿತರನ್ನು ಕರೆಯಿಸಿಕೊಂಡು ಗಲಾಟೆ ಸೃಷ್ಟಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ವಾಜೀದ್ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.