ETV Bharat / state

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ 2022ರ ಸೆಪ್ಟೆಂಬರ್​ನಲ್ಲಿ ಸಿದ್ದ : ಸಚಿವ ಸಿ ಸಿ ಪಾಟೀಲ್ - 2022ಕ್ಕೆ ಬೆಂಗಳೂರು ಮೈಸೂರು ಹೆದ್ದಾರಿ ಕಾಮಗಾರಿ ಪೂರ್ತಿ

ಪಿಡಬ್ಲ್ಯೂಡಿ ರಸ್ತೆ ವಿಚಾರವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ಸಂಜಯ್ ಪಾಟೀಲ್ ಪರಸ್ಪರ ಕೆಸರೆರಚಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡದ ಸಚಿವರು, ನಾನು ಮಾಧ್ಯಮದ ಮುಂದೆ ಆ ಬಗ್ಗೆ ಮಾತನಾಡಲ್ಲ. ರಸ್ತೆಗಳ ಅಭಿವೃದ್ಧಿಯನ್ನ ಮಾಡುತ್ತೇವೆ ಎಂದರು..

cc patil
ಸಚಿವ ಸಿಸಿ ಪಾಟೀಲ್
author img

By

Published : Oct 1, 2021, 3:06 PM IST

ಬೆಂಗಳೂರು : ಕಾರಣಾಂತರದಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿಯಲ್ಲಿ ವಿಳಂಬವಾಗಿದೆ. ಆದರೂ ಸಹ ನಿಗದಿತ ಸಮಯ 2022ರ ಸಪ್ಟೆಂಬರ್‌ ಒಳಗೆ ಪೂರ್ತಿಯಾಗಲಿದೆ ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್​ ಭರವಸೆ ನೀಡಿದರು.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ 2022ರ ಸೆಪ್ಟೆಂಬರ್​ನಲ್ಲಿ ಸಿದ್ಧ..

ನಗರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಅವರು, ಇಲಾಖೆಯ ಒಂದಷ್ಟು ಕಾಮಗಾರಿಗಳು ಸ್ಥಗಿತಗೊಂಡಿವೆ. ಸತತವಾಗಿ 2017ರಿಂದ ನಿರಂತರ ಮಳೆಯಾಗುತ್ತಿದೆ. ಇದರಿಂದ ಕೆಲ ಪ್ರದೇಶಗಳಿಗೆ ಹಾನಿಯಾಗಿದೆ.

ಅದನ್ನ ಸರಿಪಡಿಸಲು ಶೀಘ್ರವೇ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಬಳಿ ಮನವಿ ಮಾಡಿದ್ದೇನೆ. ಆದಷ್ಟು ಬೇಗ ಕಾಮಗಾರಿಗಳನ್ನ ಮಾಡಿ ಮುಗಿಸುತ್ತೇವೆ ಎಂದು ಸಚಿವ ಪಾಟೀಲ್​ ಹೇಳಿದರು.

ಪಿಡಬ್ಲ್ಯೂಡಿ ರಸ್ತೆ ವಿಚಾರವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ಸಂಜಯ್ ಪಾಟೀಲ್ ಪರಸ್ಪರ ಕೆಸರೆರಚಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡದ ಸಚಿವರು, ನಾನು ಮಾಧ್ಯಮದ ಮುಂದೆ ಆ ಬಗ್ಗೆ ಮಾತನಾಡಲ್ಲ. ರಸ್ತೆಗಳ ಅಭಿವೃದ್ಧಿಯನ್ನ ಮಾಡುತ್ತೇವೆ ಎಂದರು.

ಸಿಂದಗಿ, ಹಾನಗಲ್ ಉಪಚುನಾವಣೆ : ಯಾರಿಗೆ ಟಿಕೆಟ್ ನೀಡಬೇಕು ಅಂತಾ ಪಕ್ಷ ನಿರ್ಧರಿಸಲಿದೆ. ಪಕ್ಷ ಸೂಚಿಸಿದ ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತೀವಿ. ಹಿಂದೆ ಉಪ ಚುನಾವಣೆ ಗೆದ್ದ ರೀತಿಯಲ್ಲೇ, ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಿ ಸಿ ಪಾಟೀಲ್​ ಭವಿಷ್ಯ ನುಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.