ETV Bharat / state

5 ಅಗ್ನಿಶಾಮಕ‌ ಸಿಬ್ಬಂದಿಗೆ ಕೊರೊನಾ: ಬೆಂಗಳೂರು ಜ್ಞಾನ ಭಾರತಿ ಪೊಲೀಸ್​ ಠಾಣೆ ಸೀಲ್​ ಡೌನ್

ಬೆಂಗಳೂರು ನಗರದ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಅಗ್ನಿಶಾಮಕ‌ ಇಲಾಖೆಯ ಐವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಠಾಣೆಗೆ ಸ್ಯಾನಿಟೈಸ್ ಮಾಡಿ ಸೀಲ್​ ಡೌನ್​ ಮಾಡಲಾಗಿದೆ.

ಬೆಂಗಳೂರು ಜ್ಞಾನಭಾರತಿ ಪೊಲೀಸ್​ ಠಾಣೆ ಸೀಲ್​ಡೌನ್

author img

By

Published : Jul 6, 2020, 5:15 PM IST

ಬೆಂಗಳೂರು: ನಗರದ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಕೆಲಸ‌ ಮಾಡುತ್ತಿದ್ದ ಐವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಸಂಬಂಧ ಠಾಣೆಗೆ ಸ್ಯಾನಿಟೈಸ್ ಮಾಡಿ ಸೀಲ್​ಡೌನ್​ ಮಾಡಲಾಗಿದೆ.

ಅಗ್ನಿಶಾಮಕ‌ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ಎಲ್ಲಾ ಸಿಬ್ಬಂದಿಗೆ ಗಂಟಲು ದ್ರವ ಪರೀಕ್ಷೆಗೆ ಒಳಗಾಗುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ ಬೆನ್ನಲ್ಲೇ ಸಿಬ್ಬಂದಿ ಸ್ವ್ಯಾಬ್​ ಟೆಸ್ಟ್ ಮಾಡಿಸಿದ್ದರು.‌ ಪರೀಕ್ಷಾ ವರದಿ ಬಂದ ಬಳಿಕ ಐವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಈ ಐವರನ್ನು ದೇವನಹಳ್ಳಿಯಲ್ಲಿರುವ ಆಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂರ್ಪಕದಲ್ಲಿದ್ದ 10ಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ಕಡ್ಡಾಯವಾಗಿ ಹೋಮ್​ ಕ್ವಾರಂಟೈನ್​ಗೆ ಒಳಪಡಿಸಿ, ಠಾಣೆಯನ್ನು ಸೀಲ್​ ಡೌನ್ ಮಾಡಲಾಗಿದೆ. ರಾಜಾಜಿನಗರ, ಹೈಗ್ರೌಂಡ್ಸ್ ಠಾಣೆ ಸೇರಿದಂತೆ ಮೂರು ಠಾಣೆಗಳು ಸೀಲ್ ​ಡೌನ್​ ಆಗಿವೆ. 55ಕ್ಕಿಂತ ಹೆಚ್ಚು ಸಿಬ್ಬಂದಿ ಕ್ವಾರಂಟೈನ್​ನಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.