ಬೆಂಗಳೂರು: ರಾಜ್ಯದ ಪ್ರತಿಷ್ಠಿತ ವಿಶ್ವ ಬಂಡವಾಳ ಹೂಡಿಕೆದಾರರ ಮೂರು ದಿನಗಳ ಸಮಾವೇಶಕ್ಕೆ ಇಂದು ತೆರೆ ಬೀಳಲಿದೆ. 10 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಹೂಡಿಕೆಯ ಒಡಂಬಡಿಕೆ ಆಗುತ್ತಿದೆ. ಇಂದಿನ ಸಮಾವೇಶಕ್ಕೆ ಸ್ಟಾರ್ ಬಕ್ಸ್ ಸಹ ಸಂಸ್ಥಾಪಕ ಜಿವ್ ಸೀಗಲ್ ಭಾಗವಹಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಸೇರಿ ಹಲವು ಉದ್ಯಮಿಗಳು ಭಾಗಿಯಾಗುತ್ತಿದ್ದಾರೆ.
ನಗರದ ಅರಮನೆ ಆವರಣದಲ್ಲಿ ಇಂದು ಕೊನೆಯ ದಿನದ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. 10 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹೂಡಿಕೆಯಾಗಿರುವ ಸಾಧ್ಯತೆ ಇದೆ. ಇಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಬಳಿಕ ಸುದ್ದಿಗೋಷ್ಟಿಯಲ್ಲಿ ಸಿಎಂ ಬೊಮ್ಮಾಯಿ, ಸಚಿವ ನಿರಾಣಿ ಹೂಡಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾಗವಹಿಸುತ್ತಿಲ್ಲ.
ಇಂದು 10.30 ರಿಂದ 11.15 ರವರೆಗೂ ಭಾರತ ಆವಿಷ್ಕಾರ ಕ್ರಾಂತಿಯನ್ನು ಮುನ್ನಡೆಸುವ ಕುರಿತು ಸಂವಾದ ನಡೆಯಲಿದೆ. ಬೆಳಗ್ಗೆ 11.15 ರಿಂದ 12 ರವರೆಗೆ ಭಾರತ ವಿಶ್ವದ ಸಪ್ಲೈ ಚೈನ್‌ನ ಕೇಂದ್ರವಾಗಿ ಪರಿವರ್ತನೆಯಾಗುತ್ತಿರುವ ಕುರಿತು ಸಂವಾದ ಏರ್ಪಡಲಿಕ್ಕಿದೆ. ಸಂವಾದದಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಭಾಗಿಯಾಗಲಿದ್ದಾರೆ.ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಮುಂದಿನ ಆರೋಗ್ಯದ ವಿಚಾರವಾಗಿ ಸಂವಾದ ನಡೆಯಲಿಕ್ಕಿದೆ. ಸಂವಾದದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಭಾಗಿಯಾಗಲಿದ್ದಾರೆ.ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಆರ್ಥಿಕ ಚೇತರಿಕೆಯ ಬಳಿಕ ಕರ್ನಾಟಕದ ಯಶಸ್ಸು ಎಂಬ ವಿಚಾರದ ಕುರಿತು ಚರ್ಚೆ ನಡೆಯಲಿಕ್ಕಿದೆ. ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.
ಇದನ್ನೂ ಓದಿ : Invest Karnataka 2022.. ಹೂಡಿಕೆಗೆ ಕರ್ನಾಟಕ ಉತ್ತಮ ರಾಜ್ಯ: ಪ್ರಧಾನಿ ಮೋದಿ ಬಣ್ಣನೆ