ETV Bharat / state

ಯುವ ಮತದಾರರ ಸೇರ್ಪಡೆಯಲ್ಲಿ ಗುರಿ ತಲುಪದ ಬೆಂಗಳೂರು - undefined

18-19 ವರ್ಷ ವಯಸ್ಸಿನ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ನಿರೀಕ್ಷಿತ ಪ್ರಮಾಣದ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಮಂಜುನಾಥ್ ಪ್ರಸಾದ್
author img

By

Published : Apr 5, 2019, 12:14 PM IST

ಬೆಂಗಳೂರು: ಮಹತ್ವದ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆದರೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಯುವ ಮತದಾರರ ನೋಂದಣಿಯೇ ಸಮರ್ಕವಾಗಿ ನಡೆಯುತ್ತಿಲ್ಲ. 18-19 ವರ್ಷ ವಯಸ್ಸಿನ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ನಿರೀಕ್ಷಿತ ಪ್ರಮಾಣದ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಹೌದು, ಚುನಾವಣಾ ಆಯೋಗದ ಸಿಬ್ಬಂದಿ, ಪ್ರತೀ ಕಾಲೇಜುಗಳಿಗೆ ತೆರಳಿ ಜನಜಾಗೃತಿ ಮೂಡಿಸಿದರೂ ಕೂಡ ನಿರೀಕ್ಷಿತ ಹೊಸ ಮತದಾರರ ಸೇರ್ಪಡೆಯಾಗಿಲ್ಲ. ಪ್ರಸ್ತುತ ಬೆಂಗಳೂರು ಕೇಂದ್ರ, ಉತ್ತರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 1,05,451 ಯುವ ಮತದಾರರು ಸೇರ್ಪಡೆಯಾಗಿದ್ದರೂ ಕೂಡ ಐವತ್ತರಿಂದ ಅರವತ್ತು ಸಾವಿರದಷ್ಟು ಯುವ ಮತದಾರರು ಸೇರ್ಪಡೆಯಾಗದೆ ಹೊರಗುಳಿದಿದ್ದಾರೆ. ಒಟ್ಟು ಬೆಂಗಳೂರಲ್ಲಿ 90,83,554 ಮತದಾರರಿದ್ದು, ಇದರ ಶೇಕಡಾ ಮೂರರಷ್ಟು ಯುವ ಮತದಾರರು ಇರಬೇಕೆಂಬ ನಿಯಮವಿದ್ರೂ ಪಾಲಿಸಲಾಗಿಲ್ಲ.

ಮಂಜುನಾಥ್ ಪ್ರಸಾದ್

ಇದಕ್ಕೆ ಚುನಾವಣಾ ಆಯೋಗದ ನಿರ್ಲಕ್ಷ್ಯ ಒಂದೆಡೆಯಾದ್ರೆ, ಇನ್ನೊಂದೆಡೆ ಯುವ ಜನರಿಗೆ ಮತದಾನದ ಬಗ್ಗೆ ಇರುವ ಅಸಡ್ಡೆ ಹಾಗೂ ಅಜ್ಞಾನವೂ ಪ್ರಮುಖ ಕಾರಣವಾಗಿದೆ. ಇನ್ನೊಂದೆಡೆ 18 ರಿಂದ 21 ವರ್ಷ ವಯಸ್ಸಿನ ಮತದಾರರು ಒಟ್ಟು 2,88,744 ಜನರಿದ್ರೂ, ಚುನಾವಣೆಯಲ್ಲಿ ಭಾಗಿಯಾಗುವ ಸಂಖ್ಯೆ ಬಹಳಷ್ಟು ಕಡಿಮೆ. ವಿದ್ಯಾಭ್ಯಾಸ, ಕೆಲಸ ಕಾರಣಕ್ಕಾಗಿ ಹೊರದೇಶ, ಹೊರ ರಾಜ್ಯದ ಜಿಲ್ಲೆಗಳಲ್ಲಿ ಇರುವುದರಿಂದ ಹೆಚ್ಚಿನ ಯುವಜನ ಮತದಾನದಿಂದ ಹೊರಗುಳಿಯುತ್ತಿದ್ದಾರೆ.

ಹೊಸ ಮತದಾರರು ಹಾಗೂ ಯುವ ಮತದಾರರ ಒಟ್ಟು ಸಂಖ್ಯೆಯನ್ನು ನೋಡೋದಾದ್ರೆ:

ಕ್ಷೇತ್ರ- 18 ವರ್ಷ- 18-19 ಮತದಾರರು

ಬೆಂ.ಉತ್ತರ- 34941- 95251
ಬೆ.ಕೇಂದ್ರ- 23956- 67154
ಬೆ.ದಕ್ಷಿಣ- 25055- 65582.

ಅಲ್ಲದೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬರುವ ಯಲಹಂಕ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಬರುವ ಆರ್​​ಆರ್​​ ನಗರ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ಯುವ ಮತದಾರರು ಸೇರಿ ಒಟ್ಟು 1,05,451 ಹೊಸ ಮತದಾರರು ಹಾಗೂ 2,88,744 ಯುವ ಮತದಾರರು ಬೆಂಗಳೂರಿನಲ್ಲಿ ಇದ್ದಾರೆ.

ಈ ಬಗ್ಗೆ ಮಾತನಾಡಿದ ಮಂಜುನಾಥ್ ಪ್ರಸಾದ್, ಹದಿನೆಂಟು ವರ್ಷದ ತುಂಬಿರುವವರ ಹೆಸರು ಸೇರಿಸುವುದಕ್ಕೆ ಸಾಧ್ಯವಾದಷ್ಟು ಪ್ರಯತ್ನ ಮಾಡಿದ್ದೇವೆ. ನಗರದ ಪ್ರತೀ ಕಾಲೇಜುಗಳಿಗೆ ಭೇಟಿ ನೀಡಿದ್ದೇವೆ. ಒಟ್ಟು ಮತದಾರರ ಶೇಕಡಾ ಮೂರರಷ್ಟು ಯುವ ಮತದಾರರು ಇರಬೇಕೆಂಬ ನಿಯಮವಿದೆ. ಇಷ್ಟನ್ನು ಮಾಡೋಕೆ ಸಾಧ್ಯವಾಗಿಲ್ಲ. ರಾಜ್ಯಕ್ಕೆ ಹೋಲಿಸಿದಾಗ ತೃಪ್ತಿಕರ ಫಲಿತಾಂಶ ಇದೆ. ಆದ್ರೆ ಪ್ರತ್ಯೇಕವಾಗಿ ಬೆಂಗಳೂರನ್ನು ತೆಗೆದುಕೊಂಡು ನೋಡಿದಾಗ ಟಾರ್ಗೆಟ್ ರೀಚ್ ಮಾಡಲು ಆಗಿಲ್ಲ ಎಂದರು.

ಒಟ್ಟಿನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಯುವಜನರು ಹಿಂಜರಿಯುತ್ತಿರೋದು ಸ್ಪಷ್ಟವಾಗಿದೆ. ಇನ್ಮುಂದೆಯಾದರೂ ಪ್ರತಿಯೊಬ್ಬ ಯುವ ಜನರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಹದಿನೆಂಟು ವರ್ಷ ಆದ ಕೂಡಲೇ ಮತದಾನ ಮಾಡುವ ಹಕ್ಕು ಚಲಾಯಿಸಬೇಕಾಗಿದೆ.

Intro:Body:

file photo 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.