ETV Bharat / state

ಯುವತಿಯ ಖಾಸಗಿ ಫೋಟೋಗಳನ್ನು ಆಕೆಯ ತಂದೆಗೆ ಕಳುಹಿಸಿ ಬೆದರಿಕೆ: ರೌಡಿಶೀಟರ್ ಅರೆಸ್ಟ್

ಯುವತಿಯ ಖಾಸಗಿ ಫೋಟೋಗಳನ್ನು ಆಕೆಯ ತಂದೆಗೆ ಕಳುಹಿಸಿ ಬೆದರಿಕೆ ಹಾಕುತ್ತಿದ್ದ ರೌಡಿ ಶೀಟರ್​ ಅನ್ನು ಬೆಂಗಳೂರು ಸೈಬರ್​ ​ಪೊಲೀಸರು ಬಂಧಿಸಿದ್ದಾರೆ.

Bangalore cyber police arrested rowdy sheeter nadish
ರೌಡಿ ಶೀಟರ್​​ ನಂದೀಶ್​ ಬಂಧನ
author img

By

Published : Feb 20, 2022, 7:15 PM IST

ಬೆಂಗಳೂರು: ಯುವತಿಯೋರ್ವಳ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿ, ಆಕೆಯ ತಂದೆಗೆ ಫೋಟೋಗಳನ್ನು ಕಳುಹಿಸಿದ್ದ ರೌಡಿಶೀಟರ್ ಅನ್ನು ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಯನ್ನು ಹುಳಿಮಾವು ರೌಡಿಶೀಟರ್ ನಂದೀಶ್ ಎಂದು ಗುರುತಿಸಲಾಗಿದೆ. ಈತ ಯುವಕನೊಬ್ಬನ ಬಳಿಯಿಂದ ಯುವತಿಯ ಖಾಸಗಿ ಫೋಟೋ ಪಡೆದಿದ್ದ. ಆ ಫೋಟೋಗಳನ್ನು ಇಟ್ಟುಕೊಂಡು ಯುವತಿಗೆ ಬೆದರಿಕೆ ಹಾಕುತ್ತಿದ್ದ. ಆಕೆಯ ತಂದೆಗೂ ಫೋಟೋ ಕಳುಹಿಸಿ ಬೆದರಿಕೆಯೊಡ್ಡಿದ್ದ. ಇದರಿಂದ ಬೇಸತ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಯುವತಿಯ ದೂರು ಆಧರಿಸಿ ರೌಡಿಶೀಟರ್ ನಂದೀಶ್​​ನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ಹಿಂದೂ ಸನಾತನ ಧರ್ಮ ಪ್ರಚಾರಕ್ಕೆ ಬಂದಿದೆ: ವಚನಾನಂದ ಶ್ರೀ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.