ಬೆಂಗಳೂರು: ಲಾಕ್‌ಡೌನ್‌ನಿಂದ ಸತತವಾಗಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಅದರಲ್ಲಿಯೂ ವೀಕೆಂಡ್ ಲಾಕ್‌ಡೌನ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಇಡೀ ನಗರ ಸ್ತಬ್ದವಾಗಿತ್ತು. ಇಂದು ನಗರದಲ್ಲಿ ಒಟ್ಟು 1,485 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಶನಿವಾರ ನಗರದಲ್ಲಿ 2,454 ಪ್ರಕರಣಗಳು ಪತ್ತೆಯಾಗಿದ್ದವು. ನಿನ್ನೆ (ಭಾನುವಾರ) 1,348 ಪಾಸಿಟಿವ್ ಪ್ರಕರಣಗಳು ದಾಖಲಾಗಿತ್ತು. ನಿನ್ನೆಗಿಂತ ಇಂದು 137ಕ್ಕೂ ಹೆಚ್ಚಿನ ಸೋಂಕಿತರರಿಗೆ ಸೋಂಕು ದೃಢವಾಗುವ ಸಾಧ್ಯತೆಯಿದೆ.
ನಗರದಲ್ಲಿ ಇಂದಿನಿಂದ ಲಾಕ್‌ಡೌನ್ ಸಡಿಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆಯೋ ಅಥವಾ ಏಕಾಏಕಿ ಏರಿಕೆಯಾಗುತ್ತದೆಯೋ ಕಾದು ನೋಡಬೇಕಿದೆ.
ಇದನ್ನೂ ಓದಿ: ದೇಶದಲ್ಲಿ ಮತ್ತಷ್ಟು ತಗ್ಗಿದ ಹೊಸ ಸೋಂಕಿತರ ಸಂಖ್ಯೆ: ನಿನ್ನೆ 3,921 ಮಂದಿ ಸಾವು