ನೆಲಮಂಗಲ: ತಾಲೂಕಿನ ಸೋಂಪುರ ಹೋಬಳಿಯ ಬರಗೇನಹಳ್ಳಿಯಲ್ಲಿ ಸುಮಾರು 20 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಉದ್ಘಾಟಿಸಿದರು.
ಬರಗೇನಹಳ್ಳಿಯಲ್ಲಿ ನೂತನ ಹಾಲು ಉತ್ಫಾದಕರ ಸಹಕಾರ ಸಂಘದ ಕಟ್ಟಡ ಮತ್ತು ಸುಮಾರು 5000 ಲೀಟರ್ ಸಾಮರ್ಥ್ಯದ ಬಲ್ಕ್ ಮಿಲ್ಕ್ ಕೂಲರ್ ಉಧ್ಘಾಟಿಸಿದ ಬಮೂಲ್ ನೂತನ ಅಧ್ಯಕ್ಷ ನರಸಿಂಹಮೂರ್ತಿ, ಇಂದು ಬಮೂಲ್ ಹಾಲು ಉತ್ಪಾದನಾ ಕ್ಷೇತ್ರವಾಗಿ ಬೆಳದಿರುವುದಕ್ಕೆ ಗ್ರಾಮೀಣ ಭಾಗದ ಪ್ರತಿಯೊಬ್ಬ ಸದಸ್ಯರ ಶ್ರಮವಿದೆ, ಯಾವುದೇ ಸರ್ಕಾರಗಳು ಬಂದರೂ ಪ್ರತಿಯೊಬ್ಬರಿಗೂ ಕೆಲಸಕೊಡಲು ಸಾದ್ಯವಿಲ್ಲ ಅದರಿಂದ ಗ್ರಾಮೀಣ ಭಾಗದ ಯುವಕರು ಹೈನುಗಾರಿಕೆಯಲ್ಲಿ ತೊಡಗುವ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕೆಂದು ಹೇಳಿದರು.
ಬರಗೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪುಟ್ಟಗಂಗಯ್ಯ ಮಾತನಾಡಿ, ರೈತರಿಗೆ ಆರೋಗ್ಯ ವಿಮೆ ಮಾಡಿಸಿಕೊಡಬೇಕು ಮತ್ತು ಫೀಡ್ಸ್ ಬೆಲೆ ದುಬಾರಿಯಾಗಿದ್ದು ರೈತರಿಗೆ ಬಹಳ ನಷ್ಟವಾಗುತ್ತಿದೆ. ಇವೆಲ್ಲವುದರ ಬಗ್ಗೆ ನೂತನ ಅಧ್ಯಕ್ಷರು ಗಮನಹರಿಸಬೇಕಿದೆ. ಒಂದು ವೇಳೆ ಬಮೂಲ್‍ನಿಂದ ಆರೋಗ್ಯ ವಿಮೆ ನೀಡದಿದ್ದರೆ ನಾವೇ ಸಂಘದ ವತಿಯಿಂದ ಪ್ರತಿಯೊಬ್ಬ ಸದಸ್ಯರಿಗೂ ಸ್ಥಳೀಯ ಬ್ಯಾಂಕ್ ನಿಂದ ಆರೋಗ್ಯವಿಮೆಯನ್ನು ಕೊಡಿಸುವ ಭರವಸೆ ನೀಡಿದರು.