ETV Bharat / state

ಹಿಂದುಳಿದ ವರ್ಗಗಳಿಗೆ ಬಜೆಟ್​ನಲ್ಲಿ ಕಾರ್ಯಕ್ರಮ, ಮೀಸಲು ಕುರಿತು ಮಠಾಧೀಶರ ಜತೆ ಚರ್ಚಿಸಿಲ್ಲ : ಸಿಎಂ ಬೊಮ್ಮಾಯಿ - ರಾಜ್ಯ ಬಜೆಟ್

ಈವರೆಗೂ ಸಮುದಾಯ ನಡೆದು ಬಂದ ಹಾದಿಯ ಬಗ್ಗೆ ಶ್ರೀಗಳು ವಿವರಣೆ ನೀಡಿದರು. ವಿಶೇಷ ಕಾರ್ಯಕ್ರಮ ರೂಪಿಸಬೇಕು ಎಂದು ಸಮಾಜದ ಬಗ್ಗೆ ಕಾಳಜಿವಹಿಸಿ ಮಾತನಾಡಿದ್ದಾರೆ. ಅನ್ನದಾಸೋಹ, ವಿದ್ಯಾದಾಸೋಹ ಮಾಡುತ್ತಾ ಇದ್ದೇವೆ, ಶಾಲಾ ಕಾಲೇಜು ನಡೆಸುತ್ತಿದ್ದೇವೆ, ಸಮುದಾಯ ಭವನ, ಹಾಸ್ಟೇಲ್​ ನಿರ್ಮಾಣಕ್ಕೆ ಅನುದಾನ ಕೊಡಬೇಕು ಎಂದು ಮನವಿ ಮಾಡಿದರು ಎಂದು ಸಿಎಂ ಬಸವರಾಜ್​ ಬೊಮ್ಮಾಯಿ ಸಭೆಯ ವಿವರ ನೀಡಿದರು..

ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಒಕ್ಕೂಟ

author img

By

Published : Jan 31, 2022, 2:28 PM IST

ಬೆಂಗಳೂರು : ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಮಠಾಧೀಶರ ನಿಯೋಗದ ಜೊತೆ ಯಾವುದೇ ಚರ್ಚೆ ನಡೆಸಿಲ್ಲ. ಆದರೆ, ಈ ಬಾರಿಯ ಬಜೆಟ್​​ನಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗೆ ಯೋಜನೆ ರೂಪಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಒಕ್ಕೂಟದಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಲಾಯಿತು. ರೇಸ್‌ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ ನಿವಾಸಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಜಗದ್ಗುರುಗಳು ಮತ್ತು ಶ್ರೀಗಳು ಸಿಎಂ ಅವರನ್ನ ಭೇಟಿ ಮಾಡಿದರು. ರಾಜ್ಯ ಬಜೆಟ್​ನಲ್ಲಿ ಹಿಂದುಳಿದ ವರ್ಗಗಳಿಗೆ ಆದ್ಯತೆ ಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ ಮಾಡಿದರು.

ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಒಕ್ಕೂಟ
ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಒಕ್ಕೂಟ

ಶ್ರೀಗಳ ನಿಯೋಗದ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಂದು ಕಾಗಿನೆಲೆಯ ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಹಿಂದುಳಿದ ಮಠಗಳ ಮಠಾಧೀಶರು ಬಂದು ಭೇಟಿಯಾಗಿದ್ದಾರೆ.

ಒಟ್ಟಾರೆ ಹಿಂದುಳಿದ ವರ್ಗಗಳ ಏಳಿಗೆಗಾಗಿ, ದಲಿತ ಸಮುದಾಯದ ಏಳಿಗೆಗಾಗಿ ಬರುವ ಬಜೆಟ್‌ನಲ್ಲಿ ಕಾರ್ಯಕ್ರಮ ರೂಪಿಸಬೇಕು. ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಡಬೇಕು ಎಂದು ಚರ್ಚೆ ನಡೆಸಿದರು ಎಂದು ಮಾಹಿತಿ ನೀಡಿದರು.

ಈವರೆಗೂ ಸಮುದಾಯ ನಡೆದು ಬಂದ ಹಾದಿಯ ಬಗ್ಗೆ ಶ್ರೀಗಳು ವಿವರಣೆ ನೀಡಿದರು. ವಿಶೇಷ ಕಾರ್ಯಕ್ರಮ ರೂಪಿಸಬೇಕು ಎಂದು ಸಮಾಜದ ಬಗ್ಗೆ ಕಾಳಜಿವಹಿಸಿ ಮಾತನಾಡಿದ್ದಾರೆ. ಅನ್ನದಾಸೋಹ, ವಿದ್ಯಾದಾಸೋಹ ಮಾಡುತ್ತಾ ಇದ್ದೇವೆ, ಶಾಲಾ ಕಾಲೇಜು ನಡೆಸುತ್ತಿದ್ದೇವೆ, ಸಮುದಾಯ ಭವನ, ಹಾಸ್ಟೇಲ್​ ನಿರ್ಮಾಣಕ್ಕೆ ಅನುದಾನ ಕೊಡಬೇಕು ಎಂದು ಮನವಿ ಮಾಡಿದರು ಎಂದು ಸಿಎಂ ಬಸವರಾಜ್​ ಬೊಮ್ಮಾಯಿ ಸಭೆಯ ವಿವರ ನೀಡಿದರು.

ಸಮುದಾಯದ ಯುವಕ-ಯುವತಿಯರಿಗೆ ವಿದ್ಯೆ, ಉದ್ಯೋಗ ಕೊಡಬೇಕು. ರಾಜಕೀಯವಾಗಿ ಹೆಚ್ಚಿನ ಪ್ರಾತಿನಿಧ್ಯ ಕೊಡುವಂತೆ ಮನವಿ ಮಾಡಿದ್ದಾರೆ. ಬೆಂಗಳೂರಲ್ಲಿ ಕಾರ್ಯ ಚಟುವಟಿಕೆ ಮಾಡಲು ಒಂದು ಸ್ಥಳ ಬೇಕೆಂಬ ಬೇಡಿಕೆ ಇತ್ತು. ಹಿಂದಿನ ಸರ್ಕಾರ ಸ್ಥಳ ಮಂಜೂರು ಮಾಡಿದ್ದರೂ ಕಾನೂನಿನ ತೊಡಕಿನಿಂದ ಆ ಸ್ಥಳ ಸಿಕ್ಕಿಲ್ಲ.

ಜಮೀನಿನ ಬಗ್ಗೆ ಕಡತ ತರಿಸಿ ಇದನ್ನು ಇತ್ಯರ್ಥ ಮಾಡಿ, ಜಮೀನು ಕೊಡಿಸಲು ಕೆಲಸ ಮಾಡುತ್ತೇನೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಯೋಜನೆ ರೂಪಿಸುತ್ತೇವೆ. ಬಜೆಟ್​ನಲ್ಲಿ ನಾನು ಏನು ಮಾಡುತ್ತೇನೆ ಅಂತಾ ಹೇಳಲ್ಲ. ಆದರೆ, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗೆ ಯೋಜನೆ ರೂಪಿಸುತ್ತೇವೆ. ಆದರೆ, ಮೀಸಲಾತಿ ಬಗ್ಗೆ ಇಂದು ಯಾವುದೇ ಚರ್ಚೆ ಆಗಿಲ್ಲ ಎಂದು ಸಿಎಂ ಹೇಳಿದರು.

ಈ ಪ್ರಶ್ನೆಗೆ ಉತ್ತರಿಸದೇ ತೆರಳಿದ ಸಿಎಂ : ಸಚಿವ ಆನಂದ್ ಸಿಂಗ್ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಲು ಹಿಂಜರಿದ ಸಿಎಂ, ಸ್ವಲ್ಪ ಹೊತ್ತು ಮೌನವಹಿಸಿ, ಆ ನಂತರ ನೀವು ಅವರನ್ನೇ ಕೇಳಬೇಕು ಎಂದು ಹೇಳಿ ನಿರ್ಗಮಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.