ETV Bharat / state

ರಾಜ್ಯ ಜಾತಿ ಗಣತಿ ವರದಿಗೆ ಹಿಂದುಳಿದ ವರ್ಗಗಳ ಆಯೋಗ ಅಂತಿಮ ಸ್ಪರ್ಶ; ಸಮೀಕ್ಷಾ ವರದಿಯಲ್ಲಿ ಸಂಗ್ರಹಿತ ಮಾಹಿತಿ ಏನಿದೆ?

ಹಲವು ರಾಜ್ಯಗಲ್ಲಿ ಕೇಳಿ ಬರುತ್ತಿದ್ದ ಜಾತಿ ಗಣತಿಯ ಸದ್ದು ಇತ್ತ ಕರ್ನಾಟಕದಲ್ಲೂ ಮುನ್ನಲೆಗೆ ಬಂದಿದೆ.

ಜಾತಿ ಗಣತಿ ವರದಿ
ಜಾತಿ ಗಣತಿ ವರದಿ
author img

By ETV Bharat Karnataka Team

Published : Oct 8, 2023, 3:35 PM IST

ಬೆಂಗಳೂರು : ಬಿಹಾರ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡುತ್ತಿದ್ದಂತೆ ರಾಜ್ಯದಲ್ಲೂ ನೆನೆಗುದಿಗೆ ಬಿದ್ದಿರುವ ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಡ ಹೆಚ್ಚಾಗುತ್ತಿದೆ. ಅಷ್ಟಕ್ಕೂ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬ ಹೆಸರಲ್ಲಿ ಕರೆಯಲ್ಪಡುವ ಜಾತಿ ಗಣತಿಯಡಿ ಸಂಗ್ರಹಿಸಿದ ಮಾಹಿತಿ ಏನು ಎಂಬ ವರದಿ ಇಲ್ಲಿದೆ..

2014ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯಾದ್ಯಂತ ಎಲ್ಲಾ ಜಾತಿ ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮನೆ ಮನೆ ಸಮೀಕ್ಷೆಗೆ ಆದೇಶ ನೀಡಿದ್ದರು. ಆಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಹೆಚ್. ಕಾಂತರಾಜ್ ಸಮೀಕ್ಷೆಯ ಉಸ್ತುವಾರಿ ಹೊತ್ತಿದ್ದರು. 2016ಕ್ಕೆ ಸಮೀಕ್ಷೆ ಪೂರ್ಣಗೊಂಡಿದ್ದರೂ, ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ ಎಂಬ ಕಾರಣಕ್ಕೆ ಸಮೀಕ್ಷೆ ವರದಿ ಬಿಡುಗಡೆಯಾಗಿಲ್ಲ.‌

ಬಳಿಕ ಹೆಚ್‌. ಕಾಂತರಾಜ್ ವರದಿ ಎಂದೇ ಬಿಂಬಿತವಾಗಿರುವ ಸಮೀಕ್ಷಾ ವರದಿ ನೆನೆಗುದಿಗೆ ಬಿದ್ದಿದೆ. ವರದಿ ಸಿದ್ಧವಾಗಿದ್ದರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹೆಜ್ಜೇನಿಗೆ ಕೈ ಹಾಕುವುದು ಬೇಡ ಎಂದು ಹಿಂದಿನ ಸರ್ಕಾರಗಳು ವರದಿಯ ತಂಟೆಗೆ ಹೋಗಿರಲಿಲ್ಲ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಬಹಿರಂಗ ಹಾಗೂ ಜಾರಿಗೆ ಉತ್ಸುಕತೆ ತೋರಿದ್ದು, ಈಗಿರುವ ಹಿಂದುಳಿದ ವರ್ಗಗಳ ಆಯೋಗ ಜಯಪ್ರಕಾಶ್ ಹೆಗ್ಡೆಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ. ನವೆಂಬರ್ ನಲ್ಲಿ ವರದಿ ಸಲ್ಲಿಸಲು ಆಯೋಗ ಅಂತಿಮ ಸ್ಪರ್ಶ ನೀಡುತ್ತಿದೆ.

ರಾಜ್ಯದಲ್ಲಿನ ಜಾತಿ ಗಣತಿ ಉದ್ದೇಶ ಏನು? : 1931ರ ಜನಗಣತಿಯ ನಂತರ ಯಾವುದೇ ಜನಗಣತಿ ದಾಖಲೆಗಳಿಂದ ಜಾತಿ / ಸಮುದಾಯವಾರು ಜನಸಂಖ್ಯೆಯ ಅಂಕಿ-ಅಂಶಗಳು ಖಚಿತವಾಗಿ ದೊರೆಯುತ್ತಿಲ್ಲ. ಜಾತಿವಾರು ಜನಗಣತಿ ಅಂಕಿ-ಅಂಶಗಳು ಲಭ್ಯವಿಲ್ಲದೇ ಇರುವುದರಿಂದ ಕಾರ್ಯಕ್ರಮಗಳ ಮುಖಾಂತರ ಸೌಲಭ್ಯಗಳನ್ನು ಸಾಮಾಜಿಕ ನ್ಯಾಯ ತತ್ವದ ಆಧಾರದ ಮೇಲೆ ಒದಗಿಸುವುದು ಸರ್ಕಾರಕ್ಕೆ ಕಷ್ಟವಾಗಿದೆ. ಸಮುದಾಯಗಳ ಈಗಿರುವ ಸ್ಥಿತಿಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಶ್ಲೇಷಣೆ ನಡೆಸುವುದು, ಜನಸಂಖ್ಯೆಯ ಪ್ರಮಾಣವನ್ನು ತಿಳಿಯುವುದು ಅಗತ್ಯವಾಗಿದೆ ಎಂಬ ಉದ್ದೇಶಕ್ಕಾಗಿ ಆಗಿನ ಸಿದ್ದರಾಮಯ್ಯ ಸರ್ಕಾರ ಸಮೀಕ್ಷೆಗೆ ಆದೇಶಿಸಿತ್ತು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳು ಹಾಗೂ ಇತರ ಜಾತಿಗಳನ್ನೊಳಗೊಂಡಂತೆ ರಾಜ್ಯದ ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಜವಾಬ್ದಾರಿಯನ್ನು ಆಯೋಗಕ್ಕೆ ‌ನೀಡಲಾಗಿತ್ತು. ರಾಜ್ಯದ ಎಲ್ಲ ವರ್ಗಗಳ / ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಣೆಗೆ ಸೂಚಿಸಲಾಗಿತ್ತು.

ಶಿಫಾರಸುಗಳೊಂದಿಗೆ ವರದಿ ಸಲ್ಲಿಕೆಗೆ ತಯಾರಿ : ಕಾಂತರಾಜ್ ಆಯೋಗದ ಜಾತಿ ಗಣತಿ ವರದಿ ರಾಜ್ಯದ ಎಲ್ಲಾ ಜಾತಿಗಳ ಸಮಗ್ರ ಮಾಹಿತಿಯನ್ನು ಕಲೆ ಹಾಕಿದೆ. ಆಯೋಗ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮಗ್ರ, ಸವಿವರವಾದ ಅಂಕಿ ಅಂಶವನ್ನು ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ಅಂಕಿ-ಅಂಶ ಸಮಗ್ರವಾಗಿದ್ದು, ಯಾವುದೇ ತಿದ್ದುಪಡಿಗೆ ಅವಕಾಶ ಇಲ್ಲ ಎಂಬುದನ್ನು ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ. ಸುಮಾರು 80% ಜನಸಂಖ್ಯೆಯನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಸದ್ಯ ಅಂಕಿ-ಅಂಶದ ವರದಿ ಸಿದ್ಧವಿದ್ದು, ಶಿಫಾರಸುಗಳಿಗೆ ಅಂತಿಮ‌ ಸ್ಪರ್ಶ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ಪಟ್ಟಿ ಪರಿಷ್ಕರಿಸುವ ಬಗ್ಗೆ ಶಿಫಾರಸುಗಳನ್ನು ಮಾಡುವ ಬಗ್ಗೆ ಜಯಪ್ರಕಾಶ್ ಹೆಗ್ಡೆ ಪ್ರಕ್ರಿಯೆ ಆರಂಭಿಸಿದ್ದಾರೆ. ಕಲೆ ಹಾಕಿದ ಅಂಕಿ-ಅಂಶಗಳ ಆಧಾರದ ಮೇಲೆ ಶೈಕ್ಷಣಿಕ, ಸಾಮಜಿಕ ಸ್ಥಿತಿಗತಿಗಳ ಬಗ್ಗೆ ಶಿಫಾರಸು ಮಾಡಲಾಗುವುದು. ಜೊತೆಗೆ ಹಿಂದುಳಿದ ವರ್ಗಗಳ ಸ್ಥಿತಿಗತಿ ಹಾಗೂ ಸಮಸ್ಯೆಗಳ ಬಗ್ಗೆ ಈ ಹಿಂದಿನ ಆಯೋಗಗಳ ಅಧ್ಯಕ್ಷರುಗಳು ನೀಡಿದ್ದ ವರದಿ ಅಂಶಗಳನ್ನೂ ಸ್ವೀಕಾರ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ವಿವರಿಸಿದ್ದಾರೆ.

ಸಮೀಕ್ಷೆ ಸಂಗ್ರಹಿಸಿದ ಅಂಕಿ ಅಂಶ ಮಾಹಿತಿಗಳೇನು? : ಸಮೀಕ್ಷೆ ವೇಳೆ ಒಟ್ಟು 55 ವಿಷಯಗಳ ಬಗ್ಗೆ ಕುಟುಂಬದ ಮುಖ್ಯಸ್ಥರ ಹಾಗೂ ಸದಸ್ಯರ ವೈಯಕ್ತಿಕ ವಿವರಗಳನ್ನು ಸಮಗ್ರವಾಗಿ ಸಂಗ್ರಹಿಸಲಾಗಿದೆ. ಕುಟುಂಬದ ವಿವರ ಹಾಗೂ ಸದಸ್ಯನ ವೈಯಕ್ತಿಕ ವಿವರಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗಿದೆ.

ಕುಟುಂಬ ಸದಸ್ಯರಿಂದ ಜಾತಿ ಮತ್ತು ಉಪಜಾತಿ, ಜಾತಿಗೆ ಇರುವ ಇನ್ನಿತರ ಪರ್ಯಾಯ ಹೆಸರುಗಳು, ಧರ್ಮ, ಮಾತೃಭಾಷೆ, ವೈವಾಹಿಕ ಸ್ಥಾನಮಾನ, ವಿವಾಹ ಆದ ಸಮಯದಲ್ಲಿ ವಯಸ್ಸು, ಶಾಲೆಗೆ ಸೇರುವ ಸಮಯದಲ್ಲಿ ವಯಸ್ಸು, ಶಾಲೆಯ ವಿಧ, ವಿದ್ಯಾಭ್ಯಾಸದ ವಿವರಗಳು, ಶಾಲೆ ಬಿಟ್ಟಾಗಿನ ತರಗತಿ, ವಯಸ್ಸು, ಶಾಲೆ ಬಿಡಲು ಕಾರಣ, 17ರಿಂದ 40 ವರ್ಷದವರು ಶಿಕ್ಷಣ ಮುಂದುವರಿಸದಿರಲು ಕಾರಣ, ಅನಕ್ಷರಸ್ಥರಾಗಿದ್ದರೆ ಕಾರಣ, ಹಾಲಿ ಕೆಲಸ, ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಸೇವೆ, ನೀವು ತೊಡಗಿರುವ ಹಾಲಿ ಉದ್ಯೋಗ ಅಥವಾ ವ್ಯಾಪಾರ, ನಿಮ್ಮ ಕುಟುಂಬದ ಕುಲಕಸುಬು ಯಾವುದು?, ಕುಲಕಸುಬು ಮುಂದುವರೆದಿದೆಯೇ?, ಸದರಿ ಕಸುಬಿನಿಂದ ಬಂದ ಕಾಯಿಲೆಗಳು, ಅಸಂಘಟಿತ ಕ್ಷೇತ್ರದಲ್ಲಿನ ದಿನಗೂಲಿ ಕೆಲಸಗಾರರು, ವಾರ್ಷಿಕ ಆದಾಯ, ಆದಾಯ ತೆರಿಗೆ ಪಾವತಿದಾರರೇ?, ಬ್ಯಾಂಕ್ ಅಕೌಂಟ್ ಹೊಂದಿದ್ದೀರಾ?, ಮೀಸಲಾತಿ ನೀತಿಯಿಂದ ಪಡೆದ ಶೈಕ್ಷಣಿಕ ಸೌಲಭ್ಯಗಳು, ಮೀಸಲಾತಿ ನೀತಿಯಿಂದ ಪಡೆದ ಉದ್ಯೋಗ ಸೌಲಭ್ಯಗಳು, ನೀವು ಜಾತಿ ಪ್ರಮಾಣಪತ್ರ ಪಡೆದಿರುತ್ತೀರಾ?, ಅಲೆಮಾರಿ, ಅರೇ ಅಲೆಮಾರಿ ಜನಾಂಗಕ್ಕೆ ಸೇರಿದ್ದೀರಾ?, ರಾಜಕೀಯ ಪ್ರಾಧಿನಿತ್ಯದ ವಿವರಗಳನ್ನು ಪಡೆಯಲಾಗಿದೆ.

ಇನ್ನು, ಕುಟುಂಬ ಹೊಂದಿರುವ ಒಟ್ಟು ಜಮೀನು, ಕುಟುಂಬದ ಸಾಲ, ಕೃಷಿ ಚಟುವಟಿಕೆಗಳು, ಕುಟುಂಬ ಹೊಂದಿರುವ ಜಾನುವಾರುಗಳು, ಸ್ಥಿರಾಸ್ತಿ, ಚರಾಸ್ತಿ, ಕುಟುಂಬ ಸರ್ಕಾರದಿಂದ ಪಡೆದ ಸವಲತ್ತುಗಳು, ಪಡಿತರ ಚೀಟಿ ಸಂಖ್ಯೆ, ನೀವು ನೆಲೆಸಿರುವ ಸ್ಥಳ ಎಂತಹುದು?, ಹಾಲಿ ವಾಸವಿರುವ ಮನೆ ಮಾಲೀಕತ್ವದ ಸ್ವರೂಪ, ವಾಸವಿರುವ ಮನೆಯ ವಿಧ ಹಾಗೂ ಉಪಯೋಗ, ನಿವೇಶನ ಹೊಂದಿದ್ದೀರಾ?, ಕುಡಿಯುವ ನೀರಿನ ಮೂಲ, ಶೌಚಾಲಯದ ವ್ಯವಸ್ಥೆ (ಮನೆ ಒಳಗೆ, ಮನೆಯ ಆವರಣದಲ್ಲಿ, ಸಾಮೂಹಿಕ, ಬಯಲು ಪ್ರದೇಶ), ಅಡುಗೆಗೆ ಬಳಸುವ ಪ್ರಮುಖ ಇಂಧನ, ದೀಪದ ಮೂಲ (ವಿದ್ಯುತ್, ಸೀಮೆ ಎಣ್ಣೆ, ಎಣ್ಣೆ ದೀಪ, ಸೌರದೀಪ, ಎಲ್ ಪಿಜಿ, ಬಯೋ ಅನಿಲ) ವಿವರಗಳನ್ನೂ ಸಂಗ್ರಹಿಸಲಾಗಿದೆ.

ಇದನ್ನೂ ಓದಿ : ನಮ್ಮ ಸರ್ಕಾರದ ಅವಧಿಯಲ್ಲಿ ಜಾತಿ ಗಣತಿ ವರದಿ ಪೂರ್ಣವಾಗಿರಲಿಲ್ಲ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.