ETV Bharat / state

ಕೇರಳದಲ್ಲಿ ಪ್ರತಿಭಟನೆ ಬಿಸಿ: ರಾಜ್ಯಕ್ಕೆ ವಾಪಸ್​ ಆಗಲಿರುವ ಸಿಎಂ ಬಿಎಸ್​ವೈ!

ಕೇರಳದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ತೆರಳಿದ್ದ ಬಿಎಸ್​ವೈಗೆ ಪ್ರತಿಭಟನಾಕಾರರ ಬಿಸಿ ಜೋರಾಗಿ ತಟ್ಟಿದೆ. ಹೀಗಾಗಿ ಒಂದು ದಿನ ಮುಂಚಿತವಾಗಿ ರಾಜ್ಯಕ್ಕೆ ವಾಪಸ್​ ಆಗುತ್ತಿದ್ದಾರೆ.

bs yadiyurappa
ಪ್ರತಿಭಟನೆ ಬಿಸಿಗೆ ರಾಜ್ಯಕ್ಕೆ ವಾಪಾಸ್ಸಾದ​ ಸಿಎಂ ಬಿಎಸ್​ವೈ
author img

By

Published : Dec 24, 2019, 4:43 PM IST

Updated : Dec 24, 2019, 5:09 PM IST

ಬೆಂಗಳೂರು: ವಿಶೇಷ ಪೂಜೆ ಸಲ್ಲಿಸುವುದಕ್ಕಾಗಿ ಕೇರಳಕ್ಕೆ ತೆರಳಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅಲ್ಲಿನ ಪ್ರತಿಭಟನೆ ಬಿಸಿಯಿಂದಾಗಿ ಇಂದು ರಾಜ್ಯಕ್ಕೆ ವಾಪಸ್​ ಆಗುತ್ತಿದ್ದಾರೆ.

ನಿನ್ನೆ ಅನಂತಪದ್ಮನಾಭ ದೇವಸ್ಥಾನದ ಬಳಿ ಪ್ರತಿಭಟನೆ ಬಿಸಿ ಎದುರಿಸಿದ್ದ ಬಿಎಸ್​ವೈಗೆ ಕೇರಳದ ಕಣ್ಣೂರು ಬಳಿ ಇಂದು ಮತ್ತೆ ಪ್ರತಿಭಟನೆ ಬಿಸಿ ತಟ್ಟಿದೆ. ಕಣ್ಣೂರು ಬಳಿಯ ತಳಿಫರಂಭ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಬಿಎಸ್​ವೈ ಕಾರು ಬರುತ್ತಿದ್ದಂತೆ ಗೋ ಬ್ಯಾಕ್ ಯಡಿಯೂರಪ್ಪ ಎಂದು ಘೋಷಣೆ ಕೂಗಿದ್ದಾರೆ.

ಪ್ರತಿಭಟನೆ ಬಿಸಿಗೆ ರಾಜ್ಯಕ್ಕೆ ವಾಪಾಸ್ಸಾದ​ ಸಿಎಂ ಬಿಎಸ್​ವೈ

ನಿನ್ನೆ (ಡಿಸೆಂಬರ್​.23) ರಾತ್ರಿಯಿಂದಲೂ ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಿಎಂಗೆ ಪ್ರತಿಭಟನೆ ಬಿಸಿ ತಟ್ಟುತ್ತಿದ್ದು, ಹೆಜ್ಜೆ ಹೆಜ್ಜೆಗೂ ಸಿಎಂ ಬಿಎಸ್​ವೈಗೆ ಪ್ರತಿಭಟನೆ ಕಾವು ತಟ್ಟುತ್ತಲಿದೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ ಕೇರಳದಲ್ಲಿ ವಾಸ್ತವ್ಯ ಹೂಡಬೇಕಿದ್ದ ಸಿಎಂ ರಾತ್ರಿಯೇ ಮಂಗಳೂರಿಗೆ ಬರಲಿದ್ದಾರೆ. ಕೇರಳದ ಬದಲು ಮಂಗಳೂರಿನಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ಸಿಎಂ ಕಾರ್ಯಕ್ರಮ ಪಟ್ಟಿ ಪ್ರಕಾರ ನಾಳೆ ಬೆಳಿಗ್ಗೆ ಕೇರಳದಿಂದ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಬೇಕಿತ್ತು.

Intro:

ಬೆಂಗಳೂರು:ವಿಶೇಷ ಪೂಜಾ ನಿಮಿತ್ತ ಕೇರಳಕ್ಕೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಭಟನೆಗಳ ಬಿಸಿಯಿಂದಾಗಿ ಇಂದೇ ರಾಜ್ಯಕ್ಕೆ ಮರಳುತ್ತಿದ್ದಾರೆ.

ಕೇರಳದ ಕಣ್ಣೂರು ಬಳಿ ಮತ್ತೆ ಸಿಎಂ ಬಿಎಸ್ ಯಡಿಯೂರಪ್ಪ ಗೆ ಪ್ರತಿಭಟನೆ ಬಿಸಿ ತಟ್ಟಿದೆ. ಕಣ್ಣೂರು ಬಳಿಯ ತಳಿಫರಂಭ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಂದ ಕರ್ನಾಟಕ ಸಿಎಂ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಿಎಸ್ ವೈ ಕಾರು ಬರುತ್ತಿದ್ದಂರೆ ಗೋ ಬ್ಯಾಕ್ ಯಡಿಯೂರಪ್ಪ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತೊಡಿಸಲಾಯಿತು.

ನಿನ್ನೆ ರಾತ್ರಿಯಿಂದಲೂ ಕೇರಳದಲ್ಲಿ ಸಿಎಎ ವಿರೋಧಿಸಿ ಸಿಎಂ ಗೆ ಪ್ರತಿಭಟನೆ ಬಿಸಿ ತಟ್ಟುತ್ತಿದ್ದು ಕೇರಳದಲ್ಲಿ ಹೆಜ್ಜೆ ಹೆಜ್ಜೆಗೂ ಸಿಎಂ ಬಿಎಸ್ ವೈ ಗೆ ಪ್ರತಿಭಟನೆ ಬಿಸಿ ತಟ್ಟುತ್ತಿದೆ ಈ ಹಿನ್ನೆಲೆಯಲ್ಲಿ ಇಂದು ರಾತ್ರಿ ಕೇರಳದಲ್ಲಿ ವಾಸ್ತವ್ಯ ಹೂಡಬೇಕಿದ್ದ ಸಿಎಂ ಇಂದು ರಾತ್ರಿಯೇ ಮಂಗಳೂರಿಗೆ ಬರಲಿದ್ದಾರೆ. ಕೇರಳ ಬದಲು ಮಂಗಳೂರಿನಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ಸಿಎಂ ಕಾರ್ಯಕ್ರಮ ಪಟ್ಟಿ ಪ್ರಕಾರ ನಾಳೆ ಬೆಳಿಗ್ಗೆ ಕೇರಳದಿಂದ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಬೇಕಿತ್ತು ಆದರೆ ಸರಣಿ ಪ್ರತಿಭಟನೆ ಹಿನ್ನಲೆಯಲ್ಲಿ ಬಿಎಸ್ ವೈ ಬೆಳಿಗ್ಗೆ ಬರುವ ಬದಲು ಇಂದು ರಾತ್ರಿಯೇ ಮಂಗಳೂರಿಗೆ ಬರಲು ನಿರ್ಧಾರಿಸಿದ್ದಾರೆ.

Body:.Conclusion:
Last Updated : Dec 24, 2019, 5:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.