ಬೆಂಗಳೂರು: "ಜಮೀರ್ ಅಹಮದ್ ಯಾವುದೋ ಒಂದು ಸಮುದಾಯದ ಜವಾಬ್ದಾರಿ ತಗೊಂಡಿಲ್ಲ. ನೀವು ನಿಮ್ಮ ಅಂತರಾಳದ ಮಾತು ಆಡಿದ್ದೀರಿ. ಈ ಹೇಳಿಕೆ ನಿಜಕ್ಕೂ ದುರದೃಷ್ಟಕರ. ಇನ್ನು ಮುಂದೆ ಈ ರೀತಿ ಮಾತಾಡದಂತೆ ಎಚ್ಚರಿಕೆ ವಹಿಸಿ" ಎಂದು ಸಚಿವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.
ಜಮೀರ್ ಅಹಮ್ಮದ್ ಅವರು ತೆಲಂಗಾಣ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತು ಶಿವಾನಂದ ವೃತ್ತದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಶುಕ್ರವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, "ಜಮೀರ್ ಅಹಮದ್ ಅವರ ಬಾಯಲ್ಲಿ ಇಂಥ ಮಾತು ದುರದೃಷ್ಟಕರ ಹಾಗೂ ಖಂಡನೀಯ. ಸಭಾಧ್ಯಕ್ಷರ ಪೀಠಕ್ಕೆ ಶಾಸಕರು ಗೌರವ ಕೊಡುವುದೇ ವಿನಃ ಯಾವುದೋ ವ್ಯಕ್ತಿಗಲ್ಲ. ಇನ್ಮುಂದಾದರೂ ಈ ರೀತಿ ಮಾತಾಡುವಾಗ ಎಚ್ಚರಿಕೆ ಇರಲಿ" ಎಂದರು.
-
Karnataka meh Congress ke Muslim Leader's ka kya position hai dekho..
— Abdul.Mukarram (@Mukarram7143) November 13, 2023 " class="align-text-top noRightClick twitterSection" data="
Zameer Ahmed Minister Karnataka State @KTRBRS @INCTelangana @nawab_meraj @htTweets pic.twitter.com/bovjIbcs1r
">Karnataka meh Congress ke Muslim Leader's ka kya position hai dekho..
— Abdul.Mukarram (@Mukarram7143) November 13, 2023
Zameer Ahmed Minister Karnataka State @KTRBRS @INCTelangana @nawab_meraj @htTweets pic.twitter.com/bovjIbcs1rKarnataka meh Congress ke Muslim Leader's ka kya position hai dekho..
— Abdul.Mukarram (@Mukarram7143) November 13, 2023
Zameer Ahmed Minister Karnataka State @KTRBRS @INCTelangana @nawab_meraj @htTweets pic.twitter.com/bovjIbcs1r
ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರದ ಕುರಿತು ಪ್ರತಿಕ್ರಿಯಿಸಿ, "ಸರ್ಕಾರ ಬಂದ ದಿನಗಳಿಂದಲೂ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಮೊನ್ನೆ ಐಟಿ ದಾಳಿ ಮಾಡಿದಾಗ ಸಿಕ್ಕ ಹಣದ ಮೂಲ ಯಾವುದು? ಸಿಎಂ, ಡಿಸಿಎಂ ಐಟಿ ದಾಳಿ ಸ್ವಾಗತ ಮಾಡಿದರಾ? ಅದರ ಬದಲಾಗಿ ಟೀಕೆ ಮಾಡಿದ್ದರು. ಯಾಕೆ ಟೀಕೆ ಮಾಡಿದರು ಅಂದರೆ ಅವರಿಗೆ ನೋವಾಗಿದೆ ಅಂತಾ ಇದರ ಅರ್ಥವಲ್ಲವೇ?. ಇವರ ಹಣ ಅವರದ್ದೇ ತಾನೇ? ಬರುವ ದಿನಗಳಲ್ಲಿ ಇದು ರಾಜ್ಯದ ಜನರಿಗೆ ಗೊತ್ತಾಗುತ್ತದೆ" ಎಂದು ಹೇಳಿದರು.
"ರಾಜ್ಯದಲ್ಲಿ ಭೀಕರ ಬರಗಾಲ ಇದೆ. ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ದಾವಣಗೆರೆಯ ಹೊನ್ನಾಳಿಯ ರೈತರಿಗೆ ನೀರು ಕೊಟ್ಟರೆ ಆ ಭಾಗದ ಜನರು ಬದುಕಿಕೊಳ್ತಾರೆ. ಆದರೆ, ಇದರ ಯಾವುದರ ಬಗ್ಗೆ ಯೋಚನೆ ಮಾಡದೇ ಅಧಿಕಾರದ ಅಮಲಿನಲ್ಲಿ ತೇಲುತ್ತಿರೋದು ದುರದೃಷ್ಟಕರ. ಈಗಲಾದರೂ ಎಚ್ಚೆತ್ತುಕೊಂಡು ರೈತರನ್ನು ಕಾಪಾಡಬೇಕು" ಎಂದು ಆಗ್ರಹಿಸಿದರು.
ಇಂದೇ ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆ ಆಗುತ್ತಾ ಎಂಬ ಪ್ರಶ್ನೆಗೆ, "ಹೌದು, ಆಗುತ್ತದೆ" ಎಂದು ಸ್ಪಷ್ಟಪಡಿಸಿದರು.
ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, "ಜಮೀರ್ ಅಹಮದ್ ಹೇಳಿಕೆ ಹುಚ್ಚು ಹಾಗೂ ವಿಕೃತ. ಹಿಂದೂ ಹಾಗೂ ಮುಸ್ಲಿಮರು ಸೌಹಾರ್ದಯುತವಾಗಿ ಬದುಕಬೇಕು. ನಿಮ್ಮ ಬಾಯಲ್ಲಿ ಬರುವ ಮಾತಿಂದ ಕೋಮು ಘರ್ಷಣೆಗಳಾಗ್ತಿವೆ. ಎಲುಬಿಲ್ಲದ ನಾಲಿಗೆಯಂತೆ ಏನೇನೋ ಮಾತಾಡೋದಲ್ಲ. ಯು.ಟಿ.ಖಾದರ್ಗೆ ನಾವು ತಲೆಬಾಗಲ್ಲ. ಖಾದರ್ ಕೂಡ ಇದನ್ನು ಖಂಡಿಸಬೇಕು. ಈ ನಾಡಿನ ಜನರಲ್ಲಿ ಕ್ಷಮಾಪಣೆ ಕೋರಬೇಕು" ಎಂದು ಒತ್ತಾಯಿಸಿದರು.
ವಿಜಯೇಂದ್ರ ನೇಮಕದಿಂದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ವಿ.ಸೋಮಣ್ಣ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, "ವಿಜಯೇಂದ್ರ ಒಬ್ಬ ಮೆಚ್ಯೂರ್ಡ್ ಪೊಲಿಟೀಷಿಯನ್. ಅವರು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡ್ತಿದ್ದಾರೆ. ಸೋಮಣ್ಣ ಹಿರಿಯರಿದ್ದಾರೆ. ಅವರು ಏನೇ ಮಾತಾಡಿದರೂ ಕೊನೆಗೆ ವಿಜಯೇಂದ್ರಗೆ ಶುಭವಾಗಲಿ ಎಂದಿದ್ದಾರೆ. ಇದಕ್ಕಿಂತ ಇನ್ನೇನು ಬೇಕು?" ಎಂದರು.
ಸಂವಿಧಾನಕ್ಕೆ ಅಗೌರವ ನೀಡುವಂತಹ ಹೇಳಿಕೆ ನೀಡಿದ ಸಚಿವ ಜಮೀರ್ ಅಹಮದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದು ಬುದ್ಧಿಮಾತು ಹೇಳಬೇಕೆಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತೆಲಂಗಾಣದ ಚುನಾವಣಾ ಪ್ರಚಾರದಲ್ಲಿ ಜಮೀರ್ ಅಹಮದ್ ಅವರು ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಪ್ರಜಾಪ್ರಭುತ್ವದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಸ್ಪೀಕರ್ ಸ್ಥಾನ ಬಹಳ ದೊಡ್ಡದು ಮತ್ತು ಗೌರವಯುತವಾದುದು ಎಂದು ನುಡಿದರು.
ವ್ಯಕ್ತಿಗತವಾಗಿ ಆ ಪೀಠದಲ್ಲಿ ಯುಟಿ ಖಾದರ್ ಕುಳಿತುಕೊಳ್ಳುತ್ತಾರೋ ಅಥವಾ ಯಾರು ಕುಳಿತುಕೊಳ್ಳುತ್ತಾರೆ ಎಂಬುದು ಪ್ರಜಾಪ್ರಭುತ್ವದ ವ್ಯವಸ್ಥೆಯಂತೆ ನಡೆಯುತ್ತದೆ. ಬಿಜೆಪಿ ಶಾಸಕರು, ಮುಖಂಡರು ಕೈಮುಗಿದು ತಲೆಬಾಗಿ ನಮಸ್ಕರಿಸುತ್ತಾರೆ ಎಂಬ ಮಾದರಿಯಲ್ಲಿ ಸಚಿವರು ಹೇಳಿದ್ದು, ಅದು ಸ್ಪೀಕರ್ ಸ್ಥಾನಕ್ಕೆ ಕೊಡುವ ಗೌರವ ಎಂದು ವಿಶ್ಲೇಷಿಸಿದರು. ಅದನ್ನು ಅವರು ಗಮನದಲ್ಲಿ ಇಟ್ಟುಕೊಂಡಿಲ್ಲ ಎಂದು ಟೀಕಿಸಿದರು.
ಸಂವಿಧಾನ ಬದ್ಧವಾಗಿ ಕಾಯಾ, ವಾಚಾ, ಮನಸಾ, ರಾಗದ್ವೇಷವಿಲ್ಲದೆ ಕೆಲಸ ಮಾಡುವುದಾಗಿ ಪ್ರಮಾಣವಚನ ಸ್ವೀಕರಿಸಿದ ಜಮೀರ್ ಅಹಮದ್ ಅವರು, ಬಿಜೆಪಿ ಎಲ್ಲ ಶಾಸಕರು ತಲೆಬಾಗುತ್ತಾರೆ ಎಂದು ಹೇಳಿದ್ದು ದುರದೃಷ್ಟಕರ ಎಂದು ತಿಳಿಸಿದರು.
ಅದು ಸಂವಿಧಾನಿಕ ಪೀಠಕ್ಕೆ ಕೊಡುವ ಗೌರವ. ಬಿಜೆಪಿ ಶಾಸಕರು ಸಂವಿಧಾನಬದ್ಧ ಪೀಠಕ್ಕೆ ಗೌರವ ಕೊಡುತ್ತಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳದೆ ಸಂವಿಧಾನಕ್ಕೆ ಅಗೌರವ ತರುವಂತೆ ಜಮೀರ್ ಅಹಮದ್ ಅವರು ಮಾತನಾಡಿದ್ದನ್ನು, ಯಾವಾಗಲೂ ಸಂವಿಧಾನಬದ್ಧವಾಗಿ ನಡೆದುಕೊಳ್ಳುವುದಾಗಿ ಮತ್ತು ಗೌರವಿಸುವವ ಎನ್ನುವ ಸಿದ್ದರಾಮಯ್ಯನವರು ಹೇಗೆ ಪರಿಗಣಿಸಿದ್ದಾರೆ ಎಂದು ಪ್ರಶ್ನಿಸಿದರು. ಇಂತಹ ಅವಾಂತರದ ಮಾತುಗಳು, ಸಂವಿಧಾನಕ್ಕೆ ವಿರುದ್ಧವಾಗಿ ಸ್ಪೀಕರ್ ಸ್ಥಾನಕ್ಕೆ ಅಗೌರವ ತರುವುದನ್ನು ಗಮನಿಸಿ ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ವೃಥಾ ಆರೋಪ ಎಚ್ಡಿಕೆಗೆ ಶೋಭೆ ತರಲ್ಲ, ಯತೀಂದ್ರ ವರ್ಗಾವಣೆ ಬಗ್ಗೆ ಮಾತನಾಡಿಲ್ಲ: ಜಮೀರ್ ಅಹಮದ್