ETV Bharat / state

ರಾಜ್ಯದಲ್ಲಿ ‘‘ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ‘‘ ಬ್ರಾಂಚ್​ ಒಪನ್​ ಆಗಿದೆ: ಬಿ.ವೈ ವಿಜಯೇಂದ್ರ - ಹಣ ಸಾಗಾಟ

ರಾಜ್ಯದಲ್ಲಿ ಹಣ ಲೂಟಿ ಮಾಡಲು ಅಂತಾನೆ ಕಾಂಗ್ರೆಸ್​ ಪಕ್ಷ 'ಶಿವಕುಮಾರ್​ ಬ್ಯಾಂಕ್​ ಆಫ್​ ಇಂಡಿಯಾ' ಬ್ರಾಂಚ್​ ಆರಂಭಿಸಿದೆ ಎಂದು ಬಿ ವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಬಿ.ವೈ ವಿಜಯೇಂದ್ರ
ಬಿ.ವೈ ವಿಜಯೇಂದ್ರ
author img

By ETV Bharat Karnataka Team

Published : Oct 16, 2023, 4:14 PM IST

ಬಿ.ವೈ ವಿಜಯೇಂದ್ರ ಹೇಳಿಕೆ

ಬೆಂಗಳೂರು: ದೇಶದಲ್ಲಿ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಇದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ನವರು 'ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ' ಎಂಬ ಬ್ರಾಂಚ್​ ಒಪನ್​ ಮಾಡಿದ್ದಾರೆ. ರಾಜ್ಯದಲ್ಲಿ ಹಣ ವಸೂಲಿ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ. ಪಂಚ ರಾಜ್ಯ ಮತ್ತು ಲೋಕಸಭೆ ಚುನಾವಣೆಗೆ ಈ ರೀತಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯ ಚುಬಾವಣೆ ಹತ್ತಿರ ಬರುತ್ತಿದ್ದ ಹಾಗೆ ಕಾಂಗ್ರೆಸ್ ಚಟುವಟಿಕೆ ಚುರುಕಾಗಿದೆ. ಪಂಚ ರಾಜ್ಯಗಳಿಗೆ ಹಣ ಕಳುಹಿಸುವ ಕಾಂಗ್ರೆಸ್ ಸಂಚು ಬಯಲಾಗಿದೆ. ಎಷ್ಟು ಸಾವಿರ ಕೋಟಿ ಕಳುಹಿಸುತ್ತಿದ್ದಾರೆ ಹೊರ ರಾಜ್ಯಗಳಿಗೆ ಅಂತ ಯಾರಿಗೂ ಅಂದಾಜು ಸಿಗುತ್ತಿಲ್ಲ. ಒಳ್ಳೆ ಆಡಳಿತ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್​, ಈಗ ಹಗಲು ದರೋಡೆಯಲ್ಲಿ ಮುಳುಗಿದೆ ಎಂದು ಅವರು ಆರೋಪಿಸಿದರು.

ದಸರಾದಲ್ಲಿ ಕಲಾವಿದರಿಂದಲೂ ಕಮಿಷನ್ ಕೇಳುವ ಮಟ್ಟಕ್ಕೆ ಇವರು ಇಳಿದಿದ್ದಾರೆ‌. ಕಮಿಷನ್ ತಳಮಟ್ಟದ ಅಧಿಕಾರಿಗಳವರೆಗೂ ಮುಟ್ಟಿದೆ ಇದು ಎಟಿಎಂ ಸರ್ಕಾರ,‌ ಕಾಂಗ್ರೆಸ್ ನವರು ಲೂಟಿಗೆ ಮೇನ್ ಬ್ಯಾಂಕ್ ತೆರೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಹಣ ಸಂಗ್ರಹ ಮಾಡಿ ಪಂಚ ರಾಜ್ಯಗಳಿಗೆ ಕಳುಹಿಸುತ್ತಿರುವ ಕಾಂಗ್ರೆಸ್​ನ ಸಂಚು ಜನರಿಗೂ ಗೊತ್ತಾಗಿದೆ. ಕಾಂಗ್ರೆಸ್ ನವರು ಐಟಿ ದಾಳಿ ರಾಜಕೀಯ ಪ್ರೇರಿತ ಅಂತ ಅಷ್ಟೇ ಹೇಳುತ್ತಿದ್ದಾರೆ ಆದರೆ, ಆ ಹಣ ಕಾಂಗ್ರೆಸ್​​​ನದ್ದಲ್ಲ ಅಂತ ಅವರು ಹೇಳಿಲ್ಲ. ಅದರ ಅರ್ಥ ಈ ಹಣ ಕಾಂಗ್ರೆಸ್​​​ಗೆ ಸೇರಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಇದು ಲೂಟಿ ಸರ್ಕಾರ ಎಂದು ವಿಜಯೇಂದ್ರ ಗಂಭೀರ ಆರೋಪ ಮಾಡಿದರು.

ಅನ್ಯ ರಾಜ್ಯಗಳಿಗೆ ಹಣ ಸಾಗಣೆ ಬಿವೈವಿ ಆರೋಪ: ಡಿಸಿಎಂ ಶಿವಕುಮಾರ್ ಮೂಲಕ ಬಿಬಿಎಂಪಿ, ಬೇರೆ ಬೇರೆ ಇಲಾಖೆಗಳಿಂದ ಹಣ ಸಂಗ್ರಹ ಮಾಡಿ ಅನ್ಯ ರಾಜ್ಯಗಳಿಗೆ ಕಳಿಸುತ್ತಿದ್ದಾರೆ. ಚುನಾವಣೆಗಾಗಿ ಗುತ್ತಿಗೆದಾರರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ರಾಜ್ಯದಲ್ಲಿ ಲೂಟಿ ಮಾಡುವ ಮೂಲಕ ಬೇರೆ ರಾಜ್ಯಗಳಲ್ಲಿ ಚುನಾವಣೆ ಗೆಲ್ಲೋದಕ್ಕೆ ಹೊರಟಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡಲ್ಲ ಎಂದರು.

ಕಾಂಗ್ರೆಸ್​ ಬಣ್ಣ ಬಯಲು- ವಿಜಯೇಂದ್ರ: ವಿದ್ಯುತ್ ದರ ಹೆಚ್ಚಳ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಕಾಂಗ್ರೆಸ್ ಬಣ್ಣ ಬಯಲಾಗಿದೆ. ರೈತರಿಗೆ ವಿದ್ಯುತ್ ಬರೆ ಹಾಕುತ್ತಿದ್ದಾರೆ. ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ ಹವಾಮಾನ ಇಲಾಖೆ ಮುಂಚೆಯೇ ಬರದ ಬಗ್ಗೆ ಎಚ್ಚರಿಸಿತ್ತು. ಆದರೆ, ಈ ಸರ್ಕಾರ ಬರ ಎದುರಿಸಲು ಸಜ್ಜಾಗಲಿಲ್ಲ. ಇವರಿಗೆ ಬಡವರು, ರೈತರ ಬಗ್ಗೆ ಕಾಳಜಿ‌ ಇಲ್ಲ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಬೇರೆ ರಾಜ್ಯಗಳಿಂದ ಈಗಾಗಲೇ ವಿದ್ಯುತ್ ಖರೀದಿಸಿ ರೈತರಿಗೆ ಕೊಡ ಬಹುದಿತ್ತು. ಈಗ ವಿದ್ಯುತ್ ಖರೀದಿ ಡ್ರಾಮಾ ಮಾಡುತ್ತಿದ್ದಾರೆ. ಸುಳ್ಳು ಭರವಸೆ ಕೊಡುವ ಮೂಲಕ ಲೋಕಸಭೆ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.

ನಂತರ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪಿಸಿ ಬಾರ್ ಮಾಲೀಕರಿಂದ ಸಿಎಂಗೆ ಪತ್ರ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ಮೈಸೂರು ದಸರಾದಲ್ಲೇ ಹಣ ವಸೂಲಿ ಮಾಡುವ ಅಧಿಕಾರಿಗಳು ಇದ್ದಾರೆ. ಇನ್ನು ಅಬಕಾರಿ ಇಲಾಖೆಯಲ್ಲಿ ಹಣ ವಸೂಲಿ ಮಾಡಲ್ವಾ..? ಇವರು ಎಲ್ಲದರಿಂದಲೂ ಅಧಿಕಾರಿಗಳಿಂದ ಹಣ ವಸೂಲಿ ಮಾಡಿಸುತ್ತಿದ್ದಾರೆ. ಬಹಿರಂಗವಾಗಿಯೇ ವಸೂಲಿಗೆ ಇಳಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ಗೆ ಹೇಳದೆಯೇ ಆಯಾ ಇಲಾಖೆ ಮಂತ್ರಿಗಳು ಹಣಕ್ಕಾಗಿ ವಸೂಲಿಗೆ ಇಳಿಯಲ್ಲ ಎಂದರು.

ದಸರಾ ಬಳಿಕ ವಿಪಕ್ಷ ನಾಯಕ ಆಯ್ಕೆಯಾಗುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ‌, ಎಲ್ಲವೂ ದೆಹಲಿ ನಾಯಕರು ಅತಿ ಶೀಘ್ರದಲ್ಲೇ ತೀರ್ಮಾನ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಗುತ್ತಿಗೆದಾರರ ನಿವಾಸದಲ್ಲಿ ಕೋಟಿ ಕೋಟಿ ಹಣ ಪತ್ತೆ ಕೇಸ್ ಇಡಿಗೆ ವಹಿಸಿ: ಯಡಿಯೂರಪ್ಪ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.