ETV Bharat / state

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮತಿಭ್ರಮಣೆ, ಕೊತ್ವಾಲನ ಜಪ ಮಾಡ್ತಿದ್ದಾರೆ: ಬಿ.ಕೆ.ಹರಿಪ್ರಸಾದ್ - ETV Bharat Kannada News

ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್​ ಅವರು ಟ್ವೀಟ್‌ಗಳ ಮೂಲಕ ಟೀಕಾ ಸಮರ ನಡೆಸಿದ್ದಾರೆ.

Legislative Council Leader of Opposition BK Hariprasad
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್
author img

By

Published : Jan 26, 2023, 7:11 AM IST

Updated : Jan 26, 2023, 8:55 AM IST

ಬೆಂಗಳೂರು : "ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಅವರಿಗೆ ಮತಿಭ್ರಮಣೆ ಆಗಿದೆ. ಅವರು ಕೊತ್ವಾಲರ ಜಪ ಶುರು ಮಾಡಿದ್ದಾರೆ" ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನೂತನ ರೌಡಿ ಮೋರ್ಚಾದ ಶಾಖೆ ಉದ್ಘಾಟಿಸಿರುವ ಬಿಜೆಪಿಗೆ ರಾಜ್ಯಾಧ್ಯಕ್ಷ ಇಲ್ಲದೇ ಮತಿಭ್ರಮಣೆಯಾಗಿ ಕೋತ್ವಾಲನ ಜಪ ಆರಂಭಿಸಿದ್ದಾರೆ. ಕನಸಿನಲ್ಲೂ ಕೊತ್ವಾಲ ಬಂದು ಕಾಡುತ್ತಿರುವುದರಿಂದ ಬ್ಲೇಡು, ಚಾಕು, ಚೂರಿ, ಕತ್ತಿಗಳೇ ಬಿಜೆಪಿ ನಾಯಕರ ಬಾಯಲ್ಲಿ ನುಡಿಮುತ್ತುಗಳಾಗಿ ಉದುರುತ್ತಿವೆ" ಎಂದಿದ್ದಾರೆ.

  • ನೂತನ ರೌಡಿ ಮೋರ್ಚಾದ ಶಾಖೆ ಉದ್ಘಾಟಿಸಿರುವ ಬಿಜೆಪಿಗೆ ರಾಜ್ಯಾಧ್ಯಕ್ಷ ಇಲ್ಲದೆ ಮತಿ ಭ್ರಮಣೆಯಾಗಿ ಕೋತ್ವಾಲನ ಜಪ ಶುರು ಮಾಡಿದ್ದಾರೆ.

    ಕನಸಿನಲ್ಲೂ ಕೊತ್ವಾಲ ಬಂದು ಕಾಡುತ್ತಿರುವುದರಿಂದ ಬ್ಲೇಡು, ಚಾಕು,ಚೂರಿ,ಕತ್ತಿಗಳೇ ಬಿಜೆಪಿ ನಾಯಕರ ನುಡಿಮುತ್ತುಗಳಾಗಿ ಉದುರುತ್ತಿದೆ.
    1/5#Criminals_bjp

    — Hariprasad.B.K. (@HariprasadBK2) January 25, 2023 " class="align-text-top noRightClick twitterSection" data=" ">

"ಸ್ಯಾಂಟ್ರೋ ರವಿ, ಫೈಟರ್ ರವಿ, ಲೂಟಿ ರವಿ, ಬಾಟಲ್ ರವಿಗಳಿಂದ ಬಿಜೆಪಿಯ ರೌಡಿ ಮೋರ್ಚಾಗೆ ಶಕ್ತಿ ಬಂದು ಕೊತ್ವಾಲನ ಇಲ್ಲದಿರುವಿಕೆಯಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಹೆಚ್ಚು ಬೆಳೆದ ಕೊತ್ವಾಲನ ನೆರಳು ತಾಗಿಸಿಕೊಂಡಿರುವ ಮಾನದಂಡದ ಮೇಲೆ ವಸೂಲಿಗಾರನಿಗೆ ಮೊದಲ ಆದ್ಯತೆ ಸಿಗುವ ಸಾಧ್ಯತೆ ಇದೆ. ಭವಿಷ್ಯತ್ತಿನಲ್ಲಿ ಮಾಲೆಗಾಂವ್ ಬಾಂಬ್ ಸ್ಪೋಟದ ಸಂಸದೆಯಿಂದ ಭಯೋತ್ಪಾದಕರ ಮೋರ್ಚಾ ಸ್ಥಾಪಿಸುವ ಗುರಿಯೂ ಹೊಂದಿರುವಂತಿದೆ ಬಿಜೆಪಿ ಪಕ್ಷ. ಮಹಾತ್ಮಾ ಗಾಂಧಿಯನ್ನೇ ಕೊಂದ ದೇಶದ ಮೊಟ್ಟ ಮೊದಲ ಭಯೋತ್ಪಾದಕ ಗೋಡ್ಸೆಯ ಸಂತಾನರಿಂದ ಪಾಠ ಕಲಿಯಬೇಕಾದ ದುರ್ದೈವ ಬಂದಿಲ್ಲ."

  • ಕನ್ನಡಿಗರಿಗೆ ಉದ್ಯೋಗವಿಲ್ಲ, ಸ್ಥಳೀಯರಿಗೆ ಅವಕಾಶವಿಲ್ಲ. @BJP4Karnataka ಸರ್ಕಾರವಂತು ಉದ್ಯಮಿಗಳಿಗೆ ನೆರವಾಗಲೇ ಇಲ್ಲ

    ರಾಜ್ಯ ವ್ಯವಹಾರ ಕಾನೂನು ಸುಧಾರಣಾ ಆಯೋಗ ರಚನೆ ಮಾಡುವ ಬದಲು ದ್ವೇಷ ರಾಜಕೀಯದಿಂದ ಉದ್ಯಮಗಳು ರಾಜ್ಯದಿಂದ ಕಾಲ್ಕೀಳುತ್ತಿವೆ

    ಕೊಟ್ಟ ಭರವಸೆಯ ಬಗ್ಗೆ ಉತ್ತರ ಇದ್ಯಾ @BSBommai ಅವ್ರೇ
    #NimHatraIdyaUttara #SayCM pic.twitter.com/EwkvJJ6xEp

    — Hariprasad.B.K. (@HariprasadBK2) January 24, 2023 " class="align-text-top noRightClick twitterSection" data=" ">

"ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಪಕ್ಷದ ರೌಡಿ ಮೋರ್ಚಾ ಮತ್ತು ಭಯೋತ್ಪಾದಕರ ಮೋರ್ಚಾ ಹೆಚ್ಚು ಸಕ್ರಿಯವಾಗುತ್ತಿದೆ. ಬೀದಿಬೀದಿಗಳಲ್ಲಿ ಹೊಡಿ, ಬಡಿ, ಕಡಿ, ಮಾತುಗಳು ಮುನ್ನೆಲೆಗೆ ಬರುತ್ತಿವೆಯೇ ಹೊರತು ಅನ್ನ, ಅರಿವು, ಶಿಕ್ಷಣ, ಆರೋಗ್ಯ, ಅಭಿವೃದ್ಧಿಯ ಚರ್ಚೆಗಳಿಗೆ ಅವಕಾಶವೇ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ಯುವಕರಿಗೆ ಚಾಕು, ಚೂರಿ, ಬಂದೂಕು ತರಬೇತಿ ನೀಡುವ ಪಕ್ಷಕ್ಕೆ ಜನರು ಮತ ನೀಡಬೇಕಾ? ಅಥವಾ ಅದೇ ಮಕ್ಕಳ ಕೈಗೆ ಪೆನ್ನು ಪುಸ್ತಕ ನೀಡಿ ದೇಶದ ಭವಿಷ್ಯ ರೂಪಿಸುವ ಪ್ರಜೆಗಳನ್ನಾಗಿ ಮಾಡುವ ಪಕ್ಷಕ್ಕೆ ಮತ ನೀಡಬೇಕಾ? ಎಂಬುದನ್ನು ಜನರೇ ತೀರ್ಮಾನಿಸಲಿ" ಎಂದು ಬಿ.ಕೆ.ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.

  • ವಿಶ್ವಕ್ಕೆ ಸಿಲಿಕಾನ್ ಸಿಟಿಯಾಗಿ ವಿಖ್ಯಾತಿ ಪಡೆದಿದ್ದ ಬೆಂಗಳೂರು @bjp4karntaka ಸರ್ಕಾರದಿಂದ ಗಾರ್ಬೇಜ್ ಸಿಟಿಯಾಗಿ ಕುಖ್ಯಾತಿ ಪಡೆಯುತ್ತಿದೆ.

    ಕಮಿಷನ್ ಕಾಮಗಾರಿಗಳಿಂದ ರಸ್ತೆಗಳು ಸಾವಿಗೆ ಆಹ್ವಾನಿಸುತ್ತಿವೆ. ಭ್ರಷ್ಟಾಚಾರದಿಂದ ಬೆಂಗಳೂರು ಕಳಂಕ ತಂದಾಗಿದೆ.

    ಬೆಂಗಳೂರಿನ ಹಿರಿಮೆಗೆ ಮಸಿ ಬಳೆದಿರುವ ಬಿಜೆಪಿಯಿಂದ ರಕ್ಷಿಸೋಣ. pic.twitter.com/hqj0oo408b

    — Hariprasad.B.K. (@HariprasadBK2) January 23, 2023 " class="align-text-top noRightClick twitterSection" data=" ">

ಈ ಹಿಂದೆಯೂ ಸಹ ಹಲವು ಬಾರಿ ಬಿ.ಕೆ.ಹರಿಪ್ರಸಾದ್​, ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ನೇರ ವಾಗ್ದಾಳಿ ನಡೆಸಿದ್ದರು. ಕಳೆದ 2 ದಿನಗಳ ಹಿಂದೆ ಕನ್ನಡಿಗರಿಗೆ ರಾಜ್ಯದಲ್ಲಿ ಉದ್ಯೋಗವಿಲ್ಲ, ಸ್ಥಳೀಯರಿಗೆ ಅವಕಾಶವಿಲ್ಲ ಎಂದು ಟ್ವೀಟ್​ ಮಾಡಿ ಕಿಡಿಕಾರಿದ್ದರು. ದ್ವೇಷ ರಾಜಕೀಯದಿಂದ ಉದ್ಯಮಗಳು ರಾಜ್ಯದಿಂದ ಕಾಲ್ಕೀಳುತ್ತಿವೆ ಎಂದಿದ್ದರು.

ವಿಶ್ವದಲ್ಲೇ ಸಿಲಿಕಾನ್ ಸಿಟಿಯಾಗಿ ಖ್ಯಾತಿ ಪಡೆದಿದ್ದ ಬೆಂಗಳೂರು ಮಹಾನಗರ ಬಿಜೆಪಿ ಸರ್ಕಾರದಿಂದ ಗಾರ್ಬೇಜ್ ಸಿಟಿಯಾಗಿ ಕುಖ್ಯಾತಿ ಪಡೆಯುತ್ತಿದೆ. ಕಮಿಷನ್ ಕಾಮಗಾರಿಗಳಿಂದ ರಸ್ತೆಗಳು ಸಾವನ್ನು ಆಹ್ವಾನಿಸುತ್ತಿವೆ. ಭ್ರಷ್ಟಾಚಾರದಿಂದ ಬೆಂಗಳೂರಿಗೆ ಕಳಂಕ ಬಂದಿದೆ. ಹೀಗಾಗಿ ಬೆಂಗಳೂರಿನ ಹಿರಿಮೆಗೆ ಮಸಿ ಬಳಿದಿರುವ ಬಿಜೆಪಿಯಿಂದ ನಗರವನ್ನು ರಕ್ಷಿಸೋಣ ಎಂದು ಕರೆ ಕೊಟ್ಟಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಅಂಡ್ ಟೀಂ ಚಂಬಲ್ ಕಣಿವೆ ಸಂಸ್ಕೃತಿಯಿಂದ ಬಂದವರು: ಹೆಚ್​ಡಿ ಕುಮಾರಸ್ವಾಮಿ

Last Updated : Jan 26, 2023, 8:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.