ಬೆಂಗಳೂರು: ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನೀಡಲಾಗುವ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್ಜಿ ಆಯ್ಕೆಯಾಗಿದ್ದಾರೆ. ಜತೆಗೆ ಪ್ರೆಸ್ ಕ್ಲಬ್ನ ವಿಶೇಷ ಪ್ರಶಸ್ತಿಗೆ ನಟ ಸುದೀಪ್ ಹಾಗೂ ನಾರಾಯಣ ಹೆಲ್ತ್ ಕೇರ್ನ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರನ್ನ ಆಯ್ಕೆ ಮಾಡಲಾಗಿದೆ.
ಉಳಿದಂತೆ 25 ಹಿರಿಯ ಪತ್ರಕರ್ತರು ಪ್ರೆಸ್ ಕ್ಲಬ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಮುಖವಾಗಿ ಎಸ್.ದೇವನಾಥ್, ಎಸ್.ಕೆ ಶೇಷಚಂದ್ರಿಕ, ಪಿ. ರಾಮಕೃಷ್ಣ ಉಪಾಧ್ಯ, ಜಿ.ಎಸ್. ನಾರಾಯಣರಾವ್, ಹೆಚ್.ಬಿ. ದಿನೇಶ್, ಡಾ. ಸಿ.ಎಸ್. ದ್ವಾರಕಾನಾಥ್, ಮುಂಜಾನೆ ಸತ್ಯ, ಗೇಬ್ರಿಯಲ್ ವಾಜ್, ಸಾಗ್ಗೆರೆ ರಾಮಸ್ವಾಮಿ, ಶಾ೦ತಲಾ ಧರ್ಮರಾಜ್, ಉದಯ ಮರಕಿಣಿ, ಎಸ್.ಕೆ. ಶ್ಯಾಂಸುಂದರ್, ಎಂ.ಸಿ. ಪಾಟೀಲ್, ಆರ್. ಶ್ರೀಧರ್, ಇಂದ್ರಜಿತ್ ಲಂಕೇಶ್, ವೈ.ಗ . ಜಗದೀಶ್, ಕೆ.ಎಂ. ಮನು ಅಯ್ಯಪ್ಪ, ಎಸ್. ಲಕ್ಷ್ಮಿನಾರಾಯಣ, ಪರಮೇಶ್ವರ್ ಗುಂಟ್ಕಲ್, ರಾಘವೇ೦ದ್ರ ಹುಣಸೂರು, ಕೆ.ಆದಿನಾರಾಯಣಮೂರ್ತಿ, ವಿಶ್ವನಾಥ್ ಸುವರ್ಣ,ಸುಧಾಕರ ಕೆ. ದರ್ಬೆ, ಡಾ. ಎಂ.ಎಸ್ ಮಣಿ, ಆರ್. ಹೆಚ್.ನಟರಾಜ್ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಫೆಬ್ರವರಿ ಮೂರನೇ ವಾರದಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ಈ ಗಣ್ಯರಿಗೆ ಮುಖ್ಯಮಂತ್ರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪುರಸ್ಕೃತರಿಗೆ ಪ್ರಶಸ್ತಿ ಫಲಕ, ಶಾಲು ಹಾಗೂ ಪ್ರಶಸ್ತಿ ಸೇರಿ 10 ಸಾವಿರ ರೂ. ನಗದು ನೀಡಲಾಗುತ್ತದೆ.