ಬೆಂಗಳೂರು: ಕನ್ನಡ ಚಿತ್ರರಂಗ ಅಲ್ಲದೇ ಬೇರೆ ಭಾಷೆಯಲ್ಲೂ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಹವಾ ಜೋರಾಗಿದೆ. ಚಿತ್ರದ ಟ್ರೈಲರ್ ರಿಲೀಸ್ ಮಾಡಲು ಈಗಾಗಲೇ ಮುಹೂರ್ತ ಫಿಕ್ಸ್ ಆಗಿದ್ದು, ಸಾಕಷ್ಟು ಕುತೂಹಲ ಹುಟ್ಟಿಸಿದೆ.
![Srimannarayana_Movie](https://etvbharatimages.akamaized.net/etvbharat/prod-images/kn-bng-01-avane-srimannarayana-movige-south-star-support-photso-7204735_27112019094451_2711f_1574828091_868.jpg)
ವಿಶೇಷ ಎಂದರೆ, ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಕೆಜಿಎಫ್ ಸಿನಿಮಾ ಶೈಲಿಯಲ್ಲೇ ಅವನೇ ಶ್ರೀಮನ್ನಾರಾಯಣ ಸಿನಿಮಾ ಟ್ರೈಲರ್ ಲಾಂಚ್ ಆಗ್ತಾ ಇದೆ. ತೆಲಗಿನಲ್ಲಿ ನಾಣಿ, ತಮಿಳಿನಲ್ಲಿ ಧನುಷ್, ಮಲಯಾಳಂನಲ್ಲಿ ನವೀನ್ ಪೌಲ್ ಅವರು ನಾರಾಯಣನ ಟ್ರೈಲರ್ ಲಾಂಚ್ ಮಾಡಲಿದ್ದಾರೆ. ಆದ್ರೆ ಕಾರಣಾಂತರಗಳಿಂದ ಹಿಂದಿಯಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ನೇರವಾಗಿ ಯೂ ಟ್ಯೂಬ್ನಲ್ಲಿ ಬಿಡುಗಡೆ ಆಗಲಿದೆ.
ಎಲ್ಲರಿಗೂ ಗೊತ್ತಿರುವಂತೆ ಅವನೇ ಶ್ರೀಮನ್ನಾರಾಯಣ ಚಿತ್ರ ಪ್ಯಾನ್ ಇಂಡಿಯಾ ಬಿಡುಗಡೆಯಾಗುತ್ತಿದ್ದು, ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ. ಹಾಗಾಗಿ, ಐದು ಭಾಷೆಗಳ ಟ್ರೈಲರ್ ನ.28 ರಂದು ಬಿಡುಗಡೆಯಾಗಲಿದೆ.
ಈಗಾಗಲೇ ನಿರ್ಮಾಪಕ ಪುಷ್ಕರ್ ಚಿತ್ರ ಬಿಡುಗಡೆಯ ಪೂರ್ವ ತಯಾರಿಯಲ್ಲಿ ತೊಡಗಿದ್ದು, ಚೆನ್ನೈ, ಹೈದರಾಬಾದ್, ಮುಂಬೈ ಅಂತೆಲ್ಲ ಓಡಾಡುತ್ತಿದ್ದಾರೆ. ಸಚಿನ್ ಈ ಚಿತ್ರದ ನಿರ್ದೇಶಕರು. ರಕ್ಷಿತ್ ಶೆಟ್ಟಿ ನಾಯಕರಾಗಿರುವ ಈ ಚಿತ್ರದಲ್ಲಿ ಶಾನ್ವಿ ನಾಯಕಿ. ಇದೊಂದು ಯುನಿವರ್ಸಲ್ ಸಬ್ಜೆಕ್ಟ್ ಆಗಿದ್ದರಿಂದ ಚಿತ್ರವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದ್ದು, ಡಿಸೆಂಬರ್ 27 ರಂದು ಶ್ರೀಮನ್ನಾರಾಯಣ ಅಭಿಮಾನಿ ದೇವರುಗಳಿಗೆ ದರುಶನ ನೀಡಲಿದ್ದಾನೆ.