ETV Bharat / state

ಇಲಾಖೆ ನಿರ್ವಹಿಸಲು ಬಸ್‌ ದರ ಏರಿಕೆ ನಿಶ್ಚಿತ, ಇಲ್ಲದಿದ್ರೇ ಸರ್ಕಾರಕ್ಕೆ ಅಂಗಲಾಚಬೇಕು - ಡಿ ಸಿ ತಮ್ಮಣ್ಣ

ಮಂಡ್ಯ, ಮದ್ದೂರು, ಮಳವಳ್ಳಿ, ಹಾಸನ, ಚನ್ನರಾಯಪಟ್ಟಣ, ಅರಸೀಕೆರೆ, ಬೈಂದೂರು ಸೇರಿದಂತೆ 50 ತಾಲೂಕುಗಳಲ್ಲಿ ಈ ರೀತಿಯ ಸೌಲಭ್ಯಗಳನ್ನು ಹೊಂದಿರುವ ಅತ್ಯಾಧುನಿಕ ಬಸ್ ನಿಲ್ದಾಣಗಳ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ
author img

By

Published : May 20, 2019, 8:32 PM IST

ಬೆಂಗಳೂರು : ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಒಂದೇ ಸೂರಿನಡಿ ಸರ್ಕಾರಿ ಕಚೇರಿಗಳನ್ನು ಹೊಂದಿರುವ ಅತ್ಯಾಧುನಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ.

ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಬಹುಮಹಡಿ ಸಂಕೀರ್ಣಗಳನ್ನು ನಿರ್ಮಿಸುವುದು. ಆ ಮೂಲಕ ಸರ್ಕಾರಿ ಕಚೇರಿಗಳು ಹಾಗೂ ಹೋಟೆಲ್, ಮತ್ತಿತರ ಸೌಲಭ್ಯಗಳು ಸಿಗುವಂತೆ ಮಾಡುವುದು ಸರ್ಕಾರದ ಉದ್ದೇಶ. ಮೊದಲ ಹಂತದಲ್ಲಿ ಐವತ್ತು ತಾಲೂಕುಗಳಲ್ಲಿ ಇಂತಹ ಸೌಕರ್ಯಗಳಿರುವ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು ಎಂದರು.

ಈ ಉದ್ದೇಶಕ್ಕಾಗಿ ತಕ್ಷಣವೇ 250 ಕೋಟಿ ರೂ. ಗಳನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ಹೇಳಿದ ಸಚಿವರು, ಸರ್ಕಾರಿ ಕೆಲಸಕ್ಕೆಂದು ತಾಲೂಕಾ ಕೇಂದ್ರಗಳಿಗೆ ಬರುವವರು ಆಟೋ, ಮತ್ತಿತರ ಸೌಲಭ್ಯಗಳಿಗೆ ಪರದಾಡಬಾರದು. ಅವರು ಬಸ್ ಇಳಿದ ಕೂಡಲೇ ಹೋಟೆಲ್ ಹಾಗೂ ಸರ್ಕಾರಿ ಕಚೇರಿಗಳು ಒಂದೇ ಕಟ್ಟಡದಲ್ಲಿ ಇದ್ದರೆ ನಿರಾಯಾಸವಾಗಿ ಕೆಲಸ ಮಾಡಿಕೊಂಡು ಹಿಂತಿರುಗಬಹುದು.

ಮಂಡ್ಯ, ಮದ್ದೂರು, ಮಳವಳ್ಳಿ, ಹಾಸನ, ಚನ್ನರಾಯಪಟ್ಟಣ, ಅರಸೀಕೆರೆ, ಬೈಂದೂರು ಸೇರಿದಂತೆ 50 ತಾಲೂಕುಗಳಲ್ಲಿ ಈ ರೀತಿಯ ಸೌಲಭ್ಯಗಳನ್ನು ಹೊಂದಿರುವ ಅತ್ಯಾಧುನಿಕ ಬಸ್ ನಿಲ್ದಾಣಗಳ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ಹೊಸ ತಾಲೂಕುಗಳು ಇದರಲ್ಲಿ ಸೇರಿರುತ್ತವೆ. ಹೀಗೆ ಮಾಡುವುದರಿಂದ ಸಾರಿಗೆ ಸಂಸ್ಥೆ ತನ್ನದೇ ಆದ ಆದಾಯ ಮೂಲವನ್ನು ಹೊಂದಿದಂತಾಗುತ್ತದೆ. ಬಸ್ ನಿಲ್ದಾಣಗಳ ನಿರ್ವಹಣೆ ಕಾರ್ಯವೂ ಸುಲಭವಾಗಲಿದೆ. ಕಟ್ಟಡ ಕಾರ್ಮಿಕರು, ಗಾರ್ಮೆಂಟ್ ಕಾರ್ಖಾನೆಗಳ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರಿಗೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ರಿಯಾಯ್ತಿ ದರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರಯಾಣಿಸಲು ತ್ರೈಮಾಸಿಕ, ಅರ್ಧ ವಾರ್ಷಿಕ ಹಾಗೂ ವಾರ್ಷಿಕ ಪಾಸುಗಳನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಹೀಗೆ ರಿಯಾಯ್ತಿ ದರದ ಪಾಸುಗಳನ್ನು ನೀಡಿದರೆ ಕಾರ್ಮಿಕರಿಗೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಅನುಕೂಲ ಮಾಡಿಕೊಟ್ಟಂತೆಯೂ ಆಗುತ್ತದೆ. ಸಾರಿಗೆ ಸಂಸ್ಥೆಗೆ ನಿರ್ಧಿಷ್ಟ ಪ್ರಮಾಣದ ಹಣ ಮುಂಚಿತವಾಗಿ ಸಿಕ್ಕಂತೆಯೂ ಆಗುತ್ತದೆ. ಸಂಸ್ಥೆಯ ಬಸ್‌ಗಳ ಬಿಡಿ ಭಾಗಗಳನ್ನು ಖರೀದಿಸುವ ವಿಷಯದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಬಿಡಿ ಭಾಗಗಳ ತಯಾರಿಕರನ್ನೇ ಬಿಡ್ ಮೂಲಕ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದರು.

ಸದ್ಯದ ಸ್ಥಿತಿಯಲ್ಲಿ ಬಸ್ ನಿರ್ಮಾಣ ಕಂಪನಿಗಳ ಹೆಸರಿನಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ವಾಸ್ತವದಲ್ಲಿ ಅದು ಸಿಟಿ ಮಾರುಕಟ್ಟೆಯಲ್ಲಿನ ತಯಾರಿಕರಿಂದಲೇ ಬರುತ್ತದೆ. ಹೀಗಾಗಿ ಇನ್ಮುಂದೆ ಕಂಪನಿಗಳ ಹೆಸರಿನಲ್ಲಿ ಖರೀದಿ ಮಾಡುವ ಬದಲು ಉತ್ಪಾದಕರಿಂದಲೇ ಖರೀದಿಸುವುದಾಗಿ ಹೇಳಿದರು. ಹಾಗೆಯೇ ಬಸ್‌ನ ಟೈರುಗಳು ಬಹುಕಾಲ ಬಾಳಿಕೆ ಬರುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಟೈರ್ ಉತ್ಪಾದನಾ ಘಟಕಗಳನ್ನೂ ಸಂಸ್ಥೆಯ ಪ್ರಾಂಗಣದಲ್ಲಿಯೇ ನಿರ್ಮಿಸಲಾಗುವುದು. ಬಸ್‌ನ ಬಿಡಿ ಭಾಗಗಳ ತಯಾರಿಕೆ ಮಾಡುವವರಿಗೂ ಘಟಕಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಐಟಿ ಯೂನಿಟ್ ಹೆಸರಿನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಯುತ್ತಿದೆ. ಇದನ್ನು ತಡೆಗಟ್ಟಿದ್ದಲ್ಲದೇ ತನಿಖೆಗೂ ಆದೇಶ ನೀಡಲಾಗಿದೆ. ವಿವಿಧ ರೀತಿಯ ಅವ್ಯವಹಾರಗಳಲ್ಲಿ ಭಾಗಿಯಾದ ಎಪ್ಪತ್ತೈದಕ್ಕೂ ಹೆಚ್ಚು ಮಂದಿ ನೌಕರರು, ಅಧಿಕಾರಿಗಳನ್ನೂ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದರು.

ಖಾಸಗಿ ಬಸ್‌ಗಳಂತೆಯೇ ಅತ್ಯಾಕರ್ಷಕ ವಿನ್ಯಾಸ ಹೊಂದಿರುವ ಹೊಸ ಬಸ್‌ಗಳನ್ನು ರಸ್ತೆ ಸಾರಿಗೆ ಸಂಸ್ಥೆ ಬಿಡುಗಡೆ ಮಾಡಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ ಅವರು, ಖಾಸಗಿಯವರಿಗೆ ಪೈಪೋಟಿ ನೀಡಲು ಅಗತ್ಯ ಸಂಸ್ಥೆಯನ್ನು ಸಜ್ಜುಗೊಳಿಸಬೇಕಿದೆ. ಹೊಸ ವಿನ್ಯಾಸ, ಅತ್ಯಾಕರ್ಷಕ ಬಣ್ಣದೊಂದಿಗೆ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್‌ಗಳು ಮಿನುಗುವಂತೆ ಮುಂದಿನ ದಿನಗಳಲ್ಲಿ ನೋಡಿಕೊಳ್ಳಲಾಗುವುದು ಎಂದ ಸಚಿವರು, ರಸ್ತೆ ಸಾರಿಗೆ ಸಂಸ್ಥೆ ಹೊಸತಾಗಿ ಮೂರೂವರೆ ಸಾವಿರ ಬಸ್‌ಳನ್ನು ಖರೀದಿಸಲಿದೆ. ಸಾರಿಗೆ ಸಂಸ್ಥೆ ಬಸ್‌ಗಳ ಪ್ರಯಾಣ ದರ ಏರಿಕೆ ನಿಶ್ಚಿತ. ಒಂದು ವೇಳೆ ನಾವು ಬಸ್ ಪ್ರಯಾಣ ದರ ಹೆಚ್ಚಳ ಮಾಡದಿದ್ದರೆ ಸರ್ಕಾರದಿಂದ ಅನುದಾನ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯಾದ್ಯಂತ ಇರುವ ಸಾರಿಗೆ ಇಲಾಖೆ ಚೆಕ್ ಪೋಸ್ಟ್‌ಗಳು ಪರೋಕ್ಷವಾಗಿ ಮಾಫಿಯಾ ನಿಯಂತ್ರಣದಲ್ಲಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ತಡೆಗಟ್ಟಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸದ್ಯದ ಸ್ಥಿತಿಯಲ್ಲಿ 750 ಆರ್‌ಟಿಒ ಪೋಸ್ಟುಗಳಿದ್ದರೂ 400 ಮಂದಿಯಷ್ಟೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಉಳಿದ ಪೋಸ್ಟುಗಳನ್ನು ಸಾರಿಗೆ ಸಂಸ್ಥೆಯ ವತಿಯಿಂದಲೇ ಭರ್ತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಮಾಹಿತಿ ನೀಡಿದರು.

Intro:ಬೆಂಗಳೂರು : ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಒಂದೇ ಸೂರಿನಡಿ ಸರ್ಕಾರಿ ಕಛೇರಿಗಳನ್ನು ಹೊಂದಿರುವ ಅತ್ಯಾಧುನಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. Body:ವಿಧಾನಸೌಧದಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು, ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಬಹುಮಹಡಿ ಸಂಕೀರ್ಣಗಳನ್ನು ನಿರ್ಮಿಸುವುದು, ಆ ಮೂಲಕ ಸರ್ಕಾರಿ ಕಛೇರಿಗಳು ಹಾಗೂ ಹೋಟೆಲ್ ಮತ್ತಿತರ ಸೌಲಭ್ಯಗಳು ಸಿಗುವಂತೆ ಮಾಡುವುದು ಸರ್ಕಾರದ ಉದ್ದೇಶ. ಮೊದಲ ಹಂತದಲ್ಲಿ ಐವತ್ತು ತಾಲ್ಲೂಕುಗಳಲ್ಲಿ ಇಂತಹ ಸೌಕರ್ಯಗಳಿರುವ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಈ ಉದ್ದೇಶಕ್ಕಾಗಿ ತಕ್ಷಣವೇ 250 ಕೋಟಿ ರೂ. ಗಳನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ಹೇಳಿದ ಸಚಿವರು, ಸರ್ಕಾರಿ ಕೆಲಸಕ್ಕೆಂದು ತಾಲ್ಲೂಕು ಕೇಂದ್ರಗಳಿಗೆ ಬರುವವರು ಆಟೋ, ಮತ್ತಿತರ ಸೌಲಭ್ಯಗಳಿಗೆ ಪರದಾಡಬಾರದು. ಅವರು ಬಸ್ ಇಳಿದ ಕೂಡಲೇ ಹೋಟೆಲ್ ಹಾಗೂ ಸರ್ಕಾರಿ ಕಛೇರಿಗಳು ಒಂದೇ ಕಟ್ಟಡದಲ್ಲಿ ಇದ್ದರೆ ನಿರಾಯಾಸವಾಗಿ ಕೆಲಸ ಮಾಡಿಕೊಂಡು ಹಿಂತಿರುಗಬಹುದು ಎಂದು ಹೇಳಿದರು.
ಮಂಡ್ಯ, ಮದ್ದೂರು, ಮಳವಳ್ಳಿ, ಹಾಸನ, ಚನ್ನರಾಯಪಟ್ಟಣ, ಅರಸೀಕೆರೆ, ಬೈಂದೂರು ಸೇರಿದಂತೆ 50 ತಾಲ್ಲೂಕುಗಳಲ್ಲಿ ಈ ರೀತಿಯ ಸೌಲಭ್ಯಗಳನ್ನು ಹೊಂದಿರುವ ಅತ್ಯಾಧುನಿಕ ಬಸ್ ನಿಲ್ದಾಣಗಳ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ ಎಂದರು.
ಹೊಸ ತಾಲ್ಲೂಕುಗಳು ಇದರಲ್ಲಿ ಸೇರಿರುತ್ತವೆ. ಹೀಗೆ ಮಾಡುವ ಮೂಲಕ ಸಾರಿಗೆ ಸಂಸ್ಥೆ ತನ್ನದೇ ಆದ ಆದಾಯ ಮೂಲವನ್ನು ಹೊಂದಿದಂತಾಗುತ್ತದೆ. ಆ ಮೂಲಕ ಬಸ್ ನಿಲ್ದಾಣಗಳ ನಿರ್ವಹಣೆ ಕಾರ್ಯವೂ ಸುಲಭವಾಗಲಿದೆ. ಈ ಮಧ್ಯೆ ರಾಜ್ಯದ ಕಟ್ಟಡ ಕಾರ್ಮಿಕರು, ಗಾರ್ಮೆಂಟ್ ಕಾರ್ಖಾನೆಗಳ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರಿಗೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ರಿಯಾಯ್ತಿ ದರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಪ್ರಯಾಣಿಸಲು ತ್ರೈಮಾಸಿಕ, ಅರ್ಧ ವಾರ್ಷಿಕ ಹಾಗೂ ವಾರ್ಷಿಕ ಪಾಸುಗಳನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಹೀಗೆ ರಿಯಾಯ್ತಿ ದರದ ಪಾಸುಗಳನ್ನು ನೀಡಿದರೆ ಕಾರ್ಮಿಕರಿಗೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಅನುಕೂಲ ಮಾಡಿಕೊಟ್ಟಂತೆಯೂ ಆಗುತ್ತದೆ. ಸಾರಿಗೆ ಸಂಸ್ಥೆಗೆ ನಿರ್ದಿಷ್ಟ ಪ್ರಮಾಣದ ಹಣ ಮುಂಚಿತವಾಗಿ ಸಿಕ್ಕಂತೆಯೂ ಆಗುತ್ತದೆ. ಸಂಸ್ಥೆಯ ಬಸ್ಸುಗಳ ಬಿಡಿ ಭಾಗಗಳನ್ನು ಖರೀದಿಸುವ ವಿಷಯದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದ್ದು ಇದನ್ನು ತಡೆಗಟ್ಟಲು ಬಿಡಿ ಭಾಗಗಳ ತಯಾರಿಕರನ್ನೇ ಬಿಡ್ ಮೂಲಕ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದರು.
ಸದ್ಯದ ಸ್ಥಿತಿಯಲ್ಲಿ ಬಸ್ ನಿರ್ಮಾಣ ಕಂಪನಿಗಳ ಹೆಸರಿನಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ ವಾಸ್ತವದಲ್ಲಿ ಅದು ಸಿಟಿ ಮಾರುಕಟ್ಟೆಯಲ್ಲಿನ ತಯಾರಿಕರಿಂದಲೇ ಬರುತ್ತದೆ.ಹೀಗಾಗಿ ಇನ್ನು ಮುಂದೆ ಕಂಪನಿಗಳ ಹೆಸರಿನಲ್ಲಿ ಖರೀದಿ ಮಾಡುವ ಬದಲು ಉತ್ಪಾದಕರಿಂದಲೇ ಖರೀದಿ ಮಾಡುವುದಾಗಿ ಅವರು ಹೇಳಿದರು.
ಹಾಗೆಯೇ ಬಸ್ಸಿನ ಟೈರುಗಳು ಬಹುಕಾಲ ಬಾಳಿಕೆ ಬರುತ್ತಿಲ್ಲ.ಇದನ್ನು ಗಮನದಲ್ಲಿಟ್ಟುಕೊಂಡು ಟೈರ್ ಉತ್ಪಾದನಾ ಘಟಕಗಳನ್ನೂ ಸಂಸ್ಥೆಯ ಪ್ರಾಂಗಣದಲ್ಲಿಯೇ ನಿರ್ಮಿಸಲಾಗುವುದು ಎಂದ ಅವರು,ಬಸ್ಸಿನ ಬಿಡಿ ಭಾಗಗಳ ತಯಾರಿಕೆ ಮಾಡುವವರಿಗೂ ಘಟಕಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಡಲಾಗುವುದು ಎಂದರು.
ಐಟಿ ಯೂನಿಟ್ ಹೆಸರಿನಲ್ಲಿ ಕೋಟ್ಯಾಂತರ ರೂ ಅವ್ಯವಹಾರ ನಡೆಯುತ್ತಿದ್ದು ಇದನ್ನು ತಡೆಗಟ್ಟಿದ್ದಲ್ಲದೆ ತನಿಖೆಗೂ ಆದೇಶ ನೀಡಲಾಗಿದೆ.ವಿವಿಧ ರೀತಿಯ ಅವ್ಯವಹಾರಗಳಲ್ಲಿ ಭಾಗಿಯಾದ ಎಪ್ಪತ್ತೈದಕ್ಕೂ ಹೆಚ್ಚು ಮಂದಿ ನೌಕರರು,ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದರು.
ಖಾಸಗಿ ಬಸ್ಸುಗಳಂತೆಯೇ ಅತ್ಯಾಕರ್ಷಕ ವಿನ್ಯಾಸ ಹೊಂದಿರುವ ಹೊಸ ಬಸ್ಸುಗಳನ್ನು ರಸ್ತೆ ಸಾರಿಗೆ ಸಂಸ್ಥೆ ಬಿಡುಗಡೆ ಮಾಡಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ ಅವರು,ಖಾಸಗಿಯವರಿಗೆ ಪೈಪೋಟಿ ನೀಡಲು ಅಗತ್ಯವಾಗುವಂತೆ ಸಂಸ್ಥೆಯನ್ನು ಸಜ್ಜುಗೊಳಿಸಬೇಕಿದೆ ಎಂದು ವಿವರಿಸಿದರು.
ಹೊಸ ವಿನ್ಯಾಸ, ಅತ್ಯಾಕರ್ಷಕ ಬಣ್ಣದೊಂದಿಗೆ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಸುಗಳು ಮಿನುಗುವಂತೆ ಮುಂದಿನ ದಿನಗಳಲ್ಲಿ ನೋಡಿಕೊಳ್ಳಲಾಗುವುದು ಎಂದ ಸಚಿವರು, ರಸ್ತೆ ಸಾರಿಗೆ ಸಂಸ್ಥೆ ಹೊಸತಾಗಿ ಮೂರೂವರೆ ಸಾವಿರ ಬಸ್ಸುಗಳನ್ನು ಖರೀದಿಸಲಿದೆ ಎಂದರು.
ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳ ಪ್ರಯಾಣ ದರ ಏರಿಕೆ ನಿಶ್ಚಿತ ಎಂದ ಅವರು, ಒಂದು ವೇಳೆ ನಾವು ಬಸ್ ಪ್ರಯಾಣ ದರ ಹೆಚ್ಚಳ ಮಾಡದಿದ್ದರೆ ಸರ್ಕಾರದಿಂದ ಅನುದಾನ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯಾದ್ಯಂತ ಇರುವ ಸಾರಿಗೆ ಇಲಾಖೆ ಚೆಕ್ ಪೋಸ್ಟ್ಗಳು ಪರೋಕ್ಷವಾಗಿ ಮಾಫಿಯಾ ನಿಯಂತ್ರಣದಲ್ಲಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇದನ್ನು ತಡೆಗಟ್ಟಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಸದ್ಯದ ಸ್ಥಿತಿಯಲ್ಲಿ 750 ಆರ್.ಟಿ.ಓ ಪೋಸ್ಟುಗಳಿದ್ದರೂ 400 ಮಂದಿಯಷ್ಟೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಉಳಿದ ಪೋಸ್ಟುಗಳನ್ನು ಸಾರಿಗೆ ಸಂಸ್ಥೆಯವತಿಯಿಂದಲೇ ಭರ್ತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಹೇಳಿದರು
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.