ಬೆಂಗಳೂರು: ಜೈಲಿನಲ್ಲಿರುವ ಸ್ನೇಹಿತರಿಗೆ ಮಾದಕ ವಸ್ತು ಸರಬರಾಜು ಮಾಡಲು ಯತ್ನಿಸಿದ ಇಬ್ಬರು ಯುವತಿಯರನ್ನ ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಚಾಮರಾಜಪೇಟೆ ಮೂಲದ ಸಂಗೀತಾ ಅಲ್ಫೋನ್ಸ್ ಮತ್ತು ಛಾಯಾ ಎಂದು ಗುರುತಿಸಲಾಗಿದೆ.
ಜೈಲಿನಲ್ಲಿರುವ ಸ್ನೇಹಿತರಾದ ಲೋಹಿತ್ ಹಾಗೂ ಕಾಳಪ್ಪ ಎಂಬುವವರನ್ನು ಜುಲೈ 12ರಂದು ಭೇಟಿಯಾಗಲು ಬಂದಿದ್ದರು. ಸಂಗೀತಾ ಹಾಗೂ ಛಾಯಾರನ್ನ ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ಇಬ್ಬರೂ ಸಹ ಗುಪ್ತಾಂಗದಲ್ಲಿ ಏನನ್ನೋ ಅಡಗಿಸಿಟ್ಟಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಚಿಕ್ಕಪ್ಪನ ಕೊಲೆ ಮಾಡಿ ಅಜ್ಞಾತ ಸ್ಥಳದಲ್ಲಿದ್ದುಕೊಂಡು ವಿಡಿಯೋ ಹರಿಬಿಟ್ಟ ಆರೋಪಿ
ತಕ್ಷಣಾ ಭದ್ರತಾ ಸಿಬ್ಬಂದಿ ಪರಿಶೀಲಿಸಿ, 220 ಗ್ರಾಂ ಹ್ಯಾಶ್ ಆಯಿಲ್ನನ್ನ ಕೊಬ್ಬರಿ ಎಣ್ಣೆ ಬಾಟಲಿಯಲ್ಲಿ ತುಂಬಿಸಿ ತಂದಿದ್ದರೆ, ಛಾಯಾ 50 ಗ್ರಾಂ ಹ್ಯಾಶ್ ಆಯಿಲ್ನನ್ನ ಸೆಲೋ ಟೇಪಿನಿಂದ ಸುತ್ತಿ ಅಡಗಿಸಿಟ್ಟುಕೊಂಡಿರುವುದು ಪತ್ತೆಯಾಗಿದೆ. ಇಬ್ಬರನ್ನೂ ವಶಕ್ಕೆ ಪಡೆದಿರುವ ಜೈಲು ಸಿಬ್ಬಂದಿ ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.