ಬೆಂಗಳೂರು : ಬ್ಯಾಂಕ್ ಸಿಬ್ಬಂದಿಯಂತೆ ಎಟಿಎಂ ಬಳಿ ಕಾದು ಕುಳಿತು ಸಾರ್ವಜನಿಕರ ಡೆಬಿಟ್ ಕಾರ್ಡ್ ಬದಲಾಯಿಸಿ ಹಣ ಲಪಟಾಯಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದರು. ಆರೋಪಿ ಬಂಧಿಸಲು ಸಿಸಿಟಿವಿ ದೃಶ್ಯ ಸಹಾಯವಾಗಿತ್ತು.
ನಗರದ ಎಟಿಎಂ ಹಾಗೂ ಮೊಬೈಲ್ ಶಾಪ್ಗಳಿಗೆ ತೆರಳಿದ್ದ ಆರೊಪಿಯ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಪೊಲೀಸರು ಈ ದೃಶ್ಯ ಬಳಸಿ ಆರೋಪಿಯನ್ನು ಬಂಧಿಸಿದ್ದರು.
ಆರೋಪಿ ಅರುಣ್ ಎಟಿಎಂ ಬಳಿ ಬ್ಯಾಂಕ್ ಸಿಬ್ಬಂದಿಯಂತೆ ಕಾದು ಕುಳಿತು, ಸಹಾಯ ಮಾಡುವ ಸೋಗಿನಲ್ಲಿ ಸದ್ದಿಲ್ಲದೇ ಪಾಸ್ವರ್ಡ್ ತಿಳಿದುಕೊಳ್ಳುತ್ತಿದ್ದ. ಬಳಿಕ ಸದ್ದಿಲ್ಲದೇ ಡೆಬಿಟ್ ಕಾರ್ಡ್ ಎಗರಿಸುತ್ತಿದ್ದ. ಈತನ ಮೇಲೆ 2017ರಲ್ಲಿ ಶಿರಾ, 2019ರಲ್ಲಿ ತುಮಕೂರು ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿ ಆರೋಪಿಯಿಂದ 1.6 ಲಕ್ಷ ರೂ.ಮೌಲ್ಯದ ಎರಡು ಮೊಬೈಲ್, ಚಿನ್ನಾಭರಣ, 1.13 ಲಕ್ಷ ನಗದು ಜಪ್ತಿ ಮಾಡಿದ್ದರು.
ಇದನ್ನೂ ಓದಿ: ಡೆಬಿಟ್ ಕಾರ್ಡ್ ಬದಲಾಯಿಸಿ ಹಣ ಡ್ರಾ ಮಾಡಿ ವಂಚಿಸುತ್ತಿದ್ದ ಆರೋಪಿಯ ಬಂಧನ