ಬೆಂಗಳೂರು: ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗವಾದ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಿದ್ದಾರೆ. ಇದು ಭಾರತದ ಘನತೆ, ಕೀರ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಸಿಎಂ ಯಡಿಯೂರಪ್ಪ ಬಣ್ಣಿಸಿದ್ದಾರೆ.
ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವ ಈ ಸಮಯದಲ್ಲಿ ಈ ಸುರಂಗ ಮಾರ್ಗ ಭಾರತೀಯ ಸೇನೆಗೆ ಸಹಾಯ ಮಾಡಲಿದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಮನಾಲಿಯನ್ನು ಲೇಹ್‌ಗೆ ಸಂಪರ್ಕಿಸುವ 9.02 ಕಿ.ಮೀ. ಉದ್ದದ ಅಟಲ್ ಸುರಂಗ ಮಾರ್ಗವು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ. ಈ ಮಾರ್ಗ ಮನಾಲಿ-ಲೇಹ್ ನಡುವಿನ ದೂರವನ್ನು 46. ಕಿ.ಮೀ.ನಷ್ಟು ಕಡಿತಗೊಳಿಸುವ ಜತೆಗೆ, ನಾಲ್ಕರಿಂದ ಐದು ಗಂಟೆಗಳವರೆಗೆ ಪ್ರಯಾಣದ ಅವಧಿಯನ್ನು ಕಡಿತಗೊಳಿಸಲಿದೆ. ಭಾರತೀಯ ಸೇನೆಗೆ ವ್ಯೂಹಾತ್ಮಕವಾಗಿಯೂ ಅತ್ಯಂತ ಉಪಯುಕ್ತವಾಗಿರುವ ಹೆದ್ದಾರಿ ಇದಾಗಿದೆ.
-
ಅತೀ ಎತ್ತರ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿ ಉದ್ದದ "ಅಟಲ್ ಸುರಂಗ" ಮಾರ್ಗವನ್ನು ಪ್ರಧಾನಿ @narendramodi ಅವರು ಇಂದು ಲೋಕಾರ್ಪಣೆ ಮಾಡಿರುವುದು ಭಾರತದ ಘನತೆ, ಕೀರ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ @BSYBJP ಬಣ್ಣಿಸಿದ್ದಾರೆ. #AtalTunnelRohtang pic.twitter.com/0453MWZaRC
— CM of Karnataka (@CMofKarnataka) October 3, 2020 " class="align-text-top noRightClick twitterSection" data="
">ಅತೀ ಎತ್ತರ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿ ಉದ್ದದ "ಅಟಲ್ ಸುರಂಗ" ಮಾರ್ಗವನ್ನು ಪ್ರಧಾನಿ @narendramodi ಅವರು ಇಂದು ಲೋಕಾರ್ಪಣೆ ಮಾಡಿರುವುದು ಭಾರತದ ಘನತೆ, ಕೀರ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ @BSYBJP ಬಣ್ಣಿಸಿದ್ದಾರೆ. #AtalTunnelRohtang pic.twitter.com/0453MWZaRC
— CM of Karnataka (@CMofKarnataka) October 3, 2020ಅತೀ ಎತ್ತರ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿ ಉದ್ದದ "ಅಟಲ್ ಸುರಂಗ" ಮಾರ್ಗವನ್ನು ಪ್ರಧಾನಿ @narendramodi ಅವರು ಇಂದು ಲೋಕಾರ್ಪಣೆ ಮಾಡಿರುವುದು ಭಾರತದ ಘನತೆ, ಕೀರ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ @BSYBJP ಬಣ್ಣಿಸಿದ್ದಾರೆ. #AtalTunnelRohtang pic.twitter.com/0453MWZaRC
— CM of Karnataka (@CMofKarnataka) October 3, 2020
ವರ್ಷಪೂರ್ತಿ ಸಂಚಾರಕ್ಕೆ ಲಭ್ಯವಾಗಲಿರುವ ಸುರಂಗ ಮಾರ್ಗ ಸೇನೆಯ ಬಲ ಮತ್ತು ಶಕ್ತಿಯನ್ನು ಹೆಚ್ಚಿಸಲಿದ್ದು, ತನ್ಮೂಲಕ ದೇಶದ ಭದ್ರತೆಗೂ ಲಾಭದಾಯಕವಾಗಿ ಪರಿಣಮಿಸಲಿದೆ ಎಂದು ಯಡಿಯೂರಪ್ಪ ಟ್ವೀಟ್ ಮೂಲಕ ತಿಳಿಸಿದ್ದಾರೆ.