ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಯುವಕರ ಬೈಕ್ ರೇಸ್ ಆರ್ಭಟ ಜೋರಾಗಿದೆ. ರಾತ್ರಿ ವೇಳೆ ಹೆದ್ದಾರಿಗೆ ಬೈಕ್ ಇಳಿಸುವ ಪುಂಡರು, ಅಪಾಯಕಾರಿ ಬೈಕ್ ಸ್ಟಂಟ್ ಮತ್ತು ರೇಸ್ ಮಾಡುವ ಮೂಲಕ ಅಮಾಯಕ ಜೀವಗಳ ಜೊತೆ ಚೆಲ್ಲಾಟ
ವಾಡುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4ರ ನೆಲಮಂಗಲ ಮತ್ತು ತುಮಕೂರು ನಡುವಿನ ಹೆದ್ದಾರಿ ಬೈಕ್ ರೇಸ್ ಕೆಲ ಯುವಕರ ಪಾಲಿನ ರಹದಾರಿಯಾಗಿದೆ. ರಾತ್ರಿಯಾಗುತ್ತಲೇ ಬೈಕ್ ಸಮೇತರಾಗಿ ಹೆದ್ದಾರಿಗೆ ಇಳಿಯುತ್ತಾರೆ. ಯಮವೇಗದಲ್ಲಿ ಬೈಕ್ ರೇಸ್, ಜೊತೆಗೆ ಬೈಕ್ ಸ್ಟಂಟ್ ಸಹ ಮಾಡ್ತಾರೆ. ಬೈಕ್ ರೇಸ್ಗಿಳಿದು ಬಿರುಗಾಳಿಯಂತೆ ಓಡಿಸುತ್ತಾರೆ. ಜೊತೆಯಲ್ಲಿ ವ್ಹೀಲಿಂಗ್ ಸಹ ಮಾಡ್ತಾರೆ. ಈ ದೃಶ್ಯವನ್ನ ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾರೆ.
ಹೆದ್ದಾರಿಯಲ್ಲಿ ಯುವಕರ ನಡುವೆ ನಡೆಯುವ ಬೈಕ್ ರೇಸ್ ವೇಗ ನೋಡಿದ್ರೆ ಎದೆ ಝಲ್ ಅನ್ನುತ್ತೆ. ಇವರೆಲ್ಲ ಬೆಂಗಳೂರಿನ ಯುವಕರಾಗಿದ್ದು ತಮ್ಮ ಬೈಕ್ ಕ್ರೇಜ್ ಚಟಕ್ಕಾಗಿ ಅಮಾಯಕ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇದಕ್ಕೆಲ್ಲ ನಿಯಂತ್ರಣ ಹಾಕಬೇಕಿದ್ದ ಪೊಲೀಸರು ಸುಮ್ಮನಿದ್ದಾರೆ. ಪೊಲೀಸರ ನಿರ್ಲಕ್ಷ್ಯ ಮತ್ತು ಯುವಕರ ಬೈಕ್ ರೇಸ್ನಿಂದ ರೋಸಿ ಹೋಗಿರುವ ಜನ ಹಿಡಿಶಾಪ ಹಾಕುತ್ತಿದ್ದಾರೆ.