ಬೆಂಗಳೂರು: ಭಾರತ ಕೊರೊನಾ ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳಲು ಸಣ್ಣ ಹಿಡುವಳಿ ರೈತರಿಗೆ ವಾಲ್‌ಮಾರ್ಟ್ ಫೌಂಡೇಷನ್ ಇಂದು ರೈತರ ಜೀವನೋಪಾಯದ ಸುಧಾರಣೆಗೆ ಎರಡು ಹೊಸ ಅನುದಾನಗಳನ್ನು ಘೋಷಿಸಿದೆ. ಇದರಿಂದಾಗಿ ಒಟ್ಟು $4.5 ಮಿಲಿಯನ್ ಮೊತ್ತದ ಹೊಸ ಅನುದಾನ ಸಿಗಲಿದ್ದು, ಲಾಭರಹಿತ ಟಾನೇಜರ್ ಮತ್ತು ರೈತರಿಗೆ ಸುಧಾರಿತ ಫಲಿತಾಂಶ ಮತ್ತು ನ್ಯಾಯಯುತ ಮಾರುಕಟ್ಟೆ ಪ್ರವೇಶ ಪಡೆಯಲು ನೆರವಾಗುವ ಪ್ರಯತ್ನವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ.
ಎರಡು ಹೊಸ ಅನುದಾನಗಳನ್ನು ನೀಡಿ ರೈತರ ಉತ್ಪಾದಕರ ಸಂಘಗಳ (ಎಫ್‌ಪಿಓ) ಮೂಲಕ ಮಹಿಳಾ ರೈತರ ಅವಕಾಶಗಳನ್ನು ಹೆಚ್ಚಿಸುವತ್ತ ಕೇಂದ್ರೀಕರಿಸುವ ಗುರಿ ಹೊಂದಿದ್ದು, ಈ ಹೊಸ ಎರಡು ನೆರವುಗಳೊಂದಿಗೆ, ವಾಲ್‌ಮಾರ್ಟ್ ಫೌಂಡೇಷನ್ ಭಾರತದಲ್ಲಿ ಎಂಟು ಸರ್ಕಾರೇತರ ಸಂಘಟನೆಗಳೊಂದಿಗೆ (ಎನ್‌ಜಿಓ) ಒಟ್ಟು $15, ಮಿಲಿಯನ್ ಮೊತ್ತವನ್ನು ಹೂಡಿಕೆ ಮಾಡಿದರೆ. ಇಲ್ಲಿಯವರೆಗೆ ಸುಮಾರು 80 ಸಾವಿರ ರೈತರನ್ನು ಒಳಗೊಂಡಂತೆ 1,40,000ಕ್ಕಿಂತ ಹೆಚ್ಚಿನ ರೈತರ ಮೇಲೆ ಪ್ರಭಾವ ಬೀರುವಂತೆ ಕಾರ್ಯಕ್ರಮಗಳನ್ನ ವಿನ್ಯಾಸಗೊಳಿಸಿದೆ.
ಈ ಕುರಿತು ವಾಲ್‌ಮಾರ್ಟ್ ಫೌಂಡೇಷನ್ ನ ಅಧ್ಯಕ್ಷರು ಮಾತನಾಡಿ "ಜಾಗತಿಕ ಕೋವಿಡ್-19 ಸಾಂಕ್ರಾಮಿಕ ರೋಗವು ಭಾರತದ ರೈತನ ಮೇಲೆ ಒತ್ತಡವನ್ನು ಹೆಚ್ಚಿಸಿದೆ, ವಿಶೇಷವಾಗಿ ಮಹಿಳಾ ರೈತರು ಮನೆಯಲ್ಲಿ ಹೆಚ್ಚುವರಿ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವಂತಾಗಿದ್ದು, ಅವರ ಆದಾಯವು ಕಡಿಮೆಯಾಗಿದೆ. ಹೀಗಾಗಿ ನಾವು ವಾಲ್‌ಮಾರ್ಟ್ ಫೌಂಡೇಶನ್‌ನಲ್ಲಿ ಸುಸ್ಥಿರತೆಯನ್ನು ಹೆಚ್ಚಿಸಲು ಸಹಾಯ ಮಾಡುವತ್ತ ಗಮನ ಹರಿಸಿದ್ದೇವೆ ಎಂದಿದ್ದಾರೆ.
ಪ್ಲಿಪ್‌ಕಾರ್ಟ್ ಗ್ರೂಪ್ ಸಿಇಓ ಮತ್ತು ವಾಲ್‌ಮಾರ್ಟ್ ಫೌಂಡೇಷನ್ ಬೋರ್ಡ್ ಆಫ್ ಡೈರೆಕ್ಟರ್‌ನ ಸದಸ್ಯರಾದ ಕಲ್ಯಾಣ್ ಕೃಷ್ಣಮೂರ್ತಿ, ಭಾರತದ ರೈತರ ಉತ್ಪಾದಕತೆ ಮತ್ತು ಇಳುವರಿಯನ್ನು ಸುಧಾರಿಸಲು, ಅಮೂಲ್ಯವಾದ ಮಾರುಕಟ್ಟೆಯನ್ನು ಲಭ್ಯಗೊಳಿಸಲು ಮತ್ತು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕ ಪೂರೈಕೆ ಭಾಗವಾಗಿ ಯಶಸ್ವಿಯಾಗಲು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯ ಮಹತ್ವವಿದೆ. ರೈತರನ್ನು ಸಬಲೀಕರಣಗೊಳಿಸುವ ಮತ್ತು ಅವರನ್ನು ಡಿಜಿಟಲ್ ಯುಗಕ್ಕೆ ತರುವ ಪ್ರತಿಷ್ಠಾನದ ಕಾರ್ಯತಂತ್ರಕ್ಕೆ ಎಫ್‌ಪಿಒಗಳು ಪ್ರಮುಖ ಮಾರ್ಗವಾಗಿದೆ ಎಂದಿದ್ದಾರೆ.
ತಮ್ಮ ಅನುದಾನದ ಮೂಲಕ, ವಾಲ್‌ಮಾರ್ಟ್ ಫೌಂಡೇಶನ್, ಎಫ್‌ಪಿಒಗಳಿಗೆ ಸುಸ್ಥಿರ ಕೃಷಿ ಪದ್ಧತಿಗಳ ಜ್ಞಾನವನ್ನು ಅಭಿವೃದ್ಧಿಪಡಿಸುವುದು, ಪ್ರಾಥಮಿಕ ಕೃಷಿ ಸರಕುಗಳ ಮೌಲ್ಯ ಹೆಚ್ಚಳ ಮತ್ತು ಹಣಕಾಸು ಮತ್ತು ಮಾರುಕಟ್ಟೆಗಳ ಲಭ್ಯತೆಯನ್ನು ಸುಧಾರಿಸುವುದಾಗಿದೆ.
ವಾಲ್‌ಮಾರ್ಟ್ ಪ್ರತಿಷ್ಠಾನದ ಬೆಂಬಲದೊಂದಿಗೆ, ರೈತರಿಗೆ ಆಹಾರ ಮತ್ತು ನೈರ್ಮಲ್ಯ ಸರಬರಾಜುಗಳ ತುರ್ತು ಅಗತ್ಯಗಳನ್ನು ಪೂರೈಸಲು, ಸುರಕ್ಷಿತ ಮಾರಾಟ ಮಾರ್ಗಗಳನ್ನು ಆಯೋಜಿಸಲು ಮತ್ತು ಕೃಷಿ ವೈವಿಧ್ಯತೆ ಮತ್ತು ಹವಾಮಾನ ಸ್ಮಾರ್ಟ್ ಉತ್ಪಾದನಾ ಅಭ್ಯಾಸಗಳನ್ನು ಉತ್ತೇಜಿಸುವ ತರಬೇತಿ ಕಾರ್ಯಕ್ರಮಗಳು ಮತ್ತು ಉಪ ಕ್ರಮಗಳೊಂದಿಗೆ ಮುಂದುವರಿಯಲು ಸಾಧ್ಯವಾಗಿದೆ.
ಮಹಿಳಾ ರೈತರನ್ನು ಬೆಂಬಲಿಸಲು ಹೊಸ ಅನುದಾನ: ವಾಲ್‌ಮಾರ್ಟ್ ಫೌಂಡೇಶನ್ ಅನುದಾನದ ಇತ್ತೀಚಿನ ಹಂತದಲ್ಲಿ, ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆ ತಾನಾಗಲ್ ತನ್ನ ಯಶಸ್ವಿ ಫಾರ್ಮರ್ ಮಾರುಕಟ್ಟೆ ಸಿದ್ಧತೆ ಕಾರ್ಯಕ್ರಮವನ್ನು ವಿಸ್ತರಿಸಲು ಮತ್ತು ಆಂಧ್ರಪ್ರದೇಶದ ರೈತರಿಗೆ ಹೆಚ್ಚಿನ ಜ್ಞಾನ, ಸಂಪನ್ಮೂಲಗಳನ್ನು ತಲುಪಲು ಸಹಾಯ ಮಾಡಲು 6 2.6 ಮಿಲಿಯನ್‌ಗಿಂತ ಹೆಚ್ಚಿನ ಹಣ ಪಡೆಯಲಿದೆ. ಹಾಗೆಯೇ ಕಾರ್ಯಕ್ರಮ 2ನೇ ಹಂತದ 13 ಎಫ್‌ಪಿಒಗಳ ಸುಸ್ಥಿರತೆ ಬಲಪಡಿಸುವತ್ತ ಗಮನ ಹರಿಸುತ್ತದೆ. ಅವುಗಳಲ್ಲಿ 7 ಕಾರ್ಯಕ್ರಮಗಳು ಹೊಸದಾಗಿದೆ. 5,600 ಕ್ಕೂ ಹೆಚ್ಚು ಮಹಿಳಾ ರೈತರು ಸೇರಿದಂತೆ 15,000 ಕ್ಕೂ ಹೆಚ್ಚು ರೈತರಿಗೆ ಸಹಾಯ ಮಾಡುವ ಜೊತೆಗೆ ಅವರ ಉತ್ಪಾದಕತೆ ಮತ್ತು ಲಾಭದಾಯಕತೆಯ ನ್ನು ಹೆಚ್ಚಿಸುತ್ತದೆ.