ETV Bharat / state

ಶಿವಮೊಗ್ಗ, ಚಿಕ್ಕಬಳ್ಳಾಪುರದಲ್ಲಿ ಸ್ಫೋಟ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿದ್ದರಾಮಯ್ಯ ಆಗ್ರಹ

ಹುಣಸೋಡಿನಲ್ಲಿ ಜಿಲೆಟಿನ್ ಸ್ಫೋಟ ಸಂಭವಿಸಿದ ಒಂದು ತಿಂಗಳ ಒಳಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ಕಲ್ಲು ಕ್ವಾರಿಯಲ್ಲಿ ಇನ್ನೊಂದು ಘಟನೆ ಸಂಭವಿಸಿ, 6 ಮಂದಿ ಬಡ ಕಾರ್ಮಿಕರು ಸಾವಿಗೀಡಾದರು. ಈ ಎಲ್ಲಾ 12 ಜನ ಕಾರ್ಮಿಕರ ಸಾವಿಗೆ ಯಾರು ಹೊಣೆ? ಇದನ್ನು ಸರ್ಕಾರದ ಬೇಜವಾಬ್ದಾರಿತನ ಅನ್ನದೆ ಇನ್ನೇನು ಹೇಳಬೇಕು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Opposition leader Siddaramaiah
ವಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Mar 18, 2021, 5:21 PM IST

ಬೆಂಗಳೂರು: ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಕ್ರಷರ್​ನಲ್ಲಿ ಸ್ಫೋಟಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಇಂದು ನಿಲುವಳಿ ಸೂಚನೆಯಡಿ ಮಾತನಾಡಿದ ಅವರು, ಜ.21ರಂದು ಶಿವಮೊಗ್ಗ ನಗರ ಸಮೀಪದ ಹುಣಸೋಡು ಎಂಬಲ್ಲಿ ಜಿಲೆಟಿನ್ ಸ್ಫೋಟಗೊಂಡು 6 ಮಂದಿ ಕಾರ್ಮಿಕರು ಸಾವಿಗೀಡಾಗಿದ್ದರು. ಈ ವಿಚಾರವನ್ನು ಹಿಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಕಲ್ಲು ಗಣಿಗಾಣಿಗಾರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದೆ. ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕಾದರೆ ಹೈಕೋರ್ಟ್​ನ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆ ಮಾಡಿ, ಅವರ ಮೂಲಕ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ

ಹುಣಸೋಡಿನ ಅಕ್ರಮ ಗಣಿಗಾರಿಕೆಯಲ್ಲಿ ರಾಜಕೀಯ ನಾಯಕರು ಶಾಮೀಲಾಗಿರುವ ಬಗ್ಗೆ ಮಾತುಗಳು ಕೇಳಿ ಬಂದಿತ್ತು. ಸಿಐಡಿ ಅಥವಾ ಹಿರಿಯ ಅಧಿಕಾರಿಗಳ ತನಿಖಾ ತಂಡ ರಚಿಸಿ ಆ ಮೂಲಕ ತನಿಖೆ ಮಾಡಿಸಿದರೆ ರಾಜಕೀಯ ನಾಯಕರು ತಮ್ಮ ಪ್ರಭಾವ ಬಳಸಿ ಸತ್ಯ ಹೊರಬರೋದಕ್ಕೆ ಬಿಡಲ್ಲ ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಅಂದು ನನ್ನ ಅಭಿಪ್ರಾಯಕ್ಕೆ ಸರ್ಕಾರ ಒಪ್ಪಿರಲಿಲ್ಲ. ರೀಜನಲ್ ಕಮಿಷನರ್ ಮೂಲಕ ತನಿಖೆ ನಡೆಸಿ, ಅವರ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ಕ್ರಮ ವಹಿಸುತ್ತೇವೆ ಎಂಬ ಭರವಸೆಯನ್ನು ಸರ್ಕಾರ ಸದನಕ್ಕೆ ನೀಡಿತ್ತು.

ಶಿವಮೊಗ್ಗದ ಹುಣಸೋಡಿನಲ್ಲಿ ಜಿಲೆಟಿನ್ ಸ್ಫೋಟ ಸಂಭವಿಸಿದ ಒಂದು ತಿಂಗಳ ಒಳಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ಎಂಬಲ್ಲಿನ ಕಲ್ಲು ಕ್ವಾರಿಯಲ್ಲಿ ಇನ್ನೊಂದು ಘಟನೆ ಸಂಭವಿಸಿ, 6 ಮಂದಿ ಬಡ ಕಾರ್ಮಿಕರು ಸಾವಿಗೀಡಾದರು. ಈ ಎಲ್ಲಾ 12 ಜನ ಕಾರ್ಮಿಕರ ಸಾವಿಗೆ ಯಾರು ಹೊಣೆ? ಇದನ್ನು ಸರ್ಕಾರದ ಬೇಜವಾಬ್ದಾರಿತನ ಅನ್ನದೆ ಇನ್ನೇನು ಹೇಳಬೇಕು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಹುಣಸೋಡಿನ ಅಕ್ರಮ ಗಣಿಗಾರಿಕೆ ಹಿಂದೆ ರಾಜಕೀಯ ನಾಯಕರ ಅಭಯ ಹಸ್ತವಿದೆ ಎಂದು ಬಿಜೆಪಿಯ ಆಯನೂರ್ ಮಂಜುನಾಥ್ ಅವರು ಹೇಳಿದ್ದರು. ಅದೇ ರೀತಿ ಹಿರೇನಾಗವಲ್ಲಿಯ ಅಕ್ರಮ ಗಣಿಗಾರಿಕೆಯಲ್ಲೂ ನಾಗರಾಜ ಎಂಬ ಪ್ರಭಾವಿ ರಾಜಕಾರಣಿ ಶಾಮೀಲಾಗಿದ್ದರು. ಆತನನ್ನು ಸ್ಥಳೀಯ ಜನ ಗುಡಿಬಂಡೆ ಬಿಜೆಪಿ ನಾಗರಾಜ್ ಅಂತ ಕರೀತಾರೆ. ಈ ಎರಡೂ ಘಟನೆಗಳಿಂದ ತಿಳಿದು ಬರುವ ಪ್ರಮುಖ ಅಂಶವೆಂದರೆ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಅಕ್ರಮ ಕಲ್ಲು ಕ್ವಾರಿಗಳ ಹಿಂದೆ ರಾಜಕೀಯ ನಾಯಕರ ಪಾಲುದಾರಿಕೆ ಇರುವುದು ಮತ್ತು ಇವುಗಳ ಬಗ್ಗೆ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿರುವುದು. ಇದಕ್ಕೆ ಸರ್ಕಾರ ಸದನದಲ್ಲಿ ಸೂಕ್ತ ಉತ್ತರ ನೀಡಬೇಕಿದೆ.

ಹಿರೇನಾಗವಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರನ್ನು ಆರೋಪಿಗಳಾಗಿ ಗುರುತಿಸಿ, ಕೆಲವರನ್ನು ಬಂಧಿಸಲಾಗಿದೆ. ಇದರಲ್ಲಿ ಸ್ಪೋಟದಲ್ಲಿ ಸತ್ತ 6 ಮಂದಿ ಕಾರ್ಮಿಕರು ಹಾಗೂ ಒಬ್ಬ ಗಾಯಾಳುವಿನ ಹೆಸರನ್ನೂ ಸೇರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಮಾತ್ರ ಅಮಾನತು ಮಾಡಿದ್ದು, ಇನ್ನುಳಿದ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗುವುದು ಯಾವಾಗ? ಎಂದು ಪ್ರಶ್ನಿಸಿದರು.

ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಶಿವಮೊಗ್ಗದ ಕಲ್ಲು ಗಣಿ ಸ್ಪೋಟದ ಮಾಡಿದ ವರದಿಯಲ್ಲಿ ಬಿಜೆಪಿಯ ನಾಯಕರೊಬ್ಬರ ಹೇಳಿಕೆಯನ್ನು ದಾಖಲಿಸಿದೆ. ಅವರ ಹೇಳಿಕೆ ಹೀಗಿದೆ..

  • "ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಅಕ್ರಮ ಕಲ್ಲು ಕ್ವಾರಿಗಳನ್ನು ನಡೆಸುತ್ತಿರುವವರು ಆಡಳಿತ ಪಕ್ಷದ ಕಡೆಯವರಾಗಿದ್ದು, ಹೀಗಾಗಿ ಸರ್ಕಾರ ಹುಣಸೋಡು ಗಣಿ ಸ್ಪೋಟದ ಅಪರಾಧಿಗಳ ರಕ್ಷಣೆಗೆ ನಿಂತಿದೆ".
  • "ಜಿಲ್ಲೆಯಲ್ಲಿ ಅಕ್ರಮ ಕಲ್ಲು ಕ್ವಾರಿಗಳ ಮಾಲೀಕರ ಸಂಘಟನೆ ಇದ್ದು, ಬಿಜೆಪಿಯ ಹಿರಿಯ ನಾಯಕರೊಬ್ಬರು ಸಂಘಟನೆಯ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ವರೆಗೆ ಸಾಧ್ಯವಾಗಿಲ್ಲ. ಅಕ್ರಮ ಕಲ್ಲು ಕ್ವಾರಿಗಳನ್ನು ಮುಚ್ಚಲಾಗಿದೆಯಾದರೂ, ಘಟನೆಗೆ ಕಾರಣರಾದವರ ಮೇಲೆ ಯಾವ ಕ್ರಮವನ್ನು ಇಲಾಖೆ ಈ ವರೆಗೆ ತೆಗೆದುಕೊಂಡಿಲ್ಲ" ಎಂದಿದ್ದಾರೆ.

ನನ್ನ ಪ್ರಕಾರ, ಶಿವಮೊಗ್ಗದಲ್ಲಿ ಸ್ಪೋಟ ಸಂಭವಿಸಿದಾಗಲೇ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಹಿರೇನಾಗವಲ್ಲಿಯಲ್ಲಿ ಇನ್ನೊಂದು ಸ್ಪೋಟ ಸಂಭವಿಸಿ, ಅಮಾಯಕ ಕಾರ್ಮಿಕರು ಸಾಯುತ್ತಿರಲಿಲ್ಲ. ಈ ಎರಡೂ ಘಟನೆಗಳಿಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ನೇರ ಕಾರಣ ಎಂದು ಸಿದ್ದರಾಮಯ್ಯ ದೂರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.