ETV Bharat / state

ವಿಧಾನಸಭೆ ಚುನಾವಣೆ : ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ - Electoral officers are all ready for voting

ಬೆಳಗ್ಗೆಯಿಂದಲೇ ಚುನಾವಣೆ ತಯಾರಿ ನಡೆಯುತ್ತಿದ್ದು, ಮಸ್ಟರಿಂಗ್ ಸೆಂಟರ್​ನಲ್ಲಿ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ.

ವಿಧಾನಸಭೆ ಚುನಾವಣೆ
ವಿಧಾನಸಭೆ ಚುನಾವಣೆ
author img

By

Published : May 9, 2023, 3:34 PM IST

ಬೆಂಗಳೂರು : ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮತದಾನಕ್ಕೆ ಚುನಾವಣಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8,802 ಮತಗಟ್ಟೆಗಳಿಗೆ ತೆರಳಲು ಸಿಬ್ಬಂದಿ ತಯಾರಾಗಿದ್ದು, ನಗರದಲ್ಲಿ 42 ಸಾವಿರ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ.

ಬೆಳಗ್ಗೆಯಿಂದಲೇ ಚುನಾವಣೆ ತಯಾರಿ ನಡೆಯುತ್ತಿದ್ದು, ಮಸ್ಟರಿಂಗ್ ಸೆಂಟರ್​ನಲ್ಲಿ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ. ನಿಯೋಜಿತ ಸಿಬ್ಬಂದಿ ಆಯಾ ಮಸ್ಟರಿಂಗ್ ಸೆಂಟರ್ ಗಳಲ್ಲಿ ಇವಿಎಂ ಪಡೆದು ಇಂದು ಸಂಜೆ ವೇಳೆಗೆ ಮತಗಟ್ಟೆಗಳಿಗೆ ತೆರಳುತ್ತಾರೆ. ಈಗಾಗಲೇ ಮಸ್ಟರಿಂಗ್ ಸೆಂಟರ್​ಗಳಲ್ಲಿ ಬಸ್​ಗಳು ಸಿದ್ದವಾಗಿ ನಿಂತಿದ್ದು, ಒಂದು ಬಸ್​ನಲ್ಲಿ ಐದರಿಂದ ಆರು ಮತಗಟ್ಟೆಗಳಿಗೆ ಸಂಬಂಧಿಸಿದ ಸಿಬ್ಬಂದಿಯನ್ನು ಡ್ರಾಪ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ನಾಳೆ ಬಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ.

ಇವಿಎಂಗಳಲ್ಲಿ ದೋಷ ಕಂಡು ಬಂದರೆ ತಕ್ಷಣವೇ ಸರಿಪಡಿಸಲು ಸೆಕ್ಟರ್ ಆಫೀಸರ್ ಗಳನ್ನು ನಿಯೋಜನೆ ಮಾಡಲಾಗಿದೆ. ಮೂವತ್ತು ನಿಮಿಷಗಳ ಸರಿ ಮಾಡುವಂತಹ ಕೆಲಸ ಮಾಡಲಾಗುವುದು ಎಂದು ಬೆಂಗಳೂರು ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಕ್ಯೂ ಆ್ಯಪ್ ಮೂಲಕ ಮತದಾನಕ್ಕೆ ಸಮಯ ನಿಗದಿ ಪಡಿಸಿಕೊಳ್ಳಬಹುದು. ಸುಮಾರು 600 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ 15 ರಿಂದ 20 ನಿಮಿಷಕ್ಕೆ ಕ್ಯೂ ಆ್ಯಪ್ ಅಪ್ ಡೇಟ್ ಆಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಮಹಿಳಾ ಮಾದರಿ ಮತಗಟ್ಟೆಗಳಿವೆ. ಅದೇ ರೀತಿ ಥೀಮ್ ಬೇಸ್ಡ್ ಮತಗಟ್ಟೆಗಳನ್ನು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪಿಂಕ್ ಬೂತ್ ಸ್ಥಾಪನೆ : ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಪಿಂಕ್ ಬೂತ್ ನಂತೆ ಒಟ್ಟು ಮಹಾನಗರ ವ್ಯಾಪ್ತಿಯಲ್ಲಿ 140 ಪಿಂಕ್ ಬೂತ್ ಗಳನ್ನು ಸ್ಥಾಪನೆ ಮಾಡಲಾಗಿದೆ. ಮಹಿಳೆಯರು ಹೆಚ್ಚಾಗಿರುವ ವಾರ್ಡ್​ಗಳಲ್ಲಿ ಪಿಂಕ್ ಬೂತ್ ಗಳನ್ನು ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಮಸ್ಟರಿಂಗ್ ಕಾರ್ಯ ಆರಂಭವಾಗಿದ್ದು, ಮಸ್ಟರಿಂಗ್ ಸೆಂಟರ್ ಗಳಲ್ಲೇ ಇವಿಎಂ ಗಳನ್ನು ಸ್ಟ್ರಾಂಗ್ ರೂಂನಲ್ಲಿ ಬಿಗಿ ಭದ್ರತೆಯೊಂದಿಗೆ ಇರಿಸಲಾಗಿದೆ.

ಥೀಮ್ ಬೇಸ್ಡ್ ಮತಗಟ್ಟೆ ಎಲ್ಲೆಲ್ಲಿ : ಬೆಂಗಳೂರಿನಲ್ಲಿ ಒಟ್ಟು 264 ಥೀಮ್ ಬೇಸ್ಡ್ ಮತಗಟ್ಟೆಗಳನ್ನು ತೆರೆಯಲಾಗಿದೆ. ಬೆಂಗಳೂರು ಕೇಂದ್ರದಲ್ಲಿ 68, ಬೆಂಗಳೂರು ಉತ್ತರದಲ್ಲಿ 62, ಬೆಂಗಳೂರು ದಕ್ಷಿಣದಲ್ಲಿ 64, ಬೆಂಗಳೂರು ನಗರದಲ್ಲಿ 70 ಥೀಮ್ ಬೇಸ್ಡ್ ಮತಗಟ್ಟೆಗಳಿವೆ. 140 ಸಖಿ ಮತಗಟ್ಟೆಗಳೂ, 24 ಯುವ ಮತಗಟ್ಟೆಗಳು, ವಿಕಲಚೇತನರಿಗಾಗಿ 36, ನಿವೃತ್ತ ಸೇನಾ ಸಿಬ್ಬಗಂದಿಗೆ 5, ಹಸಿರು ಮತ್ತು ಪರಿಸರ 12, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ 5, ಎರಡು ಕ್ರೀಡಾ ಮತಟ್ಟೆ ಹಾಗೂ ತೃತೀಯ ಲಿಂಗಿಗಳಿಗೆ ಒಂದು ವಿಶೇಷ ಮತಗಟ್ಟೆಗಳನ್ನು ತೆರೆಯಲಾಗಿದೆ.

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ 7916 ಮತಗಟ್ಟೆಗಳಲ್ಲಿ 1907 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. ಇಂತಹ ಮತಗಟ್ಟೆಗಳ ಮೇಲೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಯಾವುದೇ ಅಹಿತರಕ ಘಟನೆಗಳು ನಡೆಯದಂತೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇನ್ನು 6009 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಿದ್ದು, ಅದಕ್ಕೆ ತಕ್ಕಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಒಟ್ಟು 2509 ಮತಗಟ್ಟೆ ಕೇಂದ್ರಗಳಿದ್ದು, ಇದರಲ್ಲಿ 397 ಸೆಕ್ಟರ್ ಮೊಬೈಲ್, 103 ಸೂಪರ್ವೈಸರಿ ಹಾಗೂ 26 ಸಬ್ ಡಿವಿಷನ್ ಮೊಬೈಲ್ ಕೇಂದ್ರಗಳನ್ನಾಗಿ ವಿಂಗಡಿಸಲಾಗಿದೆ. ನಗರದಲ್ಲಿ ಗೃಹರಕ್ಷಕ ದಳ ಸೇರಿದಂತೆ ಸುಮಾರು 15 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಮತದಾನದ ಭದ್ರತೆಗಾಗಿ ನಿಯೋಜಿಸಲಾಗಿದೆ. ಎಂಟು ವಿಭಾಗಗಳಲ್ಲಿ 123 ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. 131 ಫ್ಲೈಯಿಂಗ್ ಸ್ಕ್ವಾಡ್ ಗಳು ಕಾರ್ಯಾಚರಣೆ ನಡೆಸುತ್ತಿವೆ. ಇಂದು ಸಂಜೆ 6 ಗಂಟೆಯಿಂದ ನಾಳೆ ಮಧ್ಯರಾತ್ರಿ ವರೆಗೆ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಇದನ್ನೂ ಓದಿ : ಮತದಾರರ ಸೆಳೆಯಲು ಸಖಿ, ಲಂಬಾಣಿ ಸಂಸ್ಕೃತಿ ಬಿಂಬಿಸುವ ಮತಗಟ್ಟೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.