ETV Bharat / state

ವಿಧಾನಸಭಾ ಚುನಾವಣೆ ಹಿನ್ನೆಲೆ: ನೂತನ ಪದಾಧಿಕಾರಿಗಳ ಪಟ್ಟಿ ಘೋಷಿಸಿದ ಎಎಪಿ - ರಾಜ್ಯ ಆಮ್ ಆದ್ಮಿ ಪಾರ್ಟಿಯ ನೂತನ ಘಟಕ

ಆಮ್ ಆದ್ಮಿ ಪಕ್ಷದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು. ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷಕ್ಕೆ ಅಭ್ಯರ್ಥಿಗಳು ಸಿಕ್ಕಿದ್ದಾರೆ ಎಂದು ಅವರು ತಿಳಿಸಿದರು.

ವಿಧಾನಸಭಾ ಚುನಾವಣೆ ಹಿನ್ನೆಲೆ: ನೂತನ ಪದಾಧಿಕಾರಿಗಳ ಪಟ್ಟಿ ಘೋಷಿಸಿದ ಎಎಪಿ
assembly-election-background-aap-announced-the-list-of-new-office-bearers
author img

By

Published : Jan 23, 2023, 5:25 PM IST

ಬೆಂಗಳೂರು: ರಾಜ್ಯ ಆಮ್ ಆದ್ಮಿ ಪಾರ್ಟಿಯ ನೂತನ ಘಟಕ ಹಾಗೂ ಪಕ್ಷದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳ ಪಟ್ಟಿಯನ್ನು ಆಮ್‌ ಆದ್ಮಿ ಪಾರ್ಟಿಯ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆ ಘೋಷಿಸಿದರು. ಇದು ಪದಾಧಿಕಾರಿಗಳ ಮೊದಲ ಪಟ್ಟಿಯಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಪಟ್ಟಿಗಳನ್ನು ನಿರೀಕ್ಷಿಸಬಹುದು ಎಂದು ಅವರು ಹೇಳಿದರು.

ಕರ್ನಾಟಕದ ಘಟಕವನ್ನು ವಿಸರ್ಜಿಸಿದ್ದ ಆಮ್‌ ಆದ್ಮಿ ಪಾರ್ಟಿಯು ಹೊಸ ಪದಾಧಿಕಾರಿಗಳನ್ನು ಒಳಗೊಂಡ ನೂತನ ಸಂಘಟನಾ ಘಟಕವನ್ನು ಸೋಮವಾರ ಘೋಷಿಸಿತು. ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆ, ಕಳೆದ ವಾರ ಕರ್ನಾಟಕದಲ್ಲಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಹಾಗೂ ಜಿಲ್ಲಾ ಘಟಕಗಳನ್ನು ವಿಸರ್ಜನೆ ಮಾಡಲಾಗಿತ್ತು.

ಗ್ರಾಮ ಸಂಪರ್ಕ ಅಭಿಯಾನದಿಂದಾಗಿ ಆಮ್‌ ಆದ್ಮಿ ಪಾರ್ಟಿಗೆ ಕನ್ನಡಿಗರಿಂದ ಅಭೂತಪೂರ್ವ ಬೆಂಬಲ ದೊರೆತಿದ್ದು, ರಾಜ್ಯಾದ್ಯಂತ ಸಾವಿರಾರು ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು ಹಾಗೂ ರಾಜಕೀಯ ಹೋರಾಟಗಾರರು ಸಿಕ್ಕಿದ್ದಾರೆ. ಇದರ ಪರಿಣಾಮವಾಗಿ, ನಾವು ಕರ್ನಾಟಕದ ಎಲ್ಲ ಜಿಲ್ಲೆಗಳು ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದೇವೆ. ಇವರುಗಳು ಎಲ್ಲ ಮೂರು ಸಾಂಪ್ರದಾಯಿಕ ಪಕ್ಷಗಳಿಂದ ಮೋಸ ಹೋಗಿರುವವರು ಹಾಗೂ ಬಿಜೆಪಿಯ 40 ಪರ್ಸೆಂಟ್ ಸರ್ಕಾರದಿಂದ ಬೇಸತ್ತಿರುವವರಾಗಿದ್ದಾರೆ ಎಂದು ಹೇಳಿದರು.

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮುಂತಾದ ವಿವಿಧ ರಾಜಕೀಯ ಪಕ್ಷಗಳ ಜನರು ನಮ್ಮೊಂದಿಗೆ ಕೈಜೋಡಿಸುತ್ತಿದ್ದಾರೆ. ಇವರು ಕರ್ನಾಟಕದಲ್ಲಿ ಉತ್ತಮ ಬದಲಾವಣೆ ತರಬೇಕೆಂದು ಬಯಸುವ ಉತ್ತಮ ವ್ಯಕ್ತಿಗಳಾಗಿದ್ದಾರೆ. ಕರ್ನಾಟಕವು ಎಎಪಿ ಮೇಲೆ ವಿಶ್ವಾಸವಿಟ್ಟಿದೆ ಎನ್ನುವುದನ್ನು ಇದು ಸೂಚಿಸುತ್ತಿದೆ. ಅವರ ಬೆಂಬಲದಿಂದಾಗಿ ಆಮ್‌ ಆದ್ಮಿ ಪಾರ್ಟಿಯು ವಿಜಯದತ್ತ ಸಾಗಲಿದೆ. ಇಂದು ನಾವು ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ರಚನೆ ಹಾಗೂ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳನ್ನು ಘೋಷಣೆ ಮಾಡುತ್ತಿದ್ದೇವೆ. ಈ ಘೋಷಣೆಯ ಭಾಗವಾಗಿ, ನಾವು ಪಟ್ಟಿಯ ಮೂರು ಪ್ರಮುಖ ಹುದ್ದೆಗಳನ್ನು ಹೇಳುತ್ತಿದ್ದೇವೆ. ಘೋಷಣೆಯ ಉಳಿದ ಭಾಗವಾದ ಬ್ಲಾಕ್‌ ಹಾಗೂ ಸರ್ಕಲ್‌ ಸಮಿತಿಗಳನ್ನು ಜಿಲ್ಲಾ ಮಟ್ಟದಲ್ಲಿ ಘೋಷಿಸಲಾಗುತ್ತದೆ ಎಂದು ತಿಳಿಸಿದರು.

224 ವಿಧಾನಸಭಾ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು: ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಹಲವು ಆಕಾಂಕ್ಷಿಗಳು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಕ್ಕಿದ್ದಾರೆ. ಸಾಧ್ಯವಾದಷ್ಟು ಬೇಗನೆ ರಚನೆಯನ್ನು ಜಾರಿಗೆ ತಂದು ಫೆಬ್ರವರಿ ಮೊದಲ ವಾರದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸುತ್ತೇವೆ. ಫೆಬ್ರವರಿ ಮಧ್ಯ ಭಾಗದೊಳಗೆ ಜಿಲ್ಲೆಗಳ ಹಾಗೂ ಸರ್ಕಲ್‌ಗಳ ಸಂಘಟನಾ ರಚನೆಯನ್ನು ಘೋಷಿಸುತ್ತೇವೆ. ಅದೇ ವೇಳೆಗೆ ಎಎಪಿಯು ಕರ್ನಾಟಕದ ಎಲ್ಲ 58,000 ಬೂತ್‌ಗಳನ್ನು ತಲುಪಲಿದೆ. ಬೇರೆ ಪಕ್ಷಗಳ ಸಂಘಟನೆಗಳಲ್ಲಿದ್ದು, ಅವರನ್ನು ನಂಬಿ ಮೋಸ ಹೋಗಿರುವ ಉತ್ತಮ ವ್ಯಕ್ತಿಗಳು ರಾಜ್ಯದಲ್ಲಿ ಬದಲಾವಣೆ ತರಲು ನಮ್ಮೊಂದಿಗೆ ಕೈಜೋಡಿಸಬಹುದು ಎಂದು ದಿಲೀಪ್‌ ಪಾಂಡೆ ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಎಪಿಯ ರಾಜ್ಯ ಸಂಘಟನಾ ಉಸ್ತುವಾರಿ ದಾಮೋದರನ್‌, ರಾಜ್ಯ ಸಂಘಟನಾ ಸಹ ಉಸ್ತುವಾರಿ ಉಪೇಂದ್ರ ಗಾಂವಕರ್, ಮಾಧ್ಯಮ ಮತ್ತು ಸಂವಹನಾ ವಿಭಾಗದ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ, ಮಾಧ್ಯಮ ಉಸ್ತುವಾರಿ ಜಗದೀಶ್‌ ವಿ ಸದಂ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ: ಗೋವಾ ಸರ್ಕಾರದಿಂದ ಮಹದಾಯಿ ಡಿಪಿಆರ್‌‌ ತಡೆಯುವ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.