ಬೆಂಗಳೂರು: ಕರ್ನಾಟಕದ ಜನಪ್ರಿಯ ಹಾಗೂ ನಾಗರಿಕ ಸ್ನೇಹಿ ಯೋಜನೆ 'ಕರ್ನಾಟಕ ಸಕಾಲ ಸೇವೆಗಳ ಯಶಸ್ವಿ ಅನುಷ್ಠಾನ' ಕುರಿತು ಅಧ್ಯಯನ ಮಾಡಲು ಅಸ್ಸೋಂ ಸರ್ಕಾರದ 15 ಹಿರಿಯ ಅಧಿಕಾರಿಗಳ ತಂಡ ಸಕಾಲ ಮಿಷನ್ಗೆ ಭೇಟಿ ನೀಡಿ ಅಧ್ಯಯನ ನಡೆಸಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್, ಅಸ್ಸೋಂ ಅಧಿಕಾರಿಗಳ ತಂಡಕ್ಕೆ ಸಕಾಲದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ರು. ಯೋಜನೆಯ ಮಾದರಿಯನ್ನು ಅಸ್ಸೋಂ ಆಡಳಿತ ವ್ಯವಸ್ಥೆಯಲ್ಲಿ ಅವಳವಡಿಸಬೇಕಿದ್ದು, ಕರ್ನಾಟಕ ಸರ್ಕಾರದ ಸಂಪೂರ್ಣ ಸಹಕಾರವನ್ನು ನೀಡಲಾಗುವುದು ಎಂದು ಅಧಿಕಾರಿಗಳ ಆಶ್ವಾಸನೆ ನೀಡಿದರು.
ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಹಾಗೂ ಸಕಾಲ ಸೇವೆಯ ಅಧಿಕಾರಿಗಳು ಭಾಗವಹಿಸಿದ್ದರು.