ಬೆಂಗಳೂರು: ರಾಜಧಾನಿಯಲ್ಲಿಇದೇ ಮೊದಲ ಬಾರಿಗೆ ಐಎಯು 24ಎಚ್ ಮತ್ತು ಏಷ್ಯಾ ಒಷೇನಿಯಾ ಚಾಂಪಿಯನ್ ಶಿಪ್ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದೆ. ಜುಲೈ 2 ಮತ್ತು 3 ರಂದು ಕಂಠೀರವ ಮೈದಾನದಲ್ಲಿ ಜರುಗಲಿದೆ. ಇದು ಭಾರತದಲ್ಲಿ ಆಯೋಜನೆಗೊಳ್ಳುತ್ತಿರುವ ಮೊದಲ ಅಂತಾರಾಷ್ಟ್ರೀಯ ಅಲ್ಟ್ರಾ ಓಟದ ಕೂಟವಾಗಿದೆ. ಗುಂಪು ಹಂತದ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದ್ದು, ಅರ್ಹತಾ ಸುತ್ತಿನ ಟೂರ್ನಿ ಮುಂದಿನ ವರ್ಷ ಚೈನೀಸ್ ತೈಪೆನಲ್ಲಿ ನಡೆಯಲಿವೆ.
ಕ್ರೀಡಾಕೂಟದಲ್ಲಿ ಭಾರತ ಸೇರಿದಂತೆ ಆಸ್ಟ್ರೇಲಿಯಾ, ಚೈನೀಸ್ ತೈಪೆ, ಪೊಲ್ಯಾಂಡ್, ಲೆಬನಾನ್, ಮಂಗೋಲಿಯಾ ಹಾಗೂ ಯುಕೆ ದೇಶಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಚಾಂಪಿಯನ್ಶಿಪ್ ಐಎಯು, ಎಫ್ಐ, ಎಜಿಯಸ್ ಫೆಡರಲ್ ಲೈಫ್ ಇನ್ಸುರೆನ್ಸ್ ಸಹಭಾಗಿತ್ವದಲ್ಲಿ ನಡೆಯಲಿದೆ. ಇದರ ಹಿಂದಿನ ಆವೃತ್ತಿ 2018ರಲ್ಲಿ ಚೈನೀಸ್ ತೈಪೈನಲ್ಲಿ ನಡೆದಿತ್ತು. ಭಾರತ ಪುರುಷರ ತಂಡ 645.936 ಕಿ.ಮೀ ಓಟದಲ್ಲಿ ಜಂಟಿ ಪ್ರಶಸ್ತಿ ಜಯಿಸಿತ್ತು. ಭಾರತ ತವರಿನ ಅಂಗಳದಲ್ಲಿ ಈ ಬಾರಿಯೂ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದೆ.
ಓದಿ: ಟೆಸ್ಟ್: ಭಾರತಕ್ಕೆ ಆಸರೆಯಾದ ಪಂತ್-ಜಡೇಜಾ ಜೊತೆಯಾಟ
ಭಾರತಕ್ಕೆ ಇದು ಐತಿಹಾಸಿಕ ಕ್ಷಣ: ಭಾರತಕ್ಕೆ ಇದು ಐತಿಹಾಸಿಕ ಕ್ಷಣ. ಈ ಟೂರ್ನಿಯಿಂದ ಕಿರಿಯ ಮತ್ತು ಅತ್ಯಂತ ಕ್ರಿಯಾತ್ಮಕ ಅಥ್ಲೆಟಿಕ್ ವಿಭಾಗಗಳ ಮೂಲಕ ಇದನ್ನ ಗುರುತಿಸಲು ಸಾಧ್ಯವಾಗುತ್ತದೆ ಎಂದು ಭಾರತ ಅಥ್ಲೆಟಿಕ್ ಫೆಡರೇಶನ್ ಅಧ್ಯಕ್ಷ ಅದಿಲ್ಲೆ ಸುಮರಿವಲ್ಲ ಹೇಳಿದ್ದಾರೆ.
ಹಲವು ವರ್ಷಗಳ ಕಠಿಣ ಪರಿಶ್ರಮದ ಫಲ: 38 ವರ್ಷಗಳ ಬಳಿಕ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಸುವ ಸೌಭಾಗ್ಯ ದೊರೆತಿದೆ. ಇದು ಹಲವು ವರ್ಷಗಳ ಕಠಿಣ ಪರಿಶ್ರಮದ ಫಲ. ಇದು ದೇಶದಲ್ಲಿ ಕ್ರೀಡೆಯನ್ನ ಮತ್ತಷ್ಟು ಉನ್ನತಿಕರಿಸುತ್ತದೆ ಎಂದು ಐಎಯು ಅಧ್ಯಕ್ಷ ನದೀಮ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಕ್ರೀಡಾಕೂಟದಲ್ಲಿ ಭಾರತ ತಂಡದ 12 ಓಟಗಾರರು: ಕ್ರೀಡಾಕೂಟದಲ್ಲಿ ಭಾರತ ತಂಡದ 12 ಓಟಗಾರರು ಭಾಗವಹಿಸಲಿದ್ದು, ಅಮರ್ ಸಿಂಗ್ ದೇವಂಡ ಮುನ್ನಡೆಸಲಿದ್ದಾರೆ. ಅಂತಾರಾಷ್ಟ್ರೀಯ ಓಟಗಾರರು ಹೆಚ್ಚಿನ ಭರವಸೆ ಮೂಡಿಸಿದ್ದಾರೆ. ಸ್ಟೀಫನ್ ರೆಡ್ಫರ್ನ್ (245.566 ಕಿ.ಮೀ), ಮ್ಯಾಟ್ ಗ್ರಿಗ್ಸ್ (244.087 ಕಿ.ಮೀ), ಜೋ ವಾರ್ಡ್ (242.627 ಕಿ.ಮೀ) ಮತ್ತು ಪೊಲ್ಯಾಂಡ್ನ ಟೊಮಾಸ್ಜ್ ಪಾವ್ಲೋವ್ಸ್ಕಿ (248.097 ಕಿ.ಮೀ) ಓಟದಲ್ಲಿ ಭಾಗವಹಿಸಲಿದ್ದಾರೆ.
ಕಂಠೀರವ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಆರಂಭ: 400 ಮೀ ದೂರದ ಓಟ ಶನಿವಾರ ಬೆಳಗ್ಗೆ 8 ಗಂಟೆಗೆ ಕಂಠೀರವ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಆರಂಭಗೊಳ್ಳಲಿದೆ. ಭಾನುವಾರ ಇದೇ ಟ್ರ್ಯಾಕ್ನಲ್ಲಿ ವೈಯಕ್ತಿಕ ಮತ್ತು ಗುಂಪು ಹಂತದ ಓಟದ ಸ್ಪರ್ಧೆಗಳು ನಡೆಯಲಿವೆ.