ಬೆಂಗಳೂರು: ಬೆಂಗಳೂರು ನಗರ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಜಿಪಿ ಆಯ್ಕೆಯಾಗಿದ್ದಾರೆ.
ಇಂದು ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ನಗರ ಯುವ ಜನತಾದಳ ಪದಗ್ರಹಣ ಸಮಾರಂಭ ನಡೆಯಿತು. ಈ ವೇಳೆ ಯುವ ಜನತಾದಳದ ರಾಜ್ಯಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ ಬೆಂಗಳೂರು ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಜಿಪಿಯವರನ್ನು ನೇಮಿಸಿ ಆದೇಶ ಪತ್ರವನ್ನು ನೀಡಿದರು.
![Bangalore youth JDS secretary, Bangalore youth JDS secretary select, Bangalore youth JDS secretary news, ಬೆಂಗಳೂರು ಯುವ ಜನತಾದಳ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಯುವ ಜನತಾದಳ ಪ್ರಧಾನ ಕಾರ್ಯದರ್ಶಿ ಸುದ್ದಿ, ಬೆಂಗಳೂರು ಯುವ ಜನತಾದಳ ಪ್ರಧಾನ ಕಾರ್ಯದರ್ಶಿ ಆಯ್ಕೆ,](https://etvbharatimages.akamaized.net/etvbharat/prod-images/ka-bng-3-bangalore-youth-jds-secretary-ka10012_10082020155955_1008f_1597055395_583.jpg)
ಈ ಸಂದರ್ಭದಲ್ಲಿ ಮಾತನಾಡಿದ ನರಸಿಂಹ ಮೂರ್ತಿ, ಮುಂಬರುವ ಬಿಬಿಎಂಪಿ ಚುನಾವಣೆಗೆ ಈಗಿನಿಂದಲೇ ಪಕ್ಷದ ತಯಾರಿ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯುವ ಪಡೆಯನ್ನು ಸಜ್ಜುಗೊಳಿಸಲು ಪಕ್ಷದ ಹಿರಿಯ ನಾಯಕರ ಸಲಹೆಯಂತೆ ಇಂದು ಅಶ್ವಿನ್ ಕುಮಾರ್ರನ್ನು ಆಯ್ಕೆ ಮಾಡಲಾಗಿದೆ ಎಂದರು.
![Bangalore youth JDS secretary, Bangalore youth JDS secretary select, Bangalore youth JDS secretary news, ಬೆಂಗಳೂರು ಯುವ ಜನತಾದಳ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಯುವ ಜನತಾದಳ ಪ್ರಧಾನ ಕಾರ್ಯದರ್ಶಿ ಸುದ್ದಿ, ಬೆಂಗಳೂರು ಯುವ ಜನತಾದಳ ಪ್ರಧಾನ ಕಾರ್ಯದರ್ಶಿ ಆಯ್ಕೆ,](https://etvbharatimages.akamaized.net/etvbharat/prod-images/ka-bng-3-bangalore-youth-jds-secretary-ka10012_10082020155955_1008f_1597055395_708.jpg)
ಪಕ್ಷ ಅಧಿಕಾರಕ್ಕೆ ಬರಲು ಸಂಘಟನೆ ಮಾಡುತ್ತ ಎಲ್ಲ ಯುವಕರನ್ನು ಒಗ್ಗೂಡಿಸಬೇಕಾಗಿರುವುದು ಅಶ್ವಿನ್ ಕೆಲಸವಾಗಿದೆ. ಪಕ್ಷ ಕೊಟ್ಟಿರುವ ಕೆಲಸಗಳನ್ನು ಅವರು ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.